
ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಮಂಗಳವಾರ ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರೆ ಜೆನಾ ಕೂಡಾ ಸ್ಪರ್ಧಿಸಲಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಒಟ್ಟು 32 ಮಂದಿ ಸ್ಪರ್ಧಿಸಲಿದ್ದಾರೆ. 84 ಮೀ. ದಾಖಲಿಸಿದವರು ಅಥವಾ ಅಗ್ರ-12 ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್‌ಗೆ ಪ್ರವೇಶಿಸಲಿದ್ದಾರೆ. ಕಳೆದ ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ 88.36 ಮೀಟರ್ ದೂರಕ್ಕೆ ಎಸೆದಿದ್ದು ಅವರು ಈ ಋತುವಿನ ಶ್ರೇಷ್ಠ ಪ್ರದರ್ಶನ. ಅತ್ತ ಕಿಶೋರ್ ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 87.54 ಮೀ. ದೂರ ದಾಖಲಿಸಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಆ ಬಳಿಕ 80 ಮೀ. ಗೆರೆ ದಾಟಲು ವಿಫಲರಾಗುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಹೋರಾಡಿ ಸೋತ ಲಕ್ಷ್ಯ ಸೇನ್; ಭಾರತದ ಕೈತಪ್ಪಿದ ಕಂಚು..!
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೆಕ್ ಗಣರಾಜ್ಯದ ಜಾಕುವ್ ವೆಡ್ಲೆಚ್, ಜರ್ಮನಿಯ ಜೂಲಿಯನ್ ವೆಬೆರ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್‌ಸನ್ ಪೀಟರ್ಸ್ ಅವರು ನೀರಜ್‌ರ ಪ್ರಮುಖ ಎದುರಾಗಳಿಗಳಾಗಿದ್ದು, ಪ್ರಬಲ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.
ಗಾಯದಿಂದಾಗಿ ಕ್ವಾರ್ಟರಲ್ಲೇ ಸೋತ ರೆಸ್ಲರ್ ನಿಶಾ ದಹಿಯಾ
ಭಾರತದ ತಾರಾ ಕುಸ್ತಿ ಪಟು ನಿಶಾ ದಹಿಯಾ ಮಹಿಳೆಯರ 68 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ. ಉತ್ತರ ಕೊರಿಯಾದ ಪಾಕ್ ಸೊಲ್ ಗುಮ್ ವಿರುದ್ಧ ಪಂದ್ಯದಲ್ಲಿ ಒಂದು ಹಂತದಲ್ಲಿ 8-1ರಿಂದ ನಿಶಾ ಮುಂದಿದ್ದರು. ಆದರೆ 90 ಸೆಕೆಂಡ್‌ಗಳ ಬಾಕಿ ಇರುವಾಗ ನಿಶಾ ಬಲಗೈ ಗಾಯಕ್ಕೆ ತುತ್ತಾದರು. ಇದರಿಂದ ನೋವಿ ನಿಂದ ಚೀರಾಡಿದ ಅವರು ಚಿಕಿತ್ಸೆ ಬಳಿಕ ಪಂದ್ಯ ಮುಂದುವರಿಸಿದರು. ಆದರೆ ನೋವಿನಿಂದ ಬಳಲುತ್ತಿದ್ದ ಅವರಿಗೆ ಹೆಚ್ಚಿನ ಹೋರಾಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 8-10 ಅಂತರದಲ್ಲಿ ಸೋಲನುಭವಿಸಿದರು.
ಟೀಂ ಇಂಡಿಯಾ ಪರ ಆರಂಭಿಕನಾಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಕ್ಯಾಪ್ಟನ್ ರೋಹಿತ್ ಶರ್ಮಾ..!
ಒಲಿಂಪಿಕ್ಸ್ ಸ್ವಾರಸ್ಯ
ಚೀನಾದ ಹೆ ಬಿಂಗ್ ಜಿಯೊ ವಿರುದ್ಧದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಗಾಯಗೊಂಡು ಹೊರಬಿದ್ದಿದ್ದರು. ಹೀಗಾಗಿ ಬಿಂಗ್ ಜಿಯೊ ಸುಲಭವಾಗಿ ಫೈನಲ್‌ಗೇರಿದ್ದರು. ಫೈನಲ್‌ನಲ್ಲಿ ಬಿಂಗ್ ಅವರು ದ.ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪಡೆದರು. ಆದರೆ ಕ್ಯಾರೋಲಿನಾಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಿಂಗ್ ಅವರು ಪದಕ ಸ್ವೀಕಾರದ ವೇಳೆ ಸ್ಪೇನ್‌ನ ಬಾವುಟವಿರುವ ಪಿನ್ ಪ್ರದರ್ಶಿಸಿದರು. ಸೋಲಿನಲ್ಲೂ ಸ್ನೇಹ ಮೆರೆದ ಚೀನಾ ಆಟಗಾರ್ತಿ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.