Paris Olympics 2024 Opening Ceremony: ನೀರಿನ ಮೇಲೆ ಉದ್ಘಾಟನೆ, 6 ಲಕ್ಷ ಮಂದಿ ಸಮಾರಂಭ ವೀಕ್ಷಣೆ..!

By Suvarna News  |  First Published Dec 15, 2021, 9:29 AM IST

* 2024ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಪ್ಯಾರಿಸ್ ಆತಿಥ್ಯ

* ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ನದಿಯ ನೀರಿನ ಮೇಲೆ ಉದ್ಘಾಟನಾ ಸಮಾರಂಭ

* ಏಕಕಾಲದಲ್ಲಿ 6 ಲಕ್ಷ ಮಂದಿ ಉದ್ಘಾಟನಾ ಸಮಾರಂಭ ಕಣ್ತುಂಬಿಕೊಳ್ಳಲು ಅವಕಾಶ


ಪ್ಯಾರಿಸ್(ಡಿ.15)‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ (Paris Olympics 2024) ಉದ್ಘಾಟನಾ ಸಮಾರಂಭ ವಿಶೇಷವಾಗಿ ಆಯೋಜಿಸಲು ಆಯೋಜಕರು ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೂಟದ ಆಯೋಜಕರು, ಸೀನ್‌ ನದಿಯಲ್ಲಿ ಜುಲೈ 26ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ (Olympics) ಪಾಲ್ಗೊಳ್ಳಲಿರುವ ಸುಮಾರು 200 ರಾಷ್ಟ್ರಗಳ ಕ್ರೀಡಾಪಟುಗಳು, ಅಧಿಕಾರಿಗಳು ದೋಣಿಗಳಲ್ಲಿ ಸಮಾರಂಭಕ್ಕೆ ಆಗಮಿಸಲಿದ್ದಾರೆ. ನದಿಯಲ್ಲಿ 6 ಕಿ.ಮೀ. ಪಥಸಂಚಲನ ನಡೆಯಲಿದೆ ಎಂದು ತಿಳಿಸಿದ್ದಾರೆ. 

ನದಿ ದಡದಲ್ಲಿ ಸುಮಾರು 6 ಲಕ್ಷ ಮಂದಿ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 26ರಂದು ಆರಂಭವಾಗಿ ಆಗಸ್ಟ್‌ 11ರಂದು ಮುಕ್ತಾಯವಾಗಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಮೈದಾನದಾಚೆಗೆ, ಅಂದರೆ ನದಿಯಲ್ಲಿ ನಡೆಯಲಿದ್ದು, ಸುಮಾರು  160 ಬೋಟ್‌ಗಳಲ್ಲಿ ಕ್ರೀಡಾಪಟುಗಳ ಪೆರೇಡ್ ನಡೆಯಲಿದೆ ಎನ್ನಲಾಗಿದೆ. 

Tap to resize

Latest Videos

undefined

ಪ್ಯಾರಿಸ್‌ ಒಲಿಂಪಿಕ್ಸ್‌ ಆಯೋಜಕರ ಈ ಯೋಜನೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು (International Olympic Committee) ಕಳೆದ ತಿಂಗಳಷ್ಟೇ ಒಪ್ಪಿಗೆ ನೀಡಿತ್ತು. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯೋಜನೆಯು ಅಚ್ಚುಕಟ್ಟಾಗಿ ಆಯೋಜನೆಗೊಳ್ಳಲಿದೆ ಎಂದು ಐಒಸಿ ಮುಖ್ಯಸ್ಥ ಥಾಮಸ್ ಬಾಚ್ ತಿಳಿಸಿದ್ದಾರೆ. 

ವಿಶ್ವ ಬ್ಯಾಡ್ಮಿಂಟನ್‌: ಸಿಂಧು, ಕಿದಂಬಿ, ಸೆನ್‌ 3ನೇ ಸುತ್ತಿಗೆ

ಹುಯೆಲ್ವಾ(ಸ್ಪೇನ್‌): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Badminton World Championship) ಹಾಲಿ ಚಾಂಪಿಯನ್‌ ಪಿ.ವಿ.ಸಿಂಧು(PV Sindhu), ಕಿದಂಬಿ ಶ್ರೀಕಾಂತ್‌ (Kidambi Srikanth) ಹಾಗೂ ಲಕ್ಷ್ಯ ಸೆನ್‌ (Lakshya Sen) 3ನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು, ಎರಡನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.

Los Angeles Olympics 2028: ತಾತ್ಕಾಲಿಕ ಪಟ್ಟಿಯಿಂದ ಕ್ರಿಕೆಟ್ ಔಟ್..!

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಎರಡು ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಸ್ಲೋವಾಕಿಯಾದ ಮಾರ್ಟಿನಾ ರೆಪಿಸ್ಕಾ ವಿರುದ್ಧ 21-7, 21-9 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಚೀನಾದ ಲಿ ಶಿಫೆಂಗ್‌ ವಿರುದ್ಧ 15-21, 21-18-21-17 ಅಂತರದಲ್ಲಿ ಗೆದ್ದರೆ, ಲಕ್ಷ್ಯ ಜಪಾನಿನ ಕೆಂಟ ನಿಶಿಮೊಟೊ ವಿರುದ್ಧ 22-20, 15-21, 21-18 ಗೇಮ್‌ಗಳಿಂದ ಗೆದ್ದು 3ನೇ ಸುತ್ತು ತಲುಪಿದರು. ಇನ್ನು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿಜೋಡಿ ಶುಭಾರಂಭ ಮಾಡಿದರೆ, ಮಿಶ್ರ ಡಬಲ್ಸ್‌ನಲ್ಲಿ ಸೌರಭ್‌ ಶರ್ಮಾ-ಅನುಷ್ಕಾ ಜೋಡಿ 2ನೇ ಸುತ್ತಿನಲ್ಲಿ ಸೋತು ಹೊರಬಿತ್ತು.

ಏಷ್ಯನ್‌ ಹಾಕಿ: ಭಾರತ, ಕೊರಿಯಾ ಪಂದ್ಯ ಡ್ರಾ

ಢಾಕಾ: ಮಾಜಿ ಚಾಂಪಿಯನ್‌ ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey) ಟೂರ್ನಿಯ ಆರಂಭಿಕ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಮಂಗಳವಾರ ಪಂದ್ಯದ 4ನೇ ನಿಮಿಷದಲ್ಲಿ ಲಲಿತ್‌ ಕುಮಾರ್‌ ಭಾರತದ ಪರ ಗೋಲು ಹೊಡೆದರೆ, ಬಳಿಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 2-0 ಮುನ್ನಡೆ ಒದಗಿಸಿದರು. ಆದರೆ ಬಳಿಕ ಪ್ರಾಬಲ್ಯ ಸಾಧಿಸಿದ ದಕ್ಷಿಣ ಕೊರಿಯಾ 2 ಗೋಲು ಬಾರಿಸಿ ಸಮಬಲ ಸಾಧಿಸಿತು. ಭಾರತ ತನ್ನ 2ನೇ ಪಂದ್ಯದಲ್ಲಿ ಬುಧವಾರ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
 

click me!