Prime Volleyball League : ಮೊದಲ ಆವೃತ್ತಿಗೆ ಕೊಚ್ಚಿ ಆತಿಥ್ಯ, ಬೆಂಗ್ಳೂರು ಟೀಮ್ ಹೆಸರೇನು?

By Suvarna NewsFirst Published Dec 14, 2021, 3:24 PM IST
Highlights

ವೃತ್ತಿಪರ ವಾಲಿಬಾಲ್ ಲೀಗ್ ಗೆ ಸಜ್ಜಾದ ವೇದಿಕೆ
ಕೊಚ್ಚಿಯಲ್ಲಿ ನಡೆದ ಆಟಗಾರರ ಹರಾಜು
ಕೊಚ್ಚಿಯಲ್ಲಿಯೇ ನಡೆಯಲಿದೆ ಮೊದಲ ಆವೃತ್ತಿಯ ಲೀಗ್

ಬೆಂಗಳೂರು (ಡಿ.14): ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಕಬಡ್ಡಿ ಬಳಿಕ ಒಲಿಂಪಿಕ್ ಕ್ರೀಡೆ ಎನಿಸಿರುವ ವಾಲಿಬಾಲ್ ನಲ್ಲೂ ವೃತ್ತಿಪರ ಲೀಗ್ ಇರಬೇಕಿತ್ತು ಎನ್ನುವ ಆಸೆ ಕೊನೆಗೂ ಈಡೇರುವ ಹಂತ ಬಂದಿದೆ. ಪ್ರೊ ವಾಲಿಬಾಲ್ ಲೀಗ್ ಅಕಾಲಿಕವಾಗಿ ಅಂತ್ಯಗೊಂಡ ಅಂದಾಜು ಮೂರು ವರ್ಷದ ಬಳಿಕ, ಪ್ರೈಮ್ ವಾಲಿಬಾಲ್ ಲೀಗ್ (Prime Volleyball League) ಎನ್ನುವ ಹೆಸರಿನಲ್ಲಿ ಹೊಸ ವೃತ್ತಿಪರ ಲೀಗ್ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಮೊದಲ ಆವೃತ್ತಿಗೆ ಕೇರಳ ಕೊಚ್ಚಿ ಆತಿಥ್ಯ ವಹಿಸಿಕೊಳ್ಳಲಿದೆ. ಇಂದು ಕೊಚ್ಚಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು ದೇಶ ಹಾಗೂ ವಿದೇಶದ 400ಕ್ಕೂ ಅಧಿಕ ವಾಲಿಬಾಲ್ ಆಟಗಾರರು ಹರಾಜು ಪ್ರಕ್ರಿಯೆಲ್ಲಿದ್ದರು. ಇದು ಲೀಗ್ ನ ಹೊಸ ಅವಾತರ. ಇದನ್ನು ಸಂಪೂರ್ಣವಾಗಿ ಖಾಸಗಿಯಾಗಿ ನಡೆಸುತ್ತಿದ್ದು, ಯಾರ ಮಧ್ಯಪ್ರವೇಶವೂ ಇದರಲ್ಲಿಲ್ಲ. ಹಿಂದೆ ಇದ್ದ ಲೀಗ್ ನಿಂದ ನಾವು ತುಂಬಾ ಪಾಠ ಕಲಿತಿದ್ದೇವೆ. ಎಲ್ಲಾ ಟೀಮ್ ಮಾಲೀಕರ ಷೇರುಗಳೂ ಕೂಡ ಇದರಲ್ಲಿವೆ. ಲೀಗ್ ನಿಂದ ಹೊರತಾದವರು ಲೀಗ್ ನಲ್ಲಿ ಇರೋದನ್ನು ನಾವು ಬಯಸುವುದಿಲ್ಲ ಎಂದು ಪ್ರೈಮ್ ವಾಲಿಬಾಲ್ ಲೀಗ್ ನ ಆಯೋಜಕರಾದ ಬೇಸ್ ಐನ್ ವೆಂಚರ್ಸ್ ನ (Baseline Ventures) ಮುಖ್ಯ ವ್ಯವಸ್ಥಾಪಕ ತುಹಿನ್ ಮಿಶ್ರಾ (Tuhin Mishra) ಹೇಳಿದ್ದಾರೆ.

ವಾಲಿಬಾಲ್ ಫೆಡರೇಷನ್ ಅಫ್ ಇಂಡಿಯಾ ಬಣಗಳ ತಿಕ್ಕಾಟದಿಂದಾಗಿ ಪ್ರೊ ವಾಲಿಬಾಲ್ ಲೀಗ್ ಕೇವಲ ಒಂದೇ ಆವೃತ್ತಿಗೆ ಮುಕ್ತಾಯ ಕಂಡಿತ್ತು. ಈ ಹಿನ್ನೆಲೆಯಲ್ಲಿ ಬಾರಿ ಫೆಡರೇಷನ್ ನ ಯಾವ ಒಪ್ಪಂದವೂ ಇಲ್ಲದೇ ಪ್ರೈಮ್ ವಾಲಿಬಾಲ್ ಲೀಗ್ ಆಯೋಜಿಸಲು ತೀರ್ಮಾನ ಮಾಡಲಾಗಿದೆ. ಭಾರತ ವಾಲಿಬಾಲ್ ತಂಡದ ದೊಡ್ಡ ತಾರೆಯರಾದ ಅಶ್ವಲ್ ರೈ (Ashwal Rai), ಸಿ.ಅಜಿತಾಲ್ (C. Ajithlal), ಜಿಎಸ್ ಅಖಿನ್ (G.S. Akhin), ಜೆರೋಮ್ ವಿನೀತ್ (Jerome Vinith), ದೀಪೇಶ್ ಕುಮಾರ್ ಸಿನ್ಹಾ (Deepesh Kumar Sinha,), ಎ.ಕಾರ್ತಿಕ್ (A. Karthik), ನವೀನ್ ರಾಜಾ ಜಾಕೂಬ್ (Naveen Raja Jacob)  ಹಾಗೂ ವಿನೀತ್ ಕುಮಾರ್ (Vinit Kumar)ಅವರನ್ನು ಪ್ಲಾಟಿನಂ ಕೆಟಗರಿಯ ಪ್ಲೇಯರ್ ಆಗಿ ವಿಭಾಗಿಸಲಾಗಿದ್ದರೆ, ಉಳಿದವರು ಕ್ರಮವಾಗಿ ಗೋಲ್ಡ್, ಸಿಲ್ವರ್ ಹಾಗೂ ಬ್ರೋಂಜ್ ವಿಭಾಗದಲ್ಲಿ ಬರಲಿದ್ದಾರೆ.

ಆಫ್ಘಾನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ; ತಾಲಿಬಾನ್ ಕ್ರೌರ್ಯ ಬಹಿರಂಗ ಪಡಿಸಿದ ಕೋಚ್!
ವಿದೇಶದ ಸೂಪರ್ ಸ್ಟಾರ್ ತಾರೆಯರಾದ ಅಮೆರಿಕದ ಡೇವಿಡ್ ಲೀ (David Lee), ವೆನುಜುವೇಲದ ಲೂಯಿಸ್ ಅಂಟೋನಿಯೋ ಏರಿಯಾಸ್ ಗುಜ್ ಮನ್ (Luis Antonio Arias Guzman) ಅಂತಾರಾಷ್ಟ್ರೀಯ ಆಟಗಾರರ ವಿಭಾಗದಲ್ಲಿದ್ದಾರೆ. ಪ್ರತಿ 12 ಸದಸ್ಯರ ಟೀಮ್ ಗೆ ಆಟಗಾರರನ್ನು ಖರೀದಿ ಮಾಡಲು 75 ಲಕ್ಷ ನಿಗದಿ ಮಾಡಲಾಗಿದೆ. ಇಬ್ಬರು ವಿದೇಶದ ಆಟಗಾರರನ್ನು 25 ರಿಂದ 30 ಲಕ್ಷದ ಒಳಗೆ ಅವರು ಆಯ್ಕೆ ಮಾಡಿಕೊಳ್ಳಬಹುದು, 45 ರಿಂದ 47 ಲಕ್ಷದದಲ್ಲಿ ಭಾರತದ ಪ್ಲೇಯರ್ ಗಳು ಸಿಗಲಿದ್ದಾರೆ ಎಂದು ಮಿಶ್ರಾ ಆಕ್ಷನ್ ನ ಬಗ್ಗೆ ವಿವರಣೆ ನೀಡಿದರು.

ಏಷ್ಯನ್‌ ವಾಲಿಬಾಲ್ ಚಾಂಪಿಯನ್‌ಶಿಪ್‌‌: ಭಾರತಕ್ಕೆ 9ನೇ ಸ್ಥಾನ
ಈ ಬಾರಿ ಒಟ್ಟು ಏಳು ತಂಡಗಳು ಲೀಗ್ ನಲ್ಲಿವೆ. ಕೇರಳದ ಎರಡು ತಂಡಗಳು ಕ್ಯಾಲಿಕಟ್ ಹೀರೋಸ್ (Calicut Heroes) ಹಾಗೂ ಕೊಚ್ಚಿ ಬ್ಲ್ಯೂ ಸ್ಪೈಕರ್ಸ್ (Kochi Blue Spikers) ಲೀಗ್ ನಲ್ಲಿದ್ದರೆ, ಅಹಮದಾಬಾದ್ ಡಿಫೆಂಡರ್ಸ್ (Ahmedabad Defenders), ಹೈದರಾಬಾದ್ ಬ್ಲ್ಯಾಕ್ ಹಾಕ್ಸ್ (Hyderabad Black Hawks), ಚೆನ್ನೈ ಬ್ಲಿಟ್ಜ್ (Chennai Blitz), ಬೆಂಗಳೂರು ಟಾರ್ಪಿಡೋಸ್ (Bengaluru Torpedoes) ಹಾಗೂ ಕೋಲ್ಕತ ಥಂಡರ್ ಬೋಲ್ಟ್ಸ್ (Kolkata Thunderbolts) ಲೀಗ್ ನಲ್ಲಿರುವ ಇತರ ತಂಡಗಳು. ಪಿವಿಎಲ್ ನಲ್ಲಿ ಆಡುವುದರಿಂದ ರಾಷ್ಟ್ರೀಯ ತಂಡದ ಆಟಗಾರರು ಸಮಸ್ಯೆಗೆ ಒಳಗಾಗುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

ರಾಷ್ಟ್ರೀಯ ಫೆಡರೇಷನ್ ಗಳು ಯಾವ ಪ್ಲೇಯರ್ ಗಳ ಆಡುವ ಅಧಿಕಾರವನ್ನು ಕಿತ್ತುಕೊಳ್ಳುವ ಹಾಗಿಲ್ಲ. ಇದನ್ನು ಕೋರ್ಟ್ ಕೂಡ ಹೇಳಿದೆ. ದೇಶದಲ್ಲಿ ಆಗುವ ಯಾವುದೇ ಲೀಗ್ ನಲ್ಲಿ ಪಾಲ್ಗೊಳ್ಳುವ ಪ್ಲೇಯರ್ ಗಳನ್ನು ನಾವು ತಡೆಯುವುದಿಲ್ಲ ಎಂದು ಫೆಡರೇಷನ್, ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದೆ. ಹಾಗಾಗಿ ಆಟಗಾರರು ಯಾವುದೇ ಆತಂಕವಿಲ್ಲದೆ ಲೀಗ್ ನಲ್ಲಿ ಪಾಲ್ಗೊಳ್ಳಬಹುದು ಎಂದು ಮಿಶ್ರಾ ಹೇಳಿದ್ದಾರೆ.

click me!