ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯಾಡಿದ ಸ್ವಪ್ನಿಲ್ ಕುಶಾಲೆ, ಅವರು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: 2024ರ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಸ್ವಪ್ನಿಲ್ ಕುಸಾಲೆ ಐತಿಹಾಸಿಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 3ಕ್ಕೆ ಹೆಚ್ಚಳವಾಗಿದೆ. ಈ ಎಲ್ಲಾ ಪದಕಗಳೂ ಶೂಟಿಂಗ್‌ನಲ್ಲೇ ಬಂದಿರುವುದು ವಿಶೇಷ.
ಮಹಾರಾಷ್ಟ್ರ ಮೂಲದ 28 ವರ್ಷದ ಸ್ವಪ್ನಿಲ್ ಕಳೆದ 15 ವರ್ಷಗಳಿಂದಲೂ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.ಸ್ವಪ್ನಿಲ್ 2012ರಲ್ಲೇ ಅಂತಾರಾಷ್ಟ್ರೀಯ ಶೂಟಿಂಗ್‌ಗೆ ಪಾದಾರ್ಪಣೆ ಮಾಡಿದರೂ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು 12 ವರ್ಷ ಕಾಯಬೇಕಾಯಿತು. ಅವರು 2021ರ ವಿಶ್ವಕಪ್, 2022ರ ಏಷ್ಯನ್ ಗೇಮ್ಸ್, 2024ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. 2016, 2020ರ ಒಲಿಂಪಿಕ್ ಗೇರುವ ಅವಕಾಶ ಕಳೆದುಕೊಂಡಿದ್ದ ಸ್ಟಪ್ಟಿಲ್, ಈ ಬಾರಿ ಪದಕ ಗೆಲ್ಲುತ್ತಾರೆ ಎಂದು ಊಹಿಸಿದವರು ಕಡಿಮೆ. ಆದರೆ ಅವರ ಅಭೂತಪೂರ್ವ ಪ್ರದರ್ಶನಕ್ಕೆ ಕಂಚು ಒಲಿದಿದೆ. ಸ್ವಪ್ನಿಲ್ ತಂದೆ ಹಾಗೂ ಅಣ್ಣ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ತಾಯಿ ಕಾಂಬಲ್‌ವಾಡಿ ಗ್ರಾಮ ಪಂಚಾಯ್ತಿ ಮುಖ್ಯಸ್ಥೆ.
undefined
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಪುರುಷ: 46 ಸೆಂಕೆಂಡ್‌ನಲ್ಲಿ ಪಂದ್ಯ ಮುಕ್ತಾಯ..!
ಸ್ವಪ್ನಿಲ್ ವಿಶೇಷ ದಾಖಲೆ!
ಭಾರತದ ಶೂಟರ್ ಒಬ್ಬ ಒಲಿಂಪಿಕ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದಿದ್ದು ಇದೇ ಮೊದಲು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊಯ್‌ದೀಪ್ ಕರ್ಮಕಾರ್ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದರು.
ಶೂಟಿಂಗ್‌ನಲ್ಲಿ 3 ಪದಕ: ಭಾರತದ ಶ್ರೇಷ್ಠ ಸಾಧನೆ
ಭಾರತ ಈ ಬಾರಿ ಶೂಟಿಂಗ್‌ನಲ್ಲಿ ಸಾರ್ವ ಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಕ್ರೀಡಾ ಕೂಟದಲ್ಲಿ 3 ಪದಕ ಗೆದ್ದಿದ್ದು, ಭಾರತೀಯ ಶೂಟಿಂಗ್ ಇತಿಹಾಸದಲ್ಲೇ ಇದು ಶ್ರೇಷ್ಠ ಸಾಧನೆ. 2012ರಲ್ಲಿ ಭಾರತ ಶೂಟಿಂಗ್‌ನಲ್ಲಿ 1 ಬೆಳ್ಳಿ, 1 ಕಂಚು ಗೆದ್ದಿತ್ತು. ಆ ದಾಖಲೆ ಯನ್ನು ಈ ಬಾರಿ ಪತನಗೊಂಡಿದೆ.
ಕಂಚಿನ ಪದಕ ಬೇಟೆಯಾಡಿದ ಸ್ವಪ್ನಿಲ್ ಕುಶಾಲೆ; ಭಾರತಕ್ಕೆ ಒಲಿದ ಮೂರನೇ ಒಲಿಂಪಿಕ್ ಪದಕ
ಸ್ವಪ್ಪಿಲ್‌ಗೆ ಮಹಾರಾಷ್ಟ ₹1 ಕೋಟಿ ಬಹುಮಾನ
ಒಲಿಂಪಿಕ್ಸ್ ಕಂಚು ವಿಜೇತ ಶೂಟರ್ ಸ್ವಪ್ನಲ್ ಕುಸಾಲೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ 1 ಕೋಟಿ ರು. ನಗದು ಬಹುಮಾನ ಘೋಷಿಸಿದ್ದಾರೆ. ಅಲ್ಲದೆ ಪ್ಯಾರಿಸ್‌ನಿಂದ ಮರಳಿದ ಬೆನ್ನಲ್ಲೇ ಸ್ವಪ್ನಿಲ್‌ಗೆ ಸನ್ಮಾನ ಮಾಡುವುದಾಗಿ ಶಿಂಧೆ ತಿಳಿಸಿದ್ದಾರೆ.
ಸ್ವಪ್ನಿಲ್ ಸಾಧನೆ ಕೊಂಡಾಡಿದ ರಾಷ್ಟ್ರಪತಿ, ಪ್ರಧಾನಿ ಮೋದಿ
ಸ್ವಪ್ನಿಲ್‌ಗೆ ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. 'ಸ್ವಪ್ನಿಲ್ ಸಾಧನೆಗೆ ಪ್ರತಿ ಭಾರತೀಯರೂ ಸಂಭ್ರಮಿಸುತ್ತಿದ್ದಾರೆ' ಎಂದು ಮೋದಿ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ. ರಾಷ್ಟ್ರಪತಿ ಮುರ್ಮು, ಕ್ರೀಡಾ ಸಚಿವ ಮಾಂಡವೀಯ ಸೇರಿ ಇನ್ನೂ ಅನೇಕರು ಸ್ವಪ್ನಿಲ್ ಸಾಧನೆಯನ್ನು ಕೊಂಡಾಡಿದ್ದಾರೆ.