ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿವಿ ಸಿಂಧು, ಸಾತ್ವಿಕ್-ಚಿರಾಗ್ ಜೋಡಿಯ ಹೋರಾಟ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಬುಧವಾರ ಭಾರತಕ್ಕೆ ಡಬಲ್ ಆಘಾತ ಎದುರಾಯಿತು. ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪಿ.ವಿ.ಸಿಂಧು, ಪುರುಷರ ಡಬಲ್ ಕ್ವಾರ್ಟ‌್ರಫೈನಲ್‌ನಲ್ಲಿ ಸಾಯಿರಾಜ್-ಚಿರಾಗ್ ಸಾತ್ವಿಕ್ ಸೋಲುಂಡರು. ಇದರೊಂದಿಗೆ ಭಾರತದ ಎರಡು ಪದಕ ಭರವಸೆ ಹುಸಿಯಾಯಿತು.
ಚೀನಾದ ಹೇ ಬಿಂಗ್ ಜೊ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧು, 19-21, 14-21 ನೇರ ಗೇಮ್‌ಗಳಲ್ಲಿ ಪರಾಭವ ಗೊಂಡರು. ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕದ ಪಂದ್ಯ ದಲ್ಲಿ ಬಿಂಗ್ ಜೊ ವಿರುದ್ದ ಸಿಂಧು ಗೆದ್ದಿ ದ್ದರು. ಅಲ್ಲದೇ ಸತತ 3ನೇ ಒಲಿಂಪಿಕ್ ನಲ್ಲಿ ಪದಕ ಗೆಲ್ಲುವ ಸಿಂಧು ಕನಸು ಭಗ್ನಗೊಂಡಿತು.
undefined
ಇನ್ನು ಡಬಲ್ಸ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಭಾರತದ ಕನಸು ಕೂಡ ಭಗ್ನಗೊಂಡಿದೆ. ವಿಶ್ವ ನಂ.5 ಸಾತ್ವಿಕ್ -ಚಿರಾಗ್ ಜೋಡಿ ವಿಶ್ವ ನಂ.3 ಮಲೇಷ್ಯಾದ ಆರೊನ್ ಚಿಯಾ ಸೊಹ್ ವೂಲಿ ಯಿಕ್ ವಿರುದ್ಧ 21-13, 14-21, 16-21 e ಗಳಲ್ಲಿ ವೀರೋಚಿತ ಸೋಲು ಕಂಡು ಭಾರಿ ಆಘಾತಕ್ಕೆ ಒಳಗಾಯಿತು.
ಹಾಕಿ: ಭಾರತಕ್ಕೆ ಬೆಲ್ಜಿಯಂ ವಿರುದ್ಧ 1-2ರ ಸೋಲು
ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಸೋಲುಂಡಿದೆ. ಗುರುವಾರ ನಡೆದ ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಪರಾಭವಗೊಂಡಿತು. ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಎರಡೂ ತಂಡಗಳಿಗೆ ಈ ಪಂದ್ಯ ಗುಂಪಿನಲ್ಲಿ ಸ್ಥಾನಗಳನ್ನು ನಿರ್ಧರಿಸುವ ಸಲುವಾಗಿ ಮಹತ್ವದೆನಿಸಿತ್ತು.
ಪಂದ್ಯದಲ್ಲಿ ಭಾರತ ಮೊದಲ ಗೋಲು ಬಾರಿಸಿತು. 18ನೇ ನಿಮಿಷದಲ್ಲಿ ಅಭಿಷೇಕ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ, 33ನೇ ಹಾಗೂ 44ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಭಾರತ ಗುಂಪು ಹಂತದ ತನ್ನ ಕೊನೆಯ ಪಂದ್ಯವನ್ನು ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್ ಬಾಕ್ಸ್‌ನಲ್ಲಿ ಅಂತದ್ದೇನಿದೆ?
ಕ್ವಾಟರ್‌ಗೆ ಲಕ್ಷ್ಯ ಸೇನ್ ಪ್ರವೇಶ
ಭಾರತದ ತಾರಾ ಶಟ್ಲರ್ ಲಕ್ವ ಸೇನ್ ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ವಿಶ್ವ ನಂ.13, ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ ನಡೆದ ಪ್ರಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 22 ವರ್ಷದ ಸೇನ್ 21-12, 21-6 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ವಿಶ್ವ ನಂ.22 ಸೇನ್ ಕ್ವಾರ್ಟರ್ ಫೈನಲ್‌ನಲ್ಲಿ 12ನೇ ಶ್ರೇಯಾಂಕಿತ, ಚೈನೀಸ್ ತೈಪೆಯ ಚೊಯ್ದು ಟೀನ್ ಚೆನ್ ವಿರುದ್ಧ ಸೆಣಸಲಿದ್ದಾರೆ.