ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

By Kannadaprabha News  |  First Published Feb 18, 2020, 7:33 AM IST

ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’!| ಕರಾವಳಿಯ ಜನಪ್ರಿಯ ಕ್ರೀಡೆಯಲ್ಲಿ ಸೃಷ್ಟಿಯಾಗುತ್ತಿವೆ ಹೊಸ ಹೊಸ ದಾಖಲೆಗಳು| 13.61 ಸೆಕೆಂಡಲ್ಲಿ 143 ಓಡಿದ ನಿಶಾಂತ್‌ ಶೆಟ್ಟಿ| ಶ್ರೀನಿವಾಸಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ


ಸುಭಾಶ್ಚಂದ್ರ ಎಸ್. ವಾಗ್ಳೆ

ಉಡುಪಿ[ಫೆ.18]: ಕಂಬಳ ಕ್ರೀಡೆಯಲ್ಲಿ ದಾಖಲೆಗಳ ಸುಗ್ಗಿಯಾಗುತ್ತಿದೆ. ಇತರೆ ಕ್ರೀಡೆಗಳಲ್ಲಿರುವಂತೆ, ಒಬ್ಬರ ದಾಖಲೆಯನ್ನು ಮತ್ತೊಬ್ಬರು ಮುರಿಯುತ್ತಿದ್ದಾರೆ. ಕೇವಲ 13.62 ಸೆಕೆಂಡ್‌ಗಳಲ್ಲಿ 142.5 ಮೀ. ಓಡಿದ ಶ್ರೀನಿವಾಸಗೌಡ ಕಂಬಳ ಗದ್ದೆಯ ‘ಉಸೇನ್‌ ಬೋಲ್ಟ್‌’ ಎನಿಸಿಕೊಂಡ ಬೆನ್ನಲ್ಲೇ, ಇದೀಗ ಶ್ರೀನಿವಾಸಗೌಡರ ಮಿತ್ರರೂ ಆಗಿರುವ ಮತ್ತೊಬ್ಬ ಕಂಬಳವೀರ, ಅದನ್ನೂ ಮೀರಿಸಿದ ಸಾಧನೆ ಮಾಡಿದ್ದಾರೆ.

Tap to resize

Latest Videos

"

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿ ನಿವಾಸಿ ನಿಶಾಂತ್‌ ಶೆಟ್ಟಿ ಅವರು ಕಂಬಳ ಟ್ರ್ಯಾಕ್‌ನ 143 ಮೀ. ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ. ಕಂಬಳದ ತೀರ್ಪುಗಾರರಾದ ವಿಜಯಕುಮಾರ್‌ ಕಂಗಿನಮನೆ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ದಕ್ಷಿಣ ಕನ್ನಡ ಜಿಲ್ಲೆ ವೇಣೂರಿನಲ್ಲಿ ಮೊನ್ನೆ ಭಾನುವಾರ ನಡೆದ ಕಂಬಳ ಸ್ಪರ್ಧೆಯಲ್ಲಿ 28 ವರ್ಷದ ನಿಶಾಂತ್‌ ದಾಖಲೆಯ ಓಟ ದಾಖಲಿಸಿದ್ದಾರೆ. ಇದೇ ವೇಣೂರಿನ ಕಂಬಳದ ಕರೆಯಲ್ಲಿ (ಟ್ರ್ಯಾಕ್‌) ಶ್ರೀನಿವಾಸ್‌ಗೌಡ ಸಹ ಸ್ಪರ್ಧಿಸಿದ್ದು, ಅವರು 143 ಮೀಟರ್‌ ಗುರಿಯನ್ನು 13.68 ಸೆಕೆಂಡ್‌ಗಳಲ್ಲಿ ತಲುಪಿದ್ದರು. ಶ್ರೀನಿವಾಸಗೌಡರಿಗಿಂತ 0.07 ಸೆಕೆಂಡ್‌ ವೇಗವಾಗಿ ನಿಶಾಂತ್‌ ಗುರಿ ಮುಟ್ಟಿಹೊಸ ದಾಖಲೆ ನಿರ್ಮಿಸಿದ್ದಾರೆ. ಫೆ.1ರಂದು ಐಕಳ ಎಂಬಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್‌ಗೌಡ ಅವರು 142.5 ಮೀ. ಉದ್ದದ ಟ್ರ್ಯಾಕ್‌ ಅನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ನಿಶಾಂತ್‌ ಶೆಟ್ಟಿಇದಕ್ಕಿಂತ 50 ಮೀಟರ್‌ ದೂರವನ್ನು 0.01 ಸೆಕೆಂಡ್‌ನಷ್ಟುಬೇಗ ಕ್ರಮಿಸಿ ಸಾಧನೆ ಮೆರೆದಿದ್ದಾರೆ.

ಶ್ರೀನಿವಾಸ್‌ಗಿಂತ 0.01 ಸೆಕೆಂಡ್‌ ಮುಂದೆ:

ನಿಶಾಂತ್‌ ಶೆಟ್ಟಿಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀಟರ್‌ ಓಟಕ್ಕೆ ತಾಳೆ ಹಾಕಿದರೆ ಅದು 9.51 ಸೆಕೆಂಡ್‌ ಆಗಲಿದೆ. ಶ್ರೀನಿವಾಸಗೌಡ ಗುರಿ ತಲುಪಲು ಕ್ರಮಿಸಲು ತೆಗೆದುಕೊಂಡ ಸಮಯ ತಾಳೆ ಹಾಕಿದಾಗ ಅದು 9.52 ಸೆಕೆಂಡ್‌ ಆಗಿತ್ತು. ಬೋಲ್ಟ್‌ 2009ರಲ್ಲಿ 9.58 ಸೆಕೆಂಡ್‌ನಲ್ಲಿ 100 ಮೀಟರ್‌ ದೂರವನ್ನು ಓಡಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ನಿಶಾಂತ್‌ ಅವರು, ಬೋಲ್ಟ್‌ಗಿಂತ 0.07 ಸೆಕೆಂಡ್‌ ವೇಗವಾಗಿ ಗುರಿಮುಟ್ಟಿದಂತಾಗಿದರೂ, ಕಂಬಳ ಕರೆಯ ಓಟ ಹಾಗೂ ಟ್ರ್ಯಾಕ್‌ನಲ್ಲಿ ಓಡುವ ಓಟ ಎರಡೂ ವಿಭಿನ್ನ ಎಂಬುದು ಸರ್ವವಿದಿತ.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ವೃತ್ತಿಯಲ್ಲಿ ಕೃಷಿಕರು:

ಕಳೆದ 8 ವರ್ಷಗಳಿಂದ ಕಂಬಳ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ನಿಶಾಂತ್‌ ಪಿಯುಸಿ ಓದಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ. ಅವರ ತಂದೆ ಅಚ್ಚಣ್ಣ ಶೆಟ್ಟಿಕಂಬಳದ ಕೋಣಗಳನ್ನು ಸಾಕುತ್ತಿದ್ದರು. ಆದ್ದರಿಂದ ನಿಶಾಂತ್‌ ಅವರಿಗೆ ಚಿಕ್ಕಂದಿನಲ್ಲಿಯೇ ಕೋಣಗಳ ಜತೆ ಒಡನಾಟ ಆರಂಭವಾಗಿತ್ತು. ಅಲ್ಲದೇ ಹೈಸ್ಕೂಲು, ಕಾಲೇಜು ದಿನಗಳಲ್ಲಿಯೇ ಮನೆಯ ಕೋಣಗಳನ್ನು ಓಡಿಸಿ ಅಭ್ಯಾಸ ಸಹ ಇತ್ತು.

ಕಂಬಳದಲ್ಲಿ ಕೋಣಗಳನ್ನು ಓಡಿಸಲಾರಂಭಿಸಿದ ಬಳಿಕ ಪ್ರೊ.ಗುಣಪಾಲ ಕಡಂಬ ಅವರ ನೇತೃತ್ವದ ಕಂಬಳ ಅಕಾಡೆಮಿಯಲ್ಲಿಯೂ 1 ವಾರ ಕಾಲ ತರಬೇತಿಯನ್ನೂ ಪಡೆದಿದ್ದಾರೆ. ಕಳೆದ 8 ವರ್ಷಗಳಲ್ಲಿ ನೂರಾರು ಪದಕಗಳನ್ನು ಗೆದ್ದಿದ್ದಾರೆ.

ಆರಂಭದಲ್ಲಿ ಅತ್ತೂರು ಶ್ರೀನಿವಾಸ ಕಾಮತರ ಕೋಣಗಳನ್ನು ಓಡಿಸುತ್ತಿದ್ದ ನಿಶಾಂತ್‌ ಶೆಟ್ಟಿ, ನಂತರ ಮಾಳ ಆನಂದ ಶೆಟ್ಟಿಅವರು ಕೋಣಗಳನ್ನು ಓಡಿಸಿದ್ದರು. ಇದೀಗ ಹೊಸಬೆಟ್ಟು ಗೋಪಾಲಕೃಷ್ಣ ಶೆಟ್ಟಿಅವರ ಕೋಣಗಳನ್ನು ಓಡಿಸುತ್ತಿದ್ದಾರೆ.

ಸೀನು ಮತ್ತು ನಾನು ಬ್ರದ​ರ್ಸ್

ಕಂಬಳದ ‘ಉಸೇನ್‌ ಬೋಲ್ಟ್‌’ ಎಂದೇ ಖ್ಯಾತರಾಗಿರುವ ಶ್ರೀನಿವಾಸಗೌಡ ಹಾಗೂ ನಿಶಾಂತ್‌ ಶೆಟ್ಟಿಇಬ್ಬರು ಒಳ್ಳೆಯ ಸ್ನೇಹಿತರು ಎಂದು ತಿಳಿದುಬಂದಿದೆ. ಸ್ವತಃ ನಿಶಾಂತ್‌ ಶೆಟ್ಟಿಈ ವಿಷಯವನ್ನು ತಿಳಿಸಿದ್ದಾರೆ. ‘ಸೀನು ನಾನು ಸಮ ವಯಸ್ಸಿನವರು. ಜೊತೆಯಾಗಿ ಸ್ಪರ್ಧೆ ಮಾಡುವವರು, ಸ್ಪರ್ಧೆ ಏನಿದ್ದರೂ ಕಂಬಳ ಗದ್ದೆಯಲ್ಲಿ. ಹೊರಗೆ ಅಣ್ಣತಮ್ಮಂದಿರಂತೆ ಖುಷಿಯಾಗಿದ್ದೇವೆ’ ಎಂದು ನಿಶಾಂತ್‌ ಹೇಳಿದ್ದಾರೆ. ಅಲ್ಲದೆ, ಗೆಳೆಯ ಶ್ರೀನಿವಾಸಗೌಡರ ಸಾಧನೆಯನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ಕಂಬಳಕ್ಕೂ, ಓಟಕ್ಕೂ ಬಹಳ ವ್ಯತ್ಯಾಸವಿದೆ

ಕಂಬಳ ಓಟಗಾರರಿಗೆ ಮೈದಾನದಲ್ಲಿ ಓಡಲಿಕ್ಕಾಗುವುದಿಲ್ಲ. ಯಾಕೆಂದರೆ ಕಂಬಳಗದ್ದೆಯಲ್ಲಿ ಓಡಿ ಅಭ್ಯಾಸ ಆದವರಿಗೆ ಮೈದಾನಕ್ಕೆ ಹೊಂದಿಕೊಳ್ಳುವುದು ಸಾಧ್ಯವಿಲ್ಲ. ಕಂಬಳದ ಗದ್ದೆಯಲ್ಲಿ ಓಡುವುದಕ್ಕೂ ಮೈದಾನದಲ್ಲಿ ಓಡುವುದಕ್ಕೂ ಬಹಳ ವ್ಯತ್ಯಾಸಗಳು ಇದೆ. ಆದ್ದರಿಂದ ನಾವು ಕಂಬಳದಲ್ಲಿಯೇ ಸಾಧನೆ ಮಾಡಬೇಕು.

- ಬಜಗೋಳಿ ನಿಶಾಂತ್‌ ಶೆಟ್ಟಿ, ಕಂಬಳ ಓಟಗಾರ

13.62 ಸೆಕೆಂಡ್‌: ಐಕಳದಲ್ಲಿ 142.5 ಮೀ. ಕ್ರಮಿಸಲು ಶ್ರೀನಿವಾಸ್‌ಗೌಡಗೆ ಬೇಕಾದ ಸಮಯ

13.68 ಸೆಕೆಂಡ್‌: ವೇಣೂರಲ್ಲಿ 143 ಮೀ. ಓಡಲು ಶ್ರೀನಿವಾಸ್‌ಗೌಡ ಬಳಸಿದ ಸಮಯ

ಕಂಬಳವೀರರಿಗೆ ಟ್ರೇನಿಂಗ್‌ ಹೇಗಿರುತ್ತದೆ?

click me!