ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌: ಅಭಿಷೇಕ್‌, ಪಾರುಲ್‌ಗೆ ಚಿನ್ನ

By Kannadaprabha News  |  First Published Sep 16, 2021, 11:07 AM IST

* ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ರೈಲ್ವೇಸ್‌ ಅಥ್ಲೀಟ್‌ಗಳು ಮೇಲುಗೈ

* ರೈಲ್ವೇಸ್‌ನ ಅಭಿಷೇಕ್‌ ಪೌಲ್‌ ಹಾಗೂ ಪಾರುಲ್ ಚೌಧರಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್

* ತೆಲಂಗಾಣದ ವಾರಂಗಲ್‌ನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌


ವಾರಂಗಲ್‌(ಸೆ.16): 60ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 5000 ಮೀಟರ್ ಓಟದಲ್ಲಿ ರೈಲ್ವೇಸ್‌ನ ಅಭಿಷೇಕ್‌ ಪೌಲ್‌ ಹಾಗೂ ಪಾರುಲ್ ಚೌಧರಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬುಧವಾರ ನಡೆದ ಸ್ಪರ್ಧೆಯಲ್ಲಿ ಅಭಿಷೇಕ್‌ 14:16:35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರೆ, ಧರ್ಮೇಂದರ್ ಬೆಳ್ಳಿ ಹಾಗೂ ಕಾರ್ತಿಕ್ ಕುಮಾರ್ ಕಂಚಿನ ಪದಕ ಜಯಿಸಿದರು. ಮಹಿಳೆಯರ ವಿಭಾಗದಲ್ಲಿ ಪಾರುಲ್‌ 15:59:69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಕೋಮಲ ಚಂದ್ರಕಾಂತ್ ಹಾಗೂ ಸಂಜೀವಿನಿ ಬಾಬರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.  

Tap to resize

Latest Videos

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ದಾಖಲೆಯ 600 ಮಂದಿ ಅರ್ಜಿ ಸಲ್ಲಿಕೆ..!

ಇನ್ನು ಮಹಿಳೆಯರ ಪೋಲ್‌ ವಾಲ್ಟ್‌ನಲ್ಲಿ ತಮಿಳುನಾಡಿನ ಪವಿತ್ರಾ ವೆಂಕಟೇಶ್‌(3.90 ಮೀಟರ್), ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರೆ, ರೈಲ್ವೇಸ್‌ನ ಮರಿಯಾ ಜೈಸನ್‌(3.80 ಮೀಟರ್) ಬೆಳ್ಳಿ ಹಾಗೂ ಕೃಷ್ಣ ರಚನ್‌(3.60 ಮೀಟರ್) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 

ಡುರಾಂಡ್‌ ಕಪ್‌: ಬಿಎಫ್‌ಸಿಗೆ ಜಯ

ಕೊಲ್ಕತ(ಸೆ.16): ಬೆಂಗಳೂರು ಫುಟ್ಬಾಲ್‌ ಕ್ಲಬ್‌(ಬಿಎಫ್‌ಸಿ) ಡುರಾಂಡ್‌ ಕಪ್‌ನಲ್ಲಿ ಶುಭಾರಂಭ ಮಾಡಿದ್ದು, ತನ್ನ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟ​ರ್ಸ್‌ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿದೆ. 

FULL TIME. A winning start for Naushad Moosa's men in the 130th edition of the Durand Cup, with strikes from Bhutia and Leon putting the Blasters away at the VYBK. 🔥

The Blues go marching on! 🔵 pic.twitter.com/GyEEGo8cTb

— Bengaluru FC (@bengalurufc)

ಬುಧವಾರ ನಡೆದ ಪಂದ್ಯದಲ್ಲಿ ನಮ್‌ಗ್ಯಾಲ್‌ ಭುಟಿಯಾ(45ನೇ ನಿಮಿಷ) ಹಾಗೂ ಲಿಯೋನ್‌ ಅಗಸ್ಟಿನ್‌(71ನೇ ನಿಮಿಷ) ಗೋಲು ಬಾರಿಸಿ ಬಿಎಫ್‌ಸಿಗೆ ಗೆಲುವು ತಂದುಕೊಟ್ಟರು. ಪಂದ್ಯದ ದ್ವಿತೀಯಾರ್ಧದಲ್ಲಿ ಕೇರಳ ತಂಡದ ಮೂವರು ಆಟಗಾರರು ರೆಡ್‌ ಕಾರ್ಡ್‌ ಪಡೆದು ಪಂದ್ಯದಿಂದ ಹೊರಬಿದ್ದರು. ಇದು ಕೇರಳಕ್ಕೆ ನುಂಗಲಾರದ ತುತ್ತಾಯಿತು.

click me!