ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಸುಮಿತ್‌ ಶುಭಾರಂಭ

By Suvarna NewsFirst Published Sep 16, 2021, 8:31 AM IST
Highlights

* ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಸುಮಿತ್

* 86 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸುಮಿತ್ ಸಂಗ್ವಾನ್‌ಗೆ ಗೆಲುವು

* ಈ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ

ಬಳ್ಳಾರಿ(ಸೆ.16): ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಏಷ್ಯನ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಸುಮಿತ್‌ ಸಂಗ್ವಾನ್‌ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

ವಿಜಯನಗರದಲ್ಲಿರುವ ಇನ್‌ಸ್ಪೈರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋಟ್ಸ್‌ರ್‍ನಲ್ಲಿ ಆರಂಭವಾದ ಟೂರ್ನಿಯಲ್ಲಿ ಸುಮಿತ್‌, ಆಂಧ್ರಪ್ರದೇಶದ ಹರೀಶ್‌ ಪ್ರಸದುಲಾ ವಿರುದ್ಧದ 86 ಕೆ.ಜಿ. ವಿಭಾಗದ ಪಂದ್ಯಗಲ್ಲಿ ಗೆದ್ದರು.

🆃🅷🆁🅾🆄🅶🅷 🆃🅷🅴 🅻🅴🅽🆂 📸

Glimpses from Day 1️⃣ of 5th Elite Men's National Boxing Championships 2021 👇🏻 pic.twitter.com/ObCWqMTkAv

— Boxing Federation (@BFI_official)

ಇಂದಿನಿಂದ ಬಳ್ಳಾರಿಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್‌ ಕೂಟ

2019ರ ಪ್ರೆಸಿಡೆಂಟ್‌ ಕಪ್‌ ಚಿನ್ನದ ಪದಕ ವಿಜೇತ ನೀರಜ್‌ ಸ್ವಾಮಿ(48 ಕೆ.ಜಿ.), ಹರ್ಯಾಣದ ಸಾಗರ್‌ ವಿರುದ್ಧ ಜಯ ಸಾಧಿಸಿದರು. ಪಂಜಾಬ್‌ನ ರಾಜ್‌ಪಿಂದರ್‌ ಸಿಂಗ್‌(54 ಕೆ.ಜಿ.) ಹಿಮಾಚಲ ಪ್ರದೇಶದ ರಾಹುಲ್‌ ನಿಲ್ತು ವಿರುದ್ಧ 5-0ಅಂತರದಲ್ಲಿ ಗೆದ್ದರು. 75 ಕೆ.ಜಿ. ವಿಭಾಗದಲ್ಲಿ ಮಹಾರಾಷ್ಟ್ರದ ನಿಖಿಲ್‌ ದುಬೆ ಹಾಗೂ ಛತ್ತೀಸ್‌ಗಢದ ದಿನೇಶ್‌ ಕುಮಾರ್‌ ಕ್ರಮವಾಗಿ ಗುಜರಾತ್‌ನ ಸೆಜದ್‌ ಲಿಲ್ಗರ್‌ ಹಾಗೂ ಪಶ್ಚಿಮಬಂಗಾಳದ ಅಭಿಶೇಕ್‌ ವಿರುದ್ಧ ಗೆಲುವು ಸಾಧಿಸಿದರು.

ಈ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಬಾಕ್ಸರ್‌ಗಳು ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ನೇರ ಅರ್ಹತೆ ಪಡೆಯಲಿದ್ದಾರೆ.
 

click me!