ಯುಎಸ್‌ ಓಪನ್‌: ಮರ್ರೆಗೆ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು..!

Published : Sep 01, 2021, 08:58 AM IST
ಯುಎಸ್‌ ಓಪನ್‌: ಮರ್ರೆಗೆ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು..!

ಸಾರಾಂಶ

* ಯುಎಸ್‌ ಓಪನ್ ಗ್ರ್ಯಾನ್‌ ಸ್ಲಾಂ ಆರಂಭದಲ್ಲೇ ಎದುರಾಯ್ತು ಆಘಾತಕಾರಿ ಫಲಿತಾಂಶ * 3 ಗ್ರ್ಯಾನ್‌ ಸ್ಲಾಂ ಒಡೆಯ ಆ್ಯಂಡಿ ಮರ್ರೆ ಮೊದಲ ಸುತ್ತಿನಲ್ಲೇ ಸೋಲು * ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆಗೆ ಸೋಲು

ನ್ಯೂಯಾರ್ಕ್(ಸೆ.01): ಮೂರು ಗ್ರ್ಯಾನ್‌ಸ್ಲಾಂ ಚಾಂಪಿಯನ್‌ ಆ್ಯಂಡಿ ಮರ್ರೆ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.

ರೋಚಕವಾಗಿ ಸಾಗಿದ ಪಂದ್ಯದಲ್ಲಿ ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆ 6​​-2, 6-7, 6-3, 3-6, 4-6 ಸೆಟ್‌ಗಳ ಅಂತರದಿಂದ ಸೋಲುಂಡರು. 2 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಮರ್ರೆ 2012ರ ಯುಎಸ್‌ ಓಪನ್‌, 2013 ಹಾಗೂ 2016ರಲ್ಲಿ ವಿಂಬಲ್ಡನ್‌ ಗೆದ್ದಿದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಜಪಾನಿನ ನವೋಮಿ ಒಸಾಕಾ, 87ನೇ ಶ್ರೇಯಾಂಕಿತ ಚೆಕ್‌ಗಣರಾಜ್ಯದ ಮೇರಿ ಬೌಜ್ಕೋವಾರನ್ನು 6-4, 6-1 ನೇರ ಸೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದರು. ಒಸಾಕಾ ಸತತ 2ನೇ ಯುಸ್‌ ಓಪನ್‌ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

US Open: 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಎಸ್ ಓಪನ್: ಕ್ವಾರ್ಟರ್‌ ಫೈನಲ್‌ಗೇರಿದ ಕಾರ್ಲೊಸ್‌ ಆಲ್ಕರಜ್‌, ಅರೈನಾ ಸಬಲೆಂಕಾ
ಚೀನಾ ತವರಲ್ಲೇ ಅವರ ಫ್ಯಾನ್ಸ್ ಸೈಲೆನ್ಸ್ ಮಾಡಿದ ಸಾತ್ವಿಕ್-ಚಿರಾಗ್ ಜೋಡಿ..! ಚೀನಾ ಮಾಸ್ಟರ್ಸ್ ಗೆದ್ದು ಬೀಗಿದ ಭಾರತದ ಶಟ್ಲರ್