ನೀರಜ್‌ನೊಂದಿಗೆ ಮದುವೆ ಮಾತುಕತೆ.. ನಾಚಿಕೊಳ್ಳುತ್ತಲೇ ಮನದ ಮಾತು ಬಿಚ್ಚಿಟ್ಟ ಮನು ಭಾಕರ್!

Published : Aug 15, 2024, 11:55 AM ISTUpdated : Aug 15, 2024, 06:05 PM IST
ನೀರಜ್‌ನೊಂದಿಗೆ ಮದುವೆ ಮಾತುಕತೆ.. ನಾಚಿಕೊಳ್ಳುತ್ತಲೇ ಮನದ ಮಾತು ಬಿಚ್ಚಿಟ್ಟ ಮನು ಭಾಕರ್!

ಸಾರಾಂಶ

ನೀರಜ್ ಚೋಪ್ರಾ ಜೊತೆಗಿನ ಮದುವೆ ವದಂತಿ ಬಗ್ಗೆ ಮನು ಭಾಕರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮನು ತಾಯಿ ನೀರಜ್ ಜೊತೆ ಮಾತನಾಡುತ್ತಿರುವ ವಿಡಿಯೋ ಸಹ ವೈರಲ್ ಆಗ್ತಿದೆ.

ನವದೆಹಲಿ: 2024ರ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾರತ ಆರು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಜಾವೆಲಿನ್ ಥ್ರೋನಲ್ಲಿ ಅಥ್ಲೀಟ್ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದಾರೆ. ಟೋಕಿಯೋ ಒಲಂಪಿಕ್ ಪಂದ್ಯದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಇನ್ನು ಮನು ಭಾಕರ್ 10 ಮೀಟರ್ ಏರ್‌  ಪಿಸ್ತೂಲ್ ಇವೆಂಟ್ ಮತ್ತು ಮಿಕ್ಸ್ ಟೀಮ್ 10 ಮೀಟರ್ ಏರ್ ಪಿಸ್ತೂಲ್‌ ಇವೆಂಟ್‌ನಲ್ಲಿ ಸರ್ಬಜೋತ್ ಸಿಂಗ್ ಜೊತೆಯಾಡಿ ಕಂಚು ಗೆದ್ದಿದ್ದಾರೆ. ಒಂದೇ ಒಲಂಪಿಕ್ಸ್‌ನಲ್ಲಿ ಎರಡು ಪದಕಗಳನ್ನ ಗೆಲ್ಲುವ ಮೂಲಕ ಭಾರತೀಯ ಕ್ರೀಡಾ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 

ಸೋಮವಾರ ಮನು ಭಾಕರ್ ತಾಯಿ ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಬೆನ್ನಲ್ಲೇ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಮದುವೆ ಆಗ್ತಾರಾ ಅನ್ನೋ ಚರ್ಚೆಗಳು ಸಹ ಸಾಮಾಜಿಕ ಅಂಗಳದಲ್ಲಿ ಶುರುವಾಗಿವೆ. ಆದ್ರೆ ಈ ಎಲ್ಲಾ ವದಂತಿಗಳಿಗೆ ಮನು ಭಾಕರ್ ತಂದೆ ಕಿಶನ್ ಪೂರ್ಣವಿರಾಮ ಇರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮನು ಭಾಕರ್ ಸಹ ಮದುವೆ ವದಂತಿ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಎಕ್ಸ್ ವೇದಿಕೆಯಲ್ಲಿ ಮನು ಭಾಕರ್ ಸಂದರ್ಶನದ ಕ್ಲಿಪ್ ವೈರಲ್ ಆಗಿದೆ.  ಈ ಸಂದರ್ಶನದಲ್ಲಿ ನೀರಜ್ ಚೋಪ್ರಾ ಜೊತೆಗಿನ ಮದುವೆ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆ ಕೇಳುತ್ತಿದ್ದಂತೆ ಮನು ನಾಚಿಕೊಂಡರು. ನಂತರ ತಮ್ಮ ಹೃದಯದ ಮಾತನ್ನು ಮನು ಭಾಕರ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

ಜೋಡಿಯಾಗ್ತಾರಾ ಮನು ಭಾಕರ್‌-ನೀರಜ್‌ ಚೋಪ್ರಾ? ಸೋಶಿಯಲ್‌ ಮೀಡಿಯಾದಲ್ಲಿ ನ್ಯೂಸ್‌ ಫುಲ್‌ ವೈರಲ್‌!

ನೀರಜ್ ಚೋಪ್ರಾ ಜೊತೆಯಲ್ಲಿ ಮನು ಭಾಕರ್ ತಾಯಿ ಮಾತನಾಡುತ್ತಿರುವ ವಿಡಿಯೋ ಹಲವು ವದಂತಿಗಳಿಗೆ ಕಾರಣವಾಗಿದೆ. ಈ ಬಗ್ಗೆಯೂ ಮನು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಂದು ನೀರಜ್ ಜೊತೆ ಅಮ್ಮ ಏನು ಮಾತಾಡಿದ್ದಾರೆ ಎಂಬುವುದು ನನಗೆ ನಿಜವಾಗಿಯೂ ಗೊತ್ತಿಲ್ಲ. ಆ ಕ್ಷಣದಲ್ಲಿ ನಾನು ಅಲ್ಲಿ ಇರಲಿಲ್ಲ. 2018ರಿಂದ ನಾನು ಮತ್ತು ನೀರಜ್ ಕೆಲವು ಇವೆಂಟ್‌ಗಳಲ್ಲಿ ಭೇಟಿಯಾಗುತ್ತಿರುತ್ತವೆ. ಭೇಟಿಯಾದಾಗ ಕುಶಲೋಪಚಾರ ಹಾಗೂ ಕಾರ್ಯಕ್ರಮಗಳ ಮಾತನಾಡುತ್ತೇವೆ. ನಾನು ಹೆಚ್ಚು ನೀರಜ್ ಜೊತೆ ಮಾತನಾಡಿಲ್ಲ. ವೈರಲ್ ಆಗುತ್ತಿರುವ ವದಂತಿಗಳು ಯಾವುದೂ ನಿಜವಲ್ಲ ಎಂದು ಮನು ಭಾಕರ್ ಸ್ಪಷ್ಟನೆ ನೀಡಿದ್ದಾರೆ.

ನೀರಜ್ ಚೋಪ್ರಾ ಅಲ್ಲದೇ ಭಾರತದ ಇತರೆ ಅಥ್ಲೀಟ್‌ಗಳನ್ನು ಮನು ಭಾಕರ್ ತಾಯಿ ಭೇಟಿಯಾಗಿ ಮಾತನಾಡಿದ್ದರು. ಆದ್ರೆ ನೀರಜ್ ಚೋಪ್ರಾ ಜೊತೆಗಿನ ಸಂಭಾಷಣೆಯ ವಿಡಿಯೋ ಕ್ಲಿಪ್ ಮಾತ್ರ ವೈರಲ್ ಆಗುತ್ತಿದೆ. ಮನು ಭಾಕರ್ ತಂದೆ, ವದಂತಿಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮನು ಇನ್ನು ತುಂಬಾ ಚಿಕ್ಕವಳು, ಇದು ಮದುವೆಯಾಗುವ ವಯಸ್ಸು ಅಲ್ಲ ಎಂದು ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.

ನೀರಜ್ ಚೋಪ್ರಾ ಜೊತೆ ಮಗಳ ಮದುವೆ : ಗಾಸಿಪ್‌ ಬಗ್ಗೆ ಮನು ಭಾಕರ್ ತಂದೆ ಹೇಳಿದ್ದೇನು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!