ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತಕ್ಕೆ ಬಿಗ್ ಶಾಕ್ ಎದುರಾಗಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪ್ರಮೋದ್ ಭಗತ್ ಬ್ಯಾನ್ ಆಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ ಎದುರಾಗಿದೆ. ಜಾಗತಿಕ ಡೋಪಿಂಗ್ ನಿಗ್ರಹ ಘಟಕ (ವಾಡಾ)ದ ಶಿಫಾರಸ್ಸಿನ ಮೇರೆಗೆ ತಾರಾ ಪ್ಯಾರಾ ಶಟ್ಲರ್ ಪ್ರಮೋದ್ ಭಗತ್‌ರನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (ಬಿಡಬ್ಲ್ಯುಎಫ್) 18 ತಿಂಗಳು ಅಮಾನತುಗೊಳಿಸಿದೆ.
ಹೀಗಾಗಿ ಪ್ರಮೋದ್ ಆಗಸ್ಟ್ 28ರಿಂದ ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದಾರೆ. ಸ್ಪರ್ಧೆ ಇಲ್ಲದ ಸಮಯದಲ್ಲಿ ತಾವು ಇರುವ ಜಾಗಗಳ ಬಗ್ಗೆ ಡೋಪಿಂಗ್ ಪರೀಕ್ಷಾ ಘಟಕಕ್ಕೆ ಮಾಹಿತಿ ನೀಡಬೇಕು. ಆದರೆ ಪ್ರಮೋದ್ ಕಳೆದ 12 ತಿಂಗಳಲ್ಲಿ 3 ಬಾರಿ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು, ಈ ಕಾರಣದಿಂದಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
undefined
2021ರಲ್ಲಿ ಟೋಕಿಯೋದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಗತ್ ಎಸ್ಎಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ವಾಡಾದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್, 'ಇದು ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪು' ಎಂದಿದ್ದಾರೆ.
ಒಲಿಂಪಿಕ್ ಗೋಲ್ಡನ್ ಬಾಯ್ ಯುಲೋಗೆ ಜೀವನಪೂರ್ತಿ ಉಚಿತ ಊಟ! ಐಶಾರಾಮಿ ಮನೆ ಗಿಫ್ಟ್
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈ ಬಾರಿ 25+ ಪದಕ ಗುರಿ: ದೇವೇಂದ್ರ
ಜೈಪುರ: ಆ.28ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 84 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, 25ಕ್ಕೂ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆ ಇದೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಂಸ್ಥೆ ಮುಖ್ಯಸ್ಥ 2 ಬಾರಿ ಪ್ಯಾರಾಲಿಂಪಿಕ್ ಚಿನ್ನ ವಿಜೇತ ದೇವೇಂದ್ರ ಝಾಝರಿಯಾ ಹೇಳಿದ್ದಾರೆ.
ಭಾರತ ತಂಡ, ಟೋಕಿಯೋ ಪ್ಯಾರಾಲಿಂಪಿಕ್ಸ್ ಹಾಗೂ ಹಾಂಗ್‌ಝೋ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ತೋರಿದ ಪ್ರದರ್ಶನಕ್ಕಿಂತ ಸುಧಾರಿತ ಪ್ರದರ್ಶನ ತೋರುವುದಾಗಿ ಅವರು ಅವರು ಹೇಳಿಕೊಂಡಿದ್ದಾರೆ. ಟೋಕಿಯೋದಲ್ಲಿ 19 ಪದಕ ಗೆದ್ದಿದ್ದ ಭಾರತ, ಹಾಂಗ್‌ಝೋ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ 111 ಪದಕ ಗಳಿಸಿತ್ತು.
ಕಿರಿಯರಿಗೆ ಕೋಚ್ ಆಗಲು ದ್ರಾವಿಡ್ ಸ್ಫೂರ್ತಿ: ಶ್ರೀಜೇಶ್
ನವದೆಹಲಿ: ಭಾರತ ಕಿರಿಯರ ಹಾಕಿ ತಂಡದ ಕೋಚ್ ಹುದ್ದೆ ಒಪ್ಪಿಕೊಳ್ಳಲು ತಮಗೆ ರಾಹುಲ್ ದ್ರಾವಿಡ್ ಸ್ಫೂರ್ತಿ ಎಂದು ಭಾರತದ ಮಾಜಿ ಗೋಲ್‌ಕೀಪರ್ ಪಿ. ಆರ್ ಶ್ರೀಜೇಶ್ ಹೇಳಿ ಕೊಂಡಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶ್ರೀಜೇಶ್ ತಮ್ಮ ಮುಂದಿರುವ ಗುರಿ ಬಗ್ಗೆ ವಿವರಿಸಿದ್ದಾರೆ. 'ದ್ರಾವಿಡ್ ಭಾರತ ಹಿರಿಯರ ತಂಡದ ಕೋಚ್ ಆಗುವ ಮೊದಲು ಅಂಡರ್-19 ತಂಡದೊಂದಿಗೆ ಕೆಲಸ ಮಾಡಿದ್ದರು. ಅಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ಆಟಗಾರರನ್ನು ಹಿರಿಯರ ತಂಡಕ್ಕೆ ತಂದರು. ಅದೇ ರೀತಿ ನಾನು ಸಹ ಮೊದಲು ಕಿರಿಯರ ತಂಡದಲ್ಲಿ ಕೆಲಸ ಮಾಡಿ, ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲು ಇಚ್ಛಿಸುತ್ತೇನೆ. 2032ರವೇಳೆಗೆ ಭಾರತ ಹಿರಿಯರ ತಂಡದ ಪ್ರಧಾನ ಕೋಚ್ ಹುದ್ದೆ ಅಲಂಕರಿಸಲು ನಾನು ಸಿದ್ಧನಿರುತ್ತೇನೆ. 2036ರಲ್ಲಿ ಭಾರತ ಒಲಿಂಪಿಕ್ಸ್ ಆಯೋಜಿಸಿದರೆ, ಆಗ ನಾನು ತಂಡದ ಕೋಚ್ ಆಗಿರಬೇಕು ಎನ್ನುವುದು ನನ್ನ ಆಸೆ' ಎಂದು ಶ್ರೀಜೇಶ್ ಹೇಳಿಕೊಂಡಿದ್ದಾರೆ.
"ಕೇಳಿ ಶಾಕ್ ಆಯ್ತು..!" ಒಲಿಂಪಿಕ್ಸ್ ಸಿದ್ಧತೆಗೆ ನನಗೆ ಕೇಂದ್ರ ₹1.5 ಕೋಟಿ ಕೊಟ್ಟಿಲ್ಲ: ಅಶ್ವಿನಿ ಪೊನ್ನಪ್ಪ ಕಿಡಿ
ವಿಶ್ವ ರ್‍ಯಾಂಕಿಂಗ್: 5ನೇ ಸ್ಥಾನಕ್ಕೇರಿದ ಭಾರತ ಹಾಕಿ ತಂಡ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಭಾರತ ಪುರುಷರ ಹಾಕಿ ತಂಡ, ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನ ಸ್ಥಾನಕ್ಕೇರಿದೆ. ನೂತನ ರ್‍ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿತು. ಒಲಿಂಪಿಕ್ಸ್‌ಗೂ ಮುನ್ನ 6ನೇ ಸ್ಥಾನದಲ್ಲಿದ್ದ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ 1 ಸ್ಥಾನ ಪ್ರಗತಿ ಸಾಧಿಸಿದೆ.
ಇದೇ ವೇಳೆ, ಹಾಲಿ ಚಾಂಪಿಯನ್ ನೆದರ್‌ಲೆಂಡ್ಸ್ ಮತ್ತೆ ಅಗ್ರಸ್ಥಾನಕ್ಕೇರಿದ್ದು, ಬೆಳ್ಳಿ ಪದಕ ವಿಜೇತ ಜರ್ಮನಿ ತಂಡ 5ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇಂಗ್ಲೆಂಡ್ ತಂಡ 3ನೇ ಸ್ಥಾನದಲ್ಲಿದ್ದರೆ, ಬೆಲ್ಜಿಯಂ 4ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ, ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಕ್ರಮವಾಗಿ 6, 7 ಹಾಗೂ 8ನೇ ಸ್ಥಾನಗಳಲ್ಲಿವೆ.