Breaking: ವಿನೇಶ್‌ ಪೋಗಟ್‌ ಅರ್ಜಿ ವಜಾ, ಭಾರತಕ್ಕಿಲ್ಲ ಬೆಳ್ಳಿ ಪದಕ!

By Santosh Naik  |  First Published Aug 14, 2024, 9:30 PM IST

vinesh phogat ಮಹಿಳೆಯರ 50  ಕೆಜಿ ಕುಸ್ತಿ ವಿಭಾಗದ ಅನರ್ಹತೆ ಪ್ರಕರಣದಲ್ಲಿ ವಿನೇಶ್‌ ಪೋಗಟ್‌ಗೆ ನಿರಾಸೆಯಾಗಿದೆ. ಜಾಗತಿಕ ಕ್ರೀಡಾ ನ್ಯಾಯಮಂಡಳಿ ಅವರ ಅರ್ಜಿಯನ್ನು ವಜಾ ಮಾಡಿದೆ.


ನವದೆಹಲಿ (ಆ.14): ಮಹಿಳೆಯರ 50 ಕೆಜಿ ವಿಭಾಗದಲ್ಲಿ ಅನರ್ಹತೆಯ ವಿರುದ್ಧದ ಮೇಲ್ಮನವಿ ಸಲ್ಲಿಸಿದ್ದ ವಿನೇಶ್ ಫೋಗಟ್‌ಗೆ ನಿರಾಸೆಯಾಗಿದೆ. ಈ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಎತ್ತಿಹಿಡಿದಿದ್ದು, ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 7ನೇ ಪದಕ ಸಾಧನೆ ಮಾಡುವ ಭಾರತದ ಆಸೆ ಭಗ್ನಗೊಂಡಿದೆ. ಕೇವಲ 100 ಗ್ರಾಂ ಹೆಚ್ಚಿದ್ದ ಕಾರಣಕ್ಕಾಗಿ ತನ್ನನ್ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್‌ನಿಂದ ಅನರ್ಹ ಮಾಡಲಾಗಿತ್ತು. ಆದರೆ, ನಾನು ಜಂಟಿ ಬೆಳ್ಳಿ ಪದಕಕ್ಕೆ ಅರ್ಹನಾಗಿದ್ದೇನೆ ಎಂದು ಸ್ವಿಜರ್ಲೆಂಡ್‌ನಲ್ಲಿರುವ ಜಾಗತಿಕ ಕ್ರೀಡಾ ನ್ಯಾಯಮಂಡಳಿ ಎದುರು ಅರ್ಜಿ ಹಾಕಿದ್ದರು. ಆದರೆ, ಕ್ರೀಡಾ ನ್ಯಾಯಮಂಡಳಿ ತನ್ನ ಆಪರೇಟೀವ್‌ ತೀರ್ಪಿನಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಎತ್ತಿಹಿಡಿಯಲು ನಿರ್ಧರಿಸಿದೆ. ಕ್ರೀಡಾ ನ್ಯಾಯಾಲಯವು ಸಂಬಂಧಿತ ಕ್ರೀಡಾ ಫೆಡರೇಶನ್‌ಗಳು, ಸಂಘಗಳು ಅಥವಾ ಲೀಗ್‌ಗಳ ನಿಯಮಗಳು ಮತ್ತು ನಿಬಂಧನೆಗಳ ಕಟ್ಟುನಿಟ್ಟಾದ ಅನ್ವಯಕ್ಕೆ ಹೆಸರುವಾಸಿಯಾಗಿದೆ.

ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

Latest Videos

undefined

ಸಿಎಎಸ್‌ನ ಆಡ್‌ ಹಾಕ್‌ ವಿಭಾಗದ ಏಕೈಕ ಆರ್ಬಿಟ್ರೇಟರ್‌ ಆಗಿದ್ದ ಡಾ ಅನ್ನಾಬೆಲ್ಲೆ ಬೆನೆಟ್, ತೀರ್ಪಿನ ಘೋಷಣೆಯ ಗಡುವನ್ನು ಆಗಸ್ಟ್ 13 ರವರೆಗೆ ವಿಸ್ತರಿಸಿದರು, ಎರಡೂ ಪಕ್ಷಗಳಿಗೆ ಈ ಕುರಿತಾದ ಅವಕಾಶವನ್ನೂ ನೀಡಿದ್ದರು. ಅರ್ಜಿದಾರ ವಿನೇಶ್ ಫೋಗಾಟ್, ಪ್ರತಿವಾದಿಗಳಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಇಂಟರ್ನ್ಯಾಷನಲ್ ಒಲಿಂಪಿಕ್ ಸಮಿತಿ, ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ ವಾದ ಮಾಡುವ ಹಾಗೂ ತಮ್ಮ ವಾದಕ್ಕೆ ಪುರಾವೆಗಳನ್ನು ಸಲ್ಲಿಕೆ ಮಾಡುವ ಹೆಚ್ಚಿನ ಕಾಲಾವಕಾಶವನ್ನೂ ನೀಡಿದ್ದರು.

ಯುಎಸ್ ಜಿಮ್ನಾಸ್ಟ್‌ ಕಂಚು ವಾಪಾಸ್ ನೀಡಲು ಆದೇಶಿಸಿದ CAS..! ವಿನೇಶ್ ಫೋಗಟ್‌ಗೂ ಸಿಗುತ್ತಾ ಗುಡ್‌ ನ್ಯೂಸ್?

ವಿನೇಶ್ ಫೋಗಟ್ ಅವರ ಮೇಲ್ಮನವಿಯನ್ನು ಸ್ವೀಕಾರ ಮಾಡಿದ ಒಂದು ದಿನದ ನಂತರ ಆಗಸ್ಟ್ 9 ರಂದು ಮೂರು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಡಾ. ಅನ್ನಾಬೆಲ್ಲೆ ಬೆನೆಟ್ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದರು. ಆರಂಭಿಕ ಮೇಲ್ಮನವಿಯನ್ನು ಫ್ರೆಂಚ್ ಪರ ವಕೀಲರು ವಿನೇಶ್‌ಗೆ ಸಲ್ಲಿಸಿದರೆ, IOA ವಿಚಾರಣೆಯಲ್ಲಿ ಕುಸ್ತಿಪಟುವನ್ನು ಪ್ರತಿನಿಧಿಸಲು ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ನೇಮಿಸಲಾಗಿತ್ತು.

ಮಂಗಳವಾರ ಸಂಜೆ ತೂಕ ಹೆಚ್ಚಾಗಲು ದೇಹದ ಸ್ವಾಭಾವಿಕ ಚೇತರಿಕೆ ಪ್ರಕ್ರಿಯೆ ಕಾರಣ ಮತ್ತು ಆಕೆಯ ದೇಹವನ್ನು ನೋಡಿಕೊಳ್ಳುವುದು ಕ್ರೀಡಾಪಟುವಿನ ಮೂಲಭೂತ ಹಕ್ಕು ಎಂದು ವಕೀಲರು ವಾದಿಸಿದರು. ಸ್ಪರ್ಧೆಯ ಮೊದಲ ದಿನದಂದು ಆಕೆಯ ದೇಹದ ತೂಕವು ನಿಗದಿತ ಮಿತಿಯಲ್ಲಿದೆ ಎಂದು ವಾದಿಸಿದ್ದಲ್ಲದೆ,  ತೂಕ ಹೆಚ್ಚಾಗುವುದು ಚೇತರಿಕೆಯ ಕಾರಣದಿಂದಾಗಿ ಸಂಭವಿಸಿದೆ ಮತ್ತು ಅದು ವಂಚನೆಯಲ್ಲ ಎಂದು ವಾದಿಸಿದ್ದರು.

ಫೈನಲ್‌ಗೆ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ವಿಫಲವಾದ ನಂತರ ವಿನೇಶ್ ಅವರು ತಮ್ಮ ಮಹಿಳೆಯರ 50 ಕೆಜಿ ಚಿನ್ನದ ಪದಕದ ಪಂದ್ಯದಿಂದ ಅನರ್ಹ ಮಾಡಲಾಗಿತ್ತು. ತೂಕದ ಎರಡನೇ ದಿನದಲ್ಲಿ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿದ್ದರು. ಈವೆಂಟ್‌ನ ಆರಂಭಿಕ ದಿನದಂದು ವಿನೇಶ್ ಸರಿಯಾದ ತೂಕ ಹೊಂದಿದ್ದಲ್ಲದೆ, ಮೂರು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ತಲುಪಿದ್ದರು. ಆ ಮೂರು ವಿಜಯಗಳಲ್ಲಿ ಒಂದು ಜಪಾನಿನ ಕುಸ್ತಿಪಟು ಯುಯಿ ಸುಸಾಕಿಯ ವಿರುದ್ಧ ಅದ್ಭುತ ಗೆಲುವು ಒಳಗೊಂಡಿತ್ತು.

 

 

click me!