ಖೇಲೋ ಇಂಡಿಯಾ : ಸೈಕ್ಲಿಂಗ್‌ನಲ್ಲಿ 1 ಚಿನ್ನ ಗೆದ್ದ ಕರ್ನಾಟಕ

By Kannadaprabha NewsFirst Published Jan 17, 2020, 10:59 AM IST
Highlights

ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾದ ಏಳನೇ ದಿನ ಕರ್ನಾಟಕ ಎರಡು ಪದಕಗಳನ್ನಷ್ಟೇ ಜಯಿಸಲು ಶಕ್ತವಾಗಿದೆ. ಆದರೆ ಸೈಕ್ಲಿಂಗ್‌ನಲ್ಲಿ ಚಿನ್ನದ ಬರ ನೀಗಿಸಿಕೊಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಗುವಾಹಟಿ(ಜ.17): 3ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನ 7ನೇ ದಿನವಾದ ಗುರುವಾರ ಕರ್ನಾಟಕ 2 ಪದಕ ಗೆದ್ದಿದೆ.

ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು

ಕೂಟ ಆರಂಭವಾದಗಿನಿಂದಲೂ ಸೈಕ್ಲಿಂಗ್‌ನಲ್ಲಿ ಚಿನ್ನದ ಬರ ಎದರುಸಿದ್ದ ಸೈಕ್ಲಿಸ್ಟ್‌ಗಳು ಕೊನೆಗೂ ಚಿನ್ನದ ಪದಕ ಗೆದ್ದಿದ್ದಾರೆ. ಅಂಡರ್‌ 21 ಬಾಲಕಿಯರ 4000 ಮೀ. ತಂಡಗಳ ಪಸ್ರ್ಯೂಟ್‌ ಫೈನಲ್‌ನಲ್ಲಿ ಮೇಘಾ ಗುಗಾಡ್‌, ದಾನಮ್ಮ, ಸಹನಾ, ಕೀರ್ತಿ ಅವರಿದ್ದ ಕರ್ನಾಟಕ ತಂಡ 5 ನಿಮಿಷ 34.298 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಗೆದ್ದರು.

End of day 7 and here are the top five states at the . maintains their grip on top spot followed by with in 3rd followed by and . pic.twitter.com/TeQYbFP8mg

— Khelo India (@kheloindia)

ಇನ್ನು ಅಂಡರ್‌ 21 ಬಾಲಕರ 4000 ಮೀ. ತಂಡಗಳ ಪಸ್ರ್ಯೂಟ್‌ ಫೈನಲ್‌ ಸ್ಪರ್ಧೆಯಲ್ಲಿ ತಾರಾ ಸೈಕ್ಲಿಸ್ಟ್‌ಗಳಾದ ವೆಂಕಪ್ಪ ಕೆಂಗಲಗುತ್ತಿ, ಸಚಿನ್‌, ಗಣೇಶ್‌ ಹಾಗೂ ರಾಜು ಅವರಿದ್ದ ತಂಡ 4 ನಿಮಿಷ 49.800 ಸೆ.ಗಳಲ್ಲಿ ದೂರ ಕ್ರಮಿಸುವ ಮೂಲಕ ಕಂಚಿನ ಪದಕ ಗೆದ್ದಿತು.

ಕರ್ನಾಟಕ ದಿನದ ಮುಕ್ತಾಯಕ್ಕೆ 6 ಚಿನ್ನ, 8 ಬೆಳ್ಳಿ ಹಾಗೂ 10 ಕಂಚಿನೊಂದಿಗೆ 24 ಪದಕ ಜಯಿಸಿದ್ದು ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. 7ನೇ ದಿನದಂತ್ಯಕ್ಕೆ 34 ಚಿನ್ನ, 37 ಬೆಳ್ಳಿ ಹಾಗೂ 57 ಕಂಚಿನ ಪದಕ ಸಹಿತ ಒಟ್ಟು 128 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, 89 ಪದಕಗಳೊಂದಿಗೆ ಹರ್ಯಾಣ ಎರಡನೇ ಹಾಗೂ 56 ಪದಕಗಳೊಂದಿಗೆ ಡೆಲ್ಲಿ ಮೂರನೇ ಸ್ಥಾನದಲ್ಲಿದೆ.

 

click me!