ಪ್ರೊ ಕಬಡ್ಡಿ ಟೂರ್ನಿ ಯಶಸ್ಸು ಗಳಿಸಿರುವ ಬೆನ್ನಲ್ಲೇ ರಾಜ್ಯ ಕಬಡ್ಡಿ ಸಂಸ್ಥೆ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಟೂರ್ನಿಯನ್ನು ಆಯೋಜಿಸಲು ಮುಂದಾಗಿದೆ. 2020ರ ಫೆಬ್ರವರಿಯಲ್ಲಿ ಟೂರ್ನಿ ನಡೆಯಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಡಿ.23]: ಪ್ರೊ ಕಬಡ್ಡಿ ಮಾದರಿಯಲ್ಲಿ ರಾಜ್ಯದಲ್ಲೂ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ ಹೆಸರಿನಲ್ಲಿ ಟೂರ್ನಿ ಜರುಗಲಿದೆ.
2019ರಲ್ಲಿ ಲಿಯೋನೆಲ್ ಮೆಸ್ಸಿ 50 ಗೋಲು!
undefined
ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ (ಕೆಪಿಕೆಎಲ್) ಪಂದ್ಯಾವಳಿ 2020ರ ಫೆ.14ರಿಂದ ಮಾರ್ಚ್ 1ರ ವರೆಗೂ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ ಎಂದು ಆಯೋಜಕರು ಭಾನುವಾರ ತಿಳಿಸಿದರು. ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಟೂರ್ನಿಯ ಲೋಗೋ ಸಹ ಅನಾವರಣಗೊಳಿಸಲಾಯಿತು.
ಮತ್ತೊಂದು ಲೀಗ್: ಆರಂಭವಾಗುತ್ತಿದೆ ಕರ್ನಾಟಕ ಪ್ರೀಮಿಯರ್ ಕಬಡ್ಡಿ ಲೀಗ್ !
ಟೂರ್ನಿಯಲ್ಲಿ ಸುಮಾರು 120 ಆಟಗಾರರು ಪಾಲ್ಗೊಳ್ಳಲಿದ್ದು, ಕರ್ನಾಟಕದ ತಾರಾ ಆಟಗಾರರಾದ ಸುಕೇಶ್ ಹಗ್ಡೆ, ಪ್ರಶಾಂತ್ ರೈ, ಜೀವಕುಮಾರ್, ದರ್ಶನ್, ಸಚಿನ್ ವಿಠ್ಠಲ ಸೇರಿದಂತೆ ಅನೇಕರು ಕಣಕ್ಕಿಳಿಯಲಿದ್ದಾರೆ. ಹಲವು ಯುವ ಪ್ರತಿಭೆಗಳಿಗೆ ಈ ಟೂರ್ನಿ ಅತ್ಯುತ್ತಮ ವೇದಿಕೆಯಾಗಲಿದೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಆಡಲಿದ್ದು, ತಂಡಗಳ ಹೆಸರುಗಳನ್ನು ಬಹಿರಂಗಗೊಳಿಸಲಾಗಿದೆ. ಯಾದಗಿರಿ ಆ್ಯಂಗ್ರಿ ಬುಲ್ಸ್, ಮೈಸೂರು ವಾರಿಯರ್ಸ್, ಮಂಡ್ಯ ರೇಂಜರ್ಸ್, ಕೋಲಾರ ಗೋಲ್ಡರ್ ಬೇರ್ಸ್, ಧಾರವಾಡ ಪ್ಯಾಂಥರ್ಸ್, ಬೆಳಗಾವಿ ಟೈಗರ್ಸ್, ಬೆಂಗಳೂರು ಕ್ರಷರ್ಸ್ ಹಾಗೂ ಬಳ್ಳಾರಿ ರಾಯಲ್ಸ್ ಎಂದು ತಂಡಗಳಿಗೆ ನಾಮಕಾರಣ ಮಾಡಲಾಗಿದೆ.