
ಕೋಟ್ಟಾಯಂ(ಡಿ.22): ಭಾರತದ ರ್ಯಾಲಿ ಕಿಂಗ್ ಎಂದೇ ಗುರುತಿಸಿಕೊಂಡಿರುವು ಗೌರವ್ ಗಿಲ್ ಇದೀಗ ಪ್ರತಿಷ್ಠಿತ ಚಾಂಪಿಯನ್ಸ್ ಯಾಚ್ ಕ್ಲಪ್ FMSCI ಭಾರತದ ರಾಷ್ಟ್ರೀಯ ಚಾಂಪಿಯನ್‌ಶಿಪ್ ರ್ಯಾಲಿ ಪಟ್ಟ ಗೆದ್ದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಮಿಂಚನ ವೇಗದಲ್ಲಿ ಗುರಿ ತಲುಪೋ ಮೂಲಕ ಗಿಲ್ 5ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಚೇತನ್‌ಗೆ K-1000 ರ‍್ಯಾಲಿ ಚಾಂಪಿಯನ್ ಪಟ್ಟ!
ರ್ಯಾಲಿಯ ಓವರಾಲ್ ವಿಭಾಗದ ರೇಸ್‌ನ 2ನೇ ದಿನ ಮಹೀಂದ್ರ ಚಾಲಕ ಗೌರವ್ ಗಿಲ್ ಹಾಗೂ ಕೋ ಡ್ರೈವರ್ ಮುಸಾ ಶೆರಿಫ್ SS9 ಸುತ್ತು ಗೆದ್ದರೆ, SS10 ಹಾಗೂ SS11 ಸುತ್ತಿನಲ್ಲಿ 2ನೇ ಸ್ಥಾನ ಅಲಂಕರಿಸಿದರು. ಗಿಲ್ ತಂಡದ ಡೀನ್ ಮಸ್ಕರೇನಸ್ ಹಾಗೂ ಸುಹೀಮ್ ಕಬೀರ್ 3 ಮತ್ತು 4ನೇ ಸ್ಥಾನ ಅಲಂಕರಿಸಿದರು.
ಇದನ್ನೂ ಓದಿ: ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!
2019 INRC ಚಾಂಪಿಯನ್ ಪಟ್ಟ, ಬೆಂಗಳೂರು, ಕೊಯಂಬತ್ತೂರು K1000 ರ್ಯಾಲಿ ಗೆದ್ದ ಅಕ್ಷರ ತಂಡದ ಬೆಂಗಳೂರು ಮೂಲದ ಚೇತನ್ ಶಿವರಾಮ್ ಕೊಟ್ಟಾಯಂ ರ್ಯಾಲಿಯ ಮೊದಲ ದಿನವೇ ಹಿನ್ನಡೆ ಅನುಭವಿಸಿದರು. ಅಪಘಾತಕ್ಕೆ ತುತ್ತಾದ ಕಾರಣ 2ನೇ ದಿನ ರ್ಯಾಲಿಯಲ್ಲಿ ಪಾಲ್ಗೊಂಡರು.
ಚೇತನ್ ಶಿವರಾಮ್ ಹಾಗೂ ಕೋ ಡ್ರೈವರ್ ದಿಲೀಪ್ ಶರಣ್ SS9 ಸುತ್ತಿನಲ್ಲಿ 10ನೇ ಸ್ಥಾನ ಹಾಗೂ ಅಂತಿಮ ಎರಡು ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ INRC 3 ಕೆಟರಗರಿ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆದಿತ್ಯ ಠಾಕೂರ್ ಹಾಗೂ ಫಾಬಿದ್ ಅಹಮರ್ ನಂತರದ ಸ್ಥಾನ ಪಡೆದುಕೊಂಡರು.
ತಂಡ ವಿಭಾಗದಲ್ಲಿ ಡಾ.ಬಿಕ್ಕು ಬಾಬು (ಮಿಲೆನ್ ಜಾರ್ಜ್) ಒಟ್ಟಾರೆ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದರು. ಓವರಾಲ್ ಕೆಟಗರಿಯಲ್ಲಿ INRC 2 ಪ್ರಶಸ್ತಿ ಗೆದ್ದುಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.