ಕರ್ನಾಟಕ ಪಿಕಲ್‌ಬಾಲ್, ಬೆಂಗಳೂರು, ಮಂಗಳೂರು , ತುಮಕೂರು ಸೇರಿ 7 ತಂಡಗಳಿಗೆ 56 ಆಟಗಾರರ ಆಯ್ಕೆ

Published : Sep 23, 2026, 10:21 PM IST
Karnataka Pickleball 20206 Teams

ಸಾರಾಂಶ

ಕರ್ನಾಟಕ ಪಿಕಲ್‌ಬಾಲ್ ಟೂರ್ನಿಯ ಚೊಚ್ಚಲ ಆವೃತ್ತಿಯ 7 ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 89 ಆಟಗಾರರ ಪೂಲ್‌ನಿಂದ 56 ಆಟಗಾರರು ಆಯ್ಕೆಯಾಗಿದ್ದಾರೆ. ಬೆಂಗಳೂರು, ಮಂಗಳೂರು, ಕೊಡಗು, ತುಮಕೂರು ಸೇರಿ 7 ತಂಡಗಳ ಸ್ಟಾರ್ ಆಟಗಾರರು ಯಾರು?

ಬೆಂಗಳೂರು (ಸೆ.23) : ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ನ ಚೊಚ್ಚಲ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 20 ರಂದು ಬೆಂಗಳೂರಿನ ಇ-ಝೋನ್‌ನಲ್ಲಿ ನಡೆದ 2026ರ ಕೆಪಿಪಿಎಲ್ ಡ್ರಾಫ್ಟ್‌ನಲ್ಲಿ ಏಳು ಫ್ರಾಂಚೈಸಿ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಎರಡು ಗಂಟೆಗಳ ಕಾಲ ನಡೆದ ಡ್ರಾಫ್ಟ್‌ನಲ್ಲಿ ಒಟ್ಟು 89 ಆಟಗಾರರ ಪೂಲ್‌ನಿಂದ 56 ಆಟಗಾರರು ಏಳು ತಂಡಗಳಿಗೆ ಆಯ್ಕೆಯಾಗಿದ್ದಾರೆ. ಪ್ರತಿಯೊಂದು ತಂಡವು ನಾಯಕರೂ 8 ಸದಸ್ಯರ ಪಡೆಯನ್ನು ಹೊಂದಿವೆ. ಒಂಬತ್ತು ಸುತ್ತುಗಳಲ್ಲಿ ನಡೆದ ಈ ಡ್ರಾಫ್ಟ್‌ನಲ್ಲಿ 'ಚಿಟ್ ಸಿಸ್ಟಮ್' ಮೂಲಕ ಪ್ರತಿ ಸುತ್ತಿನ ಆಯ್ಕೆಯ ಕ್ರಮವನ್ನು ನಿರ್ಧರಿಸಲಾಯಿತು.

ಕರ್ನಾಟಕದ ಉದಯೋನ್ಮುಖ ಆಟಗಾರರು

ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳ ಉದಯೋನ್ಮುಖ ಹಾಗೂ ಅನುಭವಿ ಆಟಗಾರರು ಈ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಷ್ಠಿತ `ಐಕಾನ್ ಆಟಗಾರರಾಗಿ' ಬೆಂಗಳೂರು ತಂಡಕ್ಕೆ ಅನುಜಾ ಪ್ರವೀಣ್ ಮಹೇಶ್ವರಿ, ಮಂಗಳೂರಿಗೆ ಸೋನು ಕುಮಾರ್ ವಿಶ್ವಕರ್ಮ, ತುಮಕೂರಿಗೆ ಮಯೂರ್ ನಾರಾಯಣ್ ಪಾಟೀಲ್, ಕೊಡಗಿಗೆ ಕುಲದೀಪ್ ರವೀಂದ್ರ ಮಹಾಜನ್, ಮೈಸೂರಿಗೆ ವಂಶಿಕ್ ಅಂಕುರ್ ಕಪಾಡಿಯಾ, ಬೆಳಗಾವಿಗೆ ವೃಷಾಲಿ ಶ್ಯಾಮಕಾಂತ್ ಠಾಕ್ರೆ ಮತ್ತು ಬಳ್ಳಾರಿಗೆ ತೇಜಸ್ ರವೀಂದ್ರ ಮಹಾಜನ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸ್ಟೇಟ್ ಪಿಕಲ್‌ಬಾಲ್ ಅಸೋಸಿಯೇಷನ್ (ಕೆಎಸ್‌ಪಿಎ) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಈ ಪಂದ್ಯಾವಳಿಯು ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಗೆ ಹೊಸ ಮೆರುಗು ನೀಡಲಿದೆ. ಕೆಪಿಪಿಎಲ್ ಮೊದಲ ಆವೃತ್ತಿಯ ಪಂದ್ಯಗಳು ಅಕ್ಟೋಬರ್ 9 ರಿಂದ 11 ರವರೆಗೆ ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ ನಡೆಯಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಲಿಂಪಿಕ್ಸ್‌ ಬಳಿಕ ಏಷ್ಯಾಡ್‌ನಲ್ಲೂ ಭಾರತಕ್ಕೆ ಚಿನ್ನ ತಪ್ಪಿಸಿದ ‘ತೂಕ’!
Asian Games 2026: ಭಾರತಕ್ಕೆ ಒಂದೇ ದಿನ 4 ಪದಕ; ಶೂಟರ್‌ಗಳ ಅಬ್ಬರ, ಮೆಡಲ್‌ ಟ್ಯಾಲಿ 6ಕ್ಕೆ!