ಕೆಒಎ ಭವನದ ಎದುರು ಬಾಕ್ಸರ್‌ಗಳ ಪ್ರತಿಭಟನೆ

By Kannadaprabha NewsFirst Published Dec 17, 2019, 3:36 PM IST
Highlights

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಒಲಿಂಪಿಕ್‌ ಭವನ (ಕೆಒಎ) ಎದುರು ಸೋಮವಾರ ಬಾಕ್ಸಿಂಗ್‌ ಸಂಸ್ಥೆ ಪದಾಧಿಕಾರಿಗಳು, ಬಾಕ್ಸರ್‌ಗಳು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು(ಡಿ.17): ಕರ್ನಾಟಕ ಅಮೆಚೂರ್‌ ಬಾಕ್ಸಿಂಗ್‌ ಸಂಸ್ಥೆ ವಿರುದ್ಧವಾಗಿ ಹೊಸದಾಗಿ ಹುಟ್ಟಿಕೊಂಡಿರುವ ಕರ್ನಾಟಕ ಬಾಕ್ಸಿಂಗ್‌ ಸಂಸ್ಥೆಯನ್ನು ಅನರ್ಹಗೊಳಿಸುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಒಲಿಂಪಿಕ್‌ ಭವನ (ಕೆಒಎ) ಎದುರು ಸೋಮವಾರ ಬಾಕ್ಸಿಂಗ್‌ ಸಂಸ್ಥೆ ಪದಾಧಿಕಾರಿಗಳು, ಬಾಕ್ಸರ್‌ಗಳು ಪ್ರತಿಭಟನೆ ನಡೆಸಿದರು.

ಬಾಕ್ಸರ್‌ ಸುಮಿತ್‌, ಶೂಟರ್‌ ರವಿ ಡೋಪಿಂಗ್‌ ಟೆಸ್ಟ್‌ ಫೇಲ್‌!

ಕಾರ‍್ಯದರ್ಶಿಯಾಗಿರುವ ಸಾಯಿ ಸತೀಶ್‌ ಅವರ ಬಂಡಾಯ ಬಾಕ್ಸಿಂಗ್‌ ಸಂಸ್ಥೆ ಡಿ. 16 ರಂದು ಚುನಾವಣೆ ನಡೆಸಿತು. ಇದು ಸರಿಯಾದ ಕ್ರಮವಲ್ಲ. ಅಮೆಚೂರ್‌ ಬಾಕ್ಸಿಂಗ್‌ ಸಂಸ್ಥೆಯ ನಿಯಮದ ಪ್ರಕಾರ 2016ರಲ್ಲಿ ಚುನಾವಣೆ ನಡೆದಿತ್ತು. 

ಶೀಘ್ರದಲ್ಲಿ ಡಿವಿಲಿಯರ್ಸ್ ತಂಡಕ್ಕೆ ವಾಪಸ್; ನಾಯಕ ಡುಪ್ಲೆಸಿಸ್ ಸ್ಪಷ್ಟನೆ!

ಅದರಂತೆ 4 ವರ್ಷಗಳ ಬಳಿಕ ಅಂದರೆ 2020ರಲ್ಲಿ ಚುನಾವಣೆ ನಡೆಯಬೇಕು. ಆದರೆ ಬಂಡಾಯ ಸಂಸ್ಥೆ ಆತುರವಾಗಿ ಚುನಾವಣೆ ನಡೆಸುತ್ತಿರುವುದಕ್ಕೆ ಕಾರಣ ಏನೆನ್ನುವುದು ತಿಳಿದಿಲ್ಲ ಎಂದು ಅಮೆಚೂರ್‌ ಬಾಕ್ಸಿಂಗ್‌ ಸಂಸ್ಥೆ ಕಾರ‍್ಯದರ್ಶಿ ರಾಜ್‌ಕುಮಾರ್‌ ಹೇಳಿದರು. ಕೆಒಎ ಸಹಿತ ಬಂಡಾಯ ಬಾಕ್ಸಿಂಗ್‌ ಸಂಸ್ಥೆಗೆ ಬೆಂಬಲ ನೀಡುತ್ತಿದ್ದು, ಇದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
 

click me!