* ಬಾಸ್ಕೆಟ್‌ಬಾಲ್ ಪ್ರೀಮಿಯರ್ ಲೀಗ್ ಆರಂಭಿಸಲು ಬಿಎಫ್‌ಐ ಚಿಂತನೆ
* ಐಪಿಎಲ್ ಮಾದರಿಯಲ್ಲಿ ಐಎನ್‌ಬಿಎಲ್ ಟೂರ್ನಿ ಆರಂಭ
* 2022ರ ಜನವರಿ-ಫೆಬ್ರವರಿಯಲ್ಲಿ ಬಾಸ್ಕೆಟ್‌ಬಾಲ್ ಲೀಗ್ ಆರಂಭ
ಬೆಂಗಳೂರು(ನ.19): ದೇಶದಲ್ಲಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿರುವ ಕ್ರೀಡೆಗಳಲ್ಲಿ ಬಾಸ್ಕೆಟ್‌ಬಾಲ್ (Basketball) ಸಹ ಒಂದು. ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) (Basketball Federation Of India) ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವುದರ ಜೊತೆಗೆ ಭಾರತ ತಂಡ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವುದೂ ಜನಪ್ರಿಯತೆ ಹೆಚ್ಚಲು ಕಾರಣ.
ಇದೀಗ ದೇಶದಲ್ಲೇ ಮೊದಲ ಬಾರಿಗೆ ಬಿಎಫ್‌ಐ(BFI), ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) (Indian Premier League) ಟಿ20 ರೀತಿ ಭಾರತೀಯ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್) ಆರಂಭಿಸಲು ಮುಂದಾಗಿದೆ. ಶನಿವಾರ ಈ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಚೊಚ್ಚಲ ಆವೃತ್ತಿಯು 2022ರ ಜನವರಿ-ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜು (K Govindaraj) ಗುರುವಾರ ಘೋಷಿಸಿದರು.
undefined
ಪುರುಷ, ಮಹಿಳೆಯರ ವಿಭಾಗದಲ್ಲಿ ಟೂರ್ನಿ
ಐಎನ್‌ಬಿಎಲ್‌ನಲ್ಲಿ (INBL) ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 9 ತಂಡಗಳು ಭಾಗವಹಿಸಲಿವೆ. 3*3 ಹಾಗೂ 5*5 ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ 3*3 ಪ್ರದರ್ಶನ ಪಂದ್ಯ ನಡೆಯಲಿದೆ. ಆರಂಭದಲ್ಲಿ ಲೀಗ್‌ಗೆ ಫೆಡರೇಷನ್ ವತಿಯಿಂದಲೇ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಮುಂದೆ ಕೆಲ ವರ್ಷಗಳಲ್ಲಿ ಲೀಗ್ ಮತ್ತಷ್ಟು ವೃತ್ತಿಪರಗೊಳ್ಳಲಿದ್ದು, ಆಗ ಐಪಿಎಲ್ (IPL) ಮಾದರಿಯಲ್ಲಿ ಫ್ರಾಂಚೈಸಿಗಳು, ಆಟಗಾರರ ಹರಾಜು ನಡೆಯಲಿದೆ ಎಂದು ಗೋವಿಂದರಾಜು ತಿಳಿಸಿದರು.
Australian Open ಟೂರ್ನಿಗೆ ಗೈರಾಗಲಿರುವ ರೋಜರ್ ಫೆಡರರ್..!
ಐಎನ್‌ಬಿಎಲ್ ವಾರ್ಷಿಕ ಟೂರ್ನಿಯಾಗಿದ್ದು, ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವ ರಾಜ್ಯ, ರಾಷ್ಟ್ರೀಯ ತಂಡಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಲು ಈ ಲೀಗ್ ನೆರವಾಗಲಿದೆ ಎಂದು ಗೋವಿಂದರಾಜು ವಿಶ್ವಾಸ ವ್ಯಕ್ತಪಡಿಸಿದರು.
ಟೀವಿಯಲ್ಲಿ ಪಂದ್ಯಗಳ ನೇರಪ್ರಸಾರ: ಐಎನ್‌ಬಿಎಲ್ ಟೂರ್ನಿಯನ್ನು ಟೀವಿಯಲ್ಲಿ ನೇರ ಪ್ರಸಾರ ಮಾಡಲು ಬಿಎಫ್‌ಐ ಯೋಜನೆ ರೂಪಿಸುತ್ತಿದೆ. ಪ್ರತಿಷ್ಠಿತ ಕ್ರೀಡಾ ವಾಹಿನಿಗಳು ಆಸಕ್ತಿ ತೋರಿದ್ದು, ಸದ್ಯದಲ್ಲೇ ಬಿಎಫ್‌ಐನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.
Neeraj Chopra Biopic: ತಮ್ಮ ಜೀವನಾಧಾರಿತ ಸಿನೆಮಾ ಬಗ್ಗೆ ಖಡಕ್ ಸ್ಪಷ್ಟನೆ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ನಾಳೆ 3*3 ಪ್ರದರ್ಶನ ಟೂರ್ನಿ: ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ (Sri Kanteerava Stadium) ಐಎನ್‌ಬಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ವೇಳೆ 24 ತಂಡಗಳ ಪ್ರದರ್ಶನ ಟೂರ್ನಿಯನ್ನು ಬಿಎಫ್‌ಐ ಆಯೋಜಿಸಲಿದೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಮನಿಕಾ ಭಾತ್ರಾ ಮಾಡಿದ ಫಿಕ್ಸಿಂಗ್ ಆರೋಪ ತನಿಖೆಗೆ ಸಮಿತಿ
ನವದೆಹಲಿ: ತಾರಾ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ (Manika Batra) ಮಾಡಿರುವ ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ದೆಹಲಿ ಹೈಕೋರ್ಟ್ (Delhi High Court) ಮೂರು ಜನರ ಸಮಿತಿಯನ್ನು ರಚಿಸಿದೆ.
ಟೇಬಲ್ ಟೆನಿಸ್ ಒಕ್ಕೂಟಕ್ಕೆ ಡೆಲ್ಲಿ ಹೈಕೋರ್ಟ್ ತಪರಾಕಿ: ಮನಿಕಾ ಬಾತ್ರಾಗೆ ಗೆಲುವು..!
ಸುಪ್ರೀಂಕೋರ್ಟ್ (Supreme Court) ಮಾಜಿ ನ್ಯಾಯಾಧೀಶರಾದ ವಿಕ್ರಮ್‌ಜಿತ್ ಸೆನ್, ಎ.ಕೆ.ಸಿಕ್ರಿ ಹಾಗೂ ಮಾಜಿ ಅಥ್ಲೀಟ್ ಗುರ್‌ಬಚನ್ ಸಿಂಗ್ ಸಮಿತಿಯಲ್ಲಿದ್ದು, ನಾಲ್ಕು ವಾರಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಜ.ರೇಖಾ ಪಲ್ಲಿ ಅವರಿದ್ದ ಪೀಠ ನಿರ್ದೇಶಿಸಿತು. ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಟೋಕಿಯೋ ಒಲಿಂಪಿಕ್ಸ್ (Tokyo Olympics) ಅರ್ಹತಾ ಸುತ್ತಿನಲ್ಲಿ ತಮಗೆ ಪಂದ್ಯವೊಂದರಲ್ಲಿ ಸೋಲುವಂತೆ ಒತ್ತಡ ಹೇರಿದ್ದರು ಹಾಗೂ ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ (Indian Table Tennis Federation) ಆಯ್ಕೆ ವೇಳೆ ನಿರ್ದಿಷ್ಟಆಟಗಾರರನ್ನು ಗುರಿ ಮಾಡುತ್ತಿದೆ ಎಂದು ಮನಿಕಾ ಆರೋಪಿಸಿದ್ದರು.