Australian Open ಟೂರ್ನಿಗೆ ಗೈರಾಗಲಿರುವ ರೋಜರ್ ಫೆಡರರ್‌..!

By Suvarna News  |  First Published Nov 18, 2021, 12:14 PM IST

* ಸಂಧ್ಯಾಕಾಲದಲ್ಲಿ ರೋಜರ್ ಫೆಡರರ್ ಟೆನಿಸ್‌ ವೃತ್ತಿಬದುಕು

* 2022ರ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಹಿಂದೆ ಸರಿದ ಫೆಡರರ್

* ವಿಂಬಲ್ಡನ್ ಟೂರ್ನಿಯಲ್ಲೂ ಫೆಡರರ್ ಪಾಲ್ಗೊಳ್ಳುವುದು ಅನುಮಾನ 


ಜೆನೇವಾ(ನ.18): ಮಂಡಿ ನೋವಿನಿಂದ ಇನ್ನೂ ಚೇತರಿಸಿಕೊಳ್ಳದ ದಿಗ್ಗಜ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ (Roger Federer) 2022ರ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ (Australian Open) ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಅಲ್ಲದೇ, ಮುಂದಿನ ಜೂನ್‌ ತಿಂಗಳಲ್ಲಿ ನಡೆಯಲಿರುವ ವಿಂಬಲ್ಡನ್‌ (Wimbledon) ನಲ್ಲೂ ಫೆಡರರ್‌ ಆಡುವುದು ಅನುಮಾನವೆನಿಸಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಡಲು ಕಷ್ಟ. ವಿಂಬಲ್ಡನ್‌ನಲ್ಲಿ ಆಡಲಿದ್ದೇನಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದಿದ್ದಾರೆ. 2020ರ ವಿಂಬಲ್ಡನ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಬಳಿಕ ಫೆಡರರ್‌ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದಾರೆ. ಕಡೆಯ ಬಾರಿಗೆ ನಾನೇನು ಮಾಡಬಹುದು ಎನ್ನುವುದರತ್ತ ಗಮನ ಹರಿಸುತ್ತಿದ್ದೇನೆ. ಟೆನಿಸ್‌ ಕೋರ್ಟ್‌ನಲ್ಲಿ ನಾನು ವಿದಾಯ ಹೇಳಲು ಬಯಸುತ್ತೇನೆ. ಆ ಕಾರಣಕ್ಕಾಗಿಯೇ ನಾನು ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು, ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಫೆಡರರ್ ಹೇಳಿದ್ದಾರೆ. 

Latest Videos

COVID Vaccine ಪಡೆದಿದ್ದರಷ್ಟೇ ಆಸ್ಟ್ರೇಲಿಯನ್ ಓಪನ್‌ಗೆ ಬನ್ನಿ: ಆಸ್ಟ್ರೇಲಿಯಾ ಸರ್ಕಾರ

ಕಳೆದ ತಿಂಗಳಷ್ಟೇ ಬಿಡುಗಡೆಯಾದ ಎಟಿಪಿ ಶ್ರೇಯಾಂಕದಲ್ಲಿ (ATP Rankings) 20 ಗ್ರ್ಯಾನ್‌ ಸ್ಲಾಂ ಒಡೆಯ ರೋಜರ್ ಫೆಡರರ್ 2017ರ ಬಳಿಕ ಮೊದಲ ಬಾರಿಗೆ ಟಾಪ್ 10 ಶ್ರೇಯಾಂಕದಿಂದ ಹೊರಬಿದ್ದಿದ್ದರು. ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಫೆಡರರ್ ಮತ್ತೆ ಯಾವಾಗ ಟೆನಿಸ್ ಕೋರ್ಟ್‌ಗೆ ಮರಳುತ್ತಾರೆ ಎನ್ನುವ ಕುರಿತಂತೆ ಕಾತರದಿಂದ ಕಾಯುತ್ತಿದ್ದಾರೆ.

ಇಂಡೋನೇಷ್ಯಾ ಮಾಸ್ಟ​ರ್ಸ್: ಕಿದಂಬಿ ಶ್ರೀಕಾಂತ್‌ 2ನೇ ಸುತ್ತಿಗೆ

ಬಾಲಿ(ಇಂಡೋನೇಷ್ಯಾ): ಇಂಡೋನೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌ (indonesia masters Badminton) ಟೂರ್ನಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ (Kidambi Srikant) ಹಾಗೂ ಎಚ್‌.ಎಸ್‌.ಪ್ರಣಯ್‌ (HS Prannoy) 2ನೇ ಸುತ್ತು ಪ್ರವೇಶಿಸಿದ್ದಾರೆ. 

ಬುಧವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌ ಫ್ರಾನ್ಸ್‌ನ ಕ್ರಿಸ್ಟೋ ವಿರುದ್ಧ ಗೆದ್ದರೆ, ಪ್ರಣಯ್‌ ಮಲೇಷ್ಯಾದ ಲೀವ್‌ ಡ್ಯಾರೆನ್‌ರನ್ನು ಸೋಲಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ್‌ ಕಪಿಲಾ-ಸಿಕ್ಕಿ ರೆಡ್ಡಿ ಜೋಡಿ 2ನೇ ಸುತ್ತಿಗೆ ಲಗ್ಗೆ ಇಟ್ಟಿತು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಪಾರುಪಳ್ಳಿ ಕಷ್ಯಪ್‌, ಸಾಯಿ ಪ್ರಣೀತ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ವೆಂಕಟ್‌ ಗೌರವ್‌-ಜುಹಿ ದೇವಾಂಗನ್‌, ಸುಮೀತ್‌ ರೆಡ್ಡಿ-ಅಶ್ವಿನಿ ಪೊನ್ನಪ್ಪ ಜೋಡಿ ಸೋತು ಹೊರಬಿತ್ತು.

ಏಷ್ಯನ್‌ ಆರ್ಚರಿ: ಕಂಚು ಗೆದ್ದ ಭಾರತ

ಢಾಕಾ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ (Asian Archery Championship) ಭಾರತ ಮೊದಲ ಪದಕ ಗೆದ್ದುಕೊಂಡಿದೆ. ಬುಧವಾರ ನಡೆದ ಕಾಂಪೌಂಡ್‌ ವಿಭಾಗದ ಕಂಚಿನ ಪದಕ ಸ್ಪರ್ಧೆಯಲ್ಲಿ ಪುರುಷರ ತಂಡ ಗೆಲುವು ಸಾಧಿಸಿದರೆ, ಮಹಿಳಾ ತಂಡ ಸೋಲನುಭವಿಸಿತು. ರಿಷಬ್‌ ಯಾದವ್‌, ಅಭಿಷೇಕ್‌ ವರ್ಮಾ ಹಾಗೂ ಅಮನ್‌ ಸೈನಿ ಅವರನ್ನೊಳಗೊಂಡ ತಂಡ ಬಾಂಗ್ಲಾ ವಿರುದ್ಧ 235-​223 ಅಂಕಗಳಿಂದ ಗೆದ್ದು ಕಂಚು ಪಡೆಯಿತು.

ಕ್ರೀಡಾಪಟುಗಳಿಗೆ ಮೊದಲ ಬಾರಿಗೆ ಸಾಯ್‌ ಪ್ರಶಸ್ತಿ

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರದಿಂದ (SAI) ಇದೇ ಮೊದಲ ಬಾರಿಗೆ ಕ್ರೀಡಾಪಟುಗಳು ಹಾಗೂ ಕೋಚ್‌ಗಳಿಗೆ ಸಾಂಸ್ಥಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬುಧವಾರ ಜವಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಹಾಗೂ ಕ್ರೀಡಾ ಇಲಾಖೆಯ ರಾಜ್ಯ ಖಾತೆ ಸಚಿವ ನಿತೀಶ್‌ ಪ್ರಮಾಣಿಕ್‌ ಸಾಧಕರಿಗೆ ಪ್ರಶಸ್ತಿ ವಿತರಿಸಿದರು. 

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

2016-17, 2017-18, 2018-19, 2019-20ರ ಸಾಲಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದ 162 ಅಥ್ಲೀಟ್‌ಗಳು ಹಾಗೂ 84 ಕೋಚ್‌ಗಳು ಸೇರಿ ಒಟ್ಟು 246 ಮಂದಿ ಪ್ರಶಸ್ತಿ ಸ್ವೀಕರಿಸಿದರು. ಒಟ್ಟು 85 ಲಕ್ಷ ರು. ಬಹುಮಾನ ಮೊತ್ತವನ್ನು ವಿತರಿಸಲಾಯಿತು.

click me!