* ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ
* ಸೆಮೀಸ್‌ಗೆ ಲಗ್ಗೆಯಿಟ್ಟ ಸಿಂಧು, ಕ್ವಾರ್ಟರ್‌ನಲ್ಲೇ ಮುಗ್ಗರಿಸಿದ ಸಾಯಿ ಪ್ರಣೀತ್
* ಇನ್ನು ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿಗೆ ಭರ್ಜರಿ ಜಯ
ಬಾಲಿ(ನ.27): 2 ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು (PV Sindhu) ಹಾಗೂ ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (Indonesia Open Badminton Tournament) ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದೆಡೆ ಸಾಯಿ ಪ್ರಣೀತ್ (B Sai Praneeth) ಕ್ವಾರ್ಟರ್ ಫೈನಲ್‌ನಲ್ಲೇ ಆಘಾತ ಅನುಭವಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಪ್ರಶಸ್ತಿ ಗೆಲ್ಲಲು ಮತ್ತಷ್ಟು ಹತ್ತಿರವಾಗಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಸಿಂಧು, ದಕ್ಷಿಣ ಕೊರಿಯಾದ ಸಿಮ್ ಯುಜಿನ್ (Sim Yujin) ವಿರುದ್ಧ 14-21, 21-19, 21-14 ಗೇಮ್‌ಗಳಿಂದ ಗೆದ್ದು ಅಂತಿಮ 4ರ ಸುತ್ತು ಪ್ರವೇಶಿಸಿದರು. ಸೆಮೀಸ್‌ನಲ್ಲಿ ಸಿಂಧು, ವಿಶ್ವ ನಂ.2 ಥಾಯ್ಲೆಂಡ್‌ನ ರಾಚನೋಕ್ ಇಂಟನಾನ್ (Ratchanok Intanon) ವಿರುದ್ಧ ಸೆಣಸಾಡಲಿದ್ದಾರೆ.
: beat South Korea's Sim Yujin in the 3-game match to reach the semifinals of the Open Super 1000 event in Bali. pic.twitter.com/W2X4MuLHmG
— All India Radio News (@airnewsalerts)
undefined
ಆದರೆ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ನಲ್ಲಿ ವಿಶ್ವದ 16ನೇ ಶ್ರೇಯಾಂಕಿತ ಶಟ್ಲರ್ ಸಾಯಿ ಪ್ರಣೀತ್, ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 12-21, 8-21 ಗೇಮ್‌ಗಳಿಂದ ಸೋತು ನಿರ್ಗಮಿಸಿದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ (Satwiksairaj Rankireddy) -ಚಿರಾಗ್ ಶೆಟ್ಟಿ (Chirag Shetty) ಜೋಡಿ ಮಲೇಷ್ಯಾದ ಗೊಹ್-ನೂರ್ ಇಝುದ್ದೀನ್ ಜೋಡಿ ವಿರುದ್ಧ 21-19, 21-19 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
Mumbai Marathon ಕೋವಿಡ್‍ನಿಂದ ಸ್ಥಗಿತಗೊಂಡಿದ್ದ ಮುಂಬೈ ಹಾಫ್ ಮ್ಯಾರಾಥಾನ್ ಮತ್ತೆ ಆರಂಭ, ಶುಭಹಾರೈಸಿದ ಸಚಿನ್!
ವಿಶ್ವ ಟಿಟಿ: ಸತ್ಯನ್‌ಗೆ 3ನೇ ಸುತ್ತಿನಲ್ಲಿ ಸೋಲು
ಹೌಸ್ಟನ್(ಅಮೆರಿಕಾ): ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ 3ನೇ ಸುತ್ತಿನಲ್ಲಿ ಸೋತು ನಿರಾಸೆ ಮೂಡಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸತ್ಯನ್, ನೈಜೀರಿಯಾದ ಅರುಣ ಕ್ವಾದ್ರಿ ವಿರುದ್ಧ ನಡೆದ ರೋಚಕ 7 ಗೇಮ್‌ಗಳ ಸ್ಪರ್ಧೆಯಲ್ಲಿ ಸೋಲನುಭವಿಸಿದರು.
Indonesia Open Badminton: ಕ್ವಾರ್ಟರ್‌ಗೆ ಸಿಂಧು, ಪ್ರಣೀತ್ ಲಗ್ಗೆ
ಆದರೆ ಮಿಶ್ರ ಡಬಲ್ಸ್‌ನಲ್ಲಿ ಶರತ್ ಕಮಲ್-ಅರ್ಚನಾ ಕಾಮತ್ ಜೋಡಿ ಈಜಿಪ್ಟ್‌ನ ಒಮರ್ ಅಸ್ಸಾರ್-ದೀನ ಮೆಶೆರ್ಫ್ ಜೋಡಿ ವಿರುದ್ಧ ಹಾಗೂ ಸತ್ಯನ್-ಮನಿಕಾ ಬಾತ್ರಾ ಜೋಡಿ ಪೋರ್ಟೊ ರಿಕೋದ ಬ್ರಿಯಾನ್-ಆ್ಯಡ್ರಿಯಾನ ಜೋಡಿ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮಹಿಳಾ ಡಬಲ್ಸ್‌ನಲ್ಲಿ ಮನಿಕಾ-ಅರ್ಚನಾ ಜೋಡಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿತು.
ಇಂದು ರಾಜ್ಯಮಟ್ಟದ ಪ್ಯಾರಾ ಬ್ಯಾಡ್ಮಿಂಟನ್
ಬೆಂಗಳೂರು: ರಾಜ್ಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಕೂಟ (Para Badminton Tournament) ನ.27ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಅಂದೇ ರಾಷ್ಟ್ರಮಟ್ಟದ ನಾಲ್ಕನೇ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಪ್ರಕ್ರಿಯೆ ಜರುಗಲಿದೆ ಎಂದು ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ಗೋಪಿನಾಥ್ ತಿಳಿಸಿದರು.
World Skating Games:ಭಾರತಕ್ಕೆ ಮೊದಲ ಪದಕ ಗೆದ್ದ ಆನಂದ್ ವೆಲ್ಕುಮಾರ್, ಯಾರೂ ಮಾಡದ ಸಾಧನೆಗೆ ಸಲಾಂ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಪಿ.ನಗರದ ಸ್ಕೈಪಿಂಚ್ ಕ್ರೀಡಾ ಕೇಂದ್ರದಲ್ಲಿ ಬೆಳಗ್ಗೆ 10.30ಕ್ಕೆ ಕ್ರೀಡಾಕೂಟ ಆರಂಭವಾಗಲಿದೆ. ಅಂಗವೈಕಲ್ಯತೆಗೆ ಅನುಗುಣವಾಗಿ ಸ್ಪರ್ಧೆಯನ್ನು ಆರು ವರ್ಗಗಳಾಗಿ ವಿಂಗಡಿಸಿದ್ದೇವೆ ಎಂದರು. ರಾಜ್ಯಮಟ್ಟದಲ್ಲಿ ವಿಜೇತರಾದವರಲ್ಲಿ ಕೆಲವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಅಲ್ಲಿ ವಿಜೇತರಾಗುವ ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳ ಭೇಟೆಯಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.