World Skating Games:ಭಾರತಕ್ಕೆ ಮೊದಲ ಪದಕ ಗೆದ್ದ ಆನಂದ್ ವೆಲ್ಕುಮಾರ್, ಯಾರೂ ಮಾಡದ ಸಾಧನೆಗೆ ಸಲಾಂ!

By Suvarna News  |  First Published Nov 25, 2021, 8:32 PM IST
  • ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ  ಆನಂದ್ ವೆಲ್ಕುಮಾರ್
  • ವಿಶ್ವ ಸ್ಪೀಡ್ ಗೇಮ್ಸ್ 2021ನಲ್ಲಿ ಬೆಳ್ಳಿ ಪದಕ ಗೆದ್ದ ಆನಂದ್
  • ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಸ್ಕೇಟಿಂಗ್ ಗೇಮ್ಸ್‌ಗೆ ಅರ್ಹತೆ ಪಡೆದ ಆನಂದ್
     

ನವದೆಹಲಿ(ನ.25):  ಕ್ರಿಕೆಟ್ ಕೇಂದ್ರಿತವಾಗಿದ್ದ ಭಾರತ ಇದೀಗ ಇತರ ಕ್ರೀಡೆಯಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದೆ.  ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ವಿಶ್ವ ಸ್ಪೀಡ್ ಸ್ಕೇಟಿಂಗ್ ಗೇಮ್ಸ್ 2021ರಲ್ಲಿ(World Speed Skating Games 2021) ಭಾರತದ  ಆನಂದ್ ವೆಲ್ಕುಮಾರ್(Anand Velkumar) ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ವಿಶ್ವ ಸ್ಪೀಡ್ ಸ್ಕೇಟಿಂಗ್ ವಿಭಾಗದಲ್ಲಿ ಭಾರತದ ಪದಕ ಗೆದ್ದುಕೊಂಡಿದೆ. ಈ ಕೀರ್ತಿ ಆನಂದ್ ವೆಲ್ಲಕುಮಾರ್‌ಗೆ ಸಲ್ಲಲಿದೆ.

ಕೊಲಂಬಿಯಾದ ಇಬಾಗ್ವೆ ನಗರದಲ್ಲಿ ವಿಶ್ವ ಸ್ಪೀಡ್ ಸ್ಕೇಟಿಂಗ್ ಗೇಮ್ಸ್ 2021 ಆಯೋಜಿಸಲಾಗಿತ್ತು.  ಜ್ಯೂನಿಯರ್ 15 ಕಿ.ಮಿ ಎಲಿಮೇಶನ್ ಫೈನಲ್ ರೌಂಡ್‌ನಲ್ಲಿ  ಆನಂದ್ ವೆಲ್ಕುಮಾರ್ 24.14.845 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ (Sliver Medal)ಗೆದ್ದುಕೊಂಡರು.  ಈ ಪದಕದೊಂದಿಗೆ ಭಾರದ ಇನ್‌ಲೈನ್ ಸ್ಪೀಡ್ ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. 

Latest Videos

undefined

ಇಂದಿನಿಂದ National Shooting Championship: ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ!

ವಿಶ್ವ ಸ್ಪೀಡ್ ಸ್ಕೇಟಿಂಗ್ 2021ರಲ್ಲಿ ಕೊಲಂಬಿಯಾದ ಮಿಗುಯೆಲ್ ಫೋನ್ಸೆಕಾ ಹಾಗೂ ಪೋರ್ಚುಗೀಸ್‌ನ ಲಿರಾ ಪ್ರಾಬಲ್ಯ ಮೆರೆದಿದ್ದಾರೆ. ಇವರ ನಡುವೆ ಮಿಂಚಿನ ಪ್ರದರ್ಶನ ನೀಡಿದ  ಆನಂದ್ ವೆಲ್ಕುಮಾರ್ ಬೆಳ್ಳಿ ಪದಕ ಗಿಟ್ಟಿಸಿಕೊಂಡಿದ್ದಾರೆ. ಮಿಗುಯೆಲ್ ಚಿನ್ನದ ಪದಕ ಗೆದ್ದುಕೊಂಡರೆ ಲಿರಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ತಮಿಳುನಾಡು(Tamil Nadu) ಮೂಲದ  ಆನಂದ್ ವೆಲ್ಕುಮಾರ್ ಸಾಧನೆಗೆ ಇಡೀ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ. ಬೆಳ್ಳಿ ಪದಕ ಗೆದ್ದ  ಆನಂದ್ ವೆಲ್ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಮಳೆ ಕಾರಣ ಎಲ್ಲಾ ಸ್ಪರ್ಧಿಗಳು ಜಾರಿಕೊಳ್ಳುತ್ತಿದ್ದರು. ಸ್ಪರ್ಧಿಗಳ ನಡುವೆ ಸಾಕಷ್ಟು ತಳ್ಳುವಿಕೆ ಕೂಡ ಇತ್ತು. ಮಳೆ ಕಾರಣ ಪ್ರತಿ ಸೆಕೆಂಡ್ ತುಂಬಾ ಮುಖ್ಯವಾಗಿತ್ತು. ಸ್ವಲ್ಪ ಯಾಮಾರಿದರೂ ಜಾರಿಬೀಳುವ ಸಂಭವವಿತ್ತು. ಒಂದು ವೇಳೆ ಬಿದ್ದರೆ ಇಡೀ ವರ್ಷದ ಶ್ರಮ ವ್ಯರ್ಥವಾಗುತ್ತಿತ್ತು. ಅಡೆ ತಡೆಗಳ ನಡುವೆ ಭಾರತಕ್ಕೆ ಮೊದಲ ಪದಕ ಗೆಲ್ಲಿಸಿಕೊಟ್ಟಿರುವುದು ಅತೀವ ಸಂತಸವಾಗುತ್ತಿದೆ ಎಂದು  ಆನಂದ್ ವೆಲ್ಕುಮಾರ್ ಹೇಳಿದ್ದಾರೆ.

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

ಈ ಪದಕ್ಕಾಗಿ ವರ್ಷಗಳ ಕಾಲ ಶ್ರಮವಹಿಸಿದ್ದೇನೆ. ಸತತ ಅಭ್ಯಾಸ ನಡೆಸಿದ್ದೇನೆ. ಹಲವು ಸ್ತರಗಳಲ್ಲಿ, ಹಲವು ಕಠಿಣ ಸ್ತರಗಳಲ್ಲಿ ಅಭ್ಯಾಸ ಮಾಡಿದ್ದೇನೆ. ಅದರೆ ಮಳೆ ಕಾರಣ ಸ್ಪರ್ಧೆ ಮತ್ತಷ್ಟು ಸವಾಲಿನಿಂದ ಕೂಡಿತ್ತು. ಹಲವು ಸ್ಪರ್ಧಿಗಳು ತಳ್ಳಾಟ ಹಾಗೂ ಮಳೆಯಿಂದ ಜಾರಿಬಿದ್ದರು. ವೇಗದ ಜೊತೆಗೆ ಎಚ್ಚರಿಕೆ ಬೇಕಿತ್ತು. ಈ ಸವಾಲಿನ ನಡುವೆ ಪದಕ ಗೆದ್ದಿರುವುದು ಸಂತಸ ಇಮ್ಮಡಿಗೊಳಿಸಿದೆ ಎಂದು ಆನಂದ್ ವೆಲ್ಕುಮಾರ್ ಹೇಳಿದ್ದಾರೆ

ಬೆಳ್ಳಿ ಪದಕ ಗೆದ್ದ  ಆನಂದ್ ವೆಲ್ಕುಮಾರ್ 2022ರಲ್ಲಿ ಅಮೆರಿಕದಲ್ಲಿ(USA) ನಡೆಯಲಿರುವ ವಿಶ್ವ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದ್ದಾರೆ. ವಿಶೇಷ ಅಂದರೆ 2022ರಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸ್ಪೀಡ್ ಸ್ಕೇಟಿಂಗ್ ಭಾಗವಹಿಸಿ ಪದಕ ಗೆಲ್ಲುವ ಸುವರ್ಣ ಅವಕಾಶ ಇದೀಗ  ಆನಂದ್ ವೆಲ್ಕುಮಾರ್‌ಗೆ ಇದೆ. 

ಇಬಾಗ್ವೆಯಲ್ಲಿ ನಡೆದ ವಿಶ್ವ ಸ್ಪೀಡ್ ಸ್ಕೇಟಿಂಗ್ ಗೇಮ್ಸ್‌ನಲ್ಲಿ  ಆನಂದ್ ವೆಲ್ಕುಮಾರ್ ಜೊತೆ ಭಾರತದ ಧನುಷ್ ಬಾಬು, ಗುರುಕೀರತ್ ಸಿಂಗ್, ಸಿದ್ಧಾಂತ್ ಕಾಂಬ್ಳೆ, ಆರತಿ ಕಸ್ತೂರಿ ರಾಜ್ ಪಾಲ್ಗೊಂಡಿದ್ದರು. ವಿಶ್ವ ಸ್ಕೇಟಿಂಗ್ ಗೇಮ್ಸ್‌ನಲ್ಲಿ ಧನುಷ್ ಬಾಬು 6ನೇ ಸ್ಥಾನ ಅಲಂರಿಸಿದ್ದರೆ, ಕಾಂಬ್ಳೆ 8, ಕಸ್ತೂರಿ ರಾಜ್ 10ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಇದೀಗ ವಿಶ್ವಚಾಂಪಿಯನ್‌ಶಿಪ್ ಸ್ಕೇಟಿಂಗ್‌ನಲ್ಲಿ ಭಾರತ ಛಾಪು ಮೂಡಿಸುತ್ತಿದೆ.  ಇತರ ಕ್ರೀಡೆಗಳಲ್ಲಿ ಭಾರತ ಪದಕ ಗೆಲ್ಲುತ್ತಿದೆ. ಹಲವು ಕ್ರೀಡೆಗಳಲ್ಲಿ ಭಾರತ ಹೋರಾಟ ನಡೆಸುತ್ತಿದೆ. ಈ ಮೂಲಕ ದೇಶದ ಕ್ರೀಡೆಯಲ್ಲಿ ಮಹತ್ತರ ಬದಲಾವಣೆ ಕಾಣುತ್ತಿದೆ. ಇದಕ್ಕೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವೂ ಸಾಕ್ಷಿಯಾಗಿದೆ.
 

click me!