ಕೊರೋನಾ ವೈರಸ್: ಸರ್ಕಾರ ಸೂಚನೆ ಮೀರಿ ರಾಷ್ಟ್ರಪತಿ ಭೇಟಿಯಾದ ಮೇರಿ ಕೋಮ್!

By Suvarna News  |  First Published Mar 21, 2020, 11:02 PM IST

ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್, ಸರ್ಕಾರದ ಸೂಚನೆ ಉಲ್ಲಂಘಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿದ್ದಾರೆ. ಇದೀಗ ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ ಆವರಿಸಿದೆ.


ನವದೆಹಲಿ(ಮಾ.21): ಕೊರೋನಾ ವೈರಸ್ ಹರಡದಂತೆ ತಡೆಯಲು ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ ಎಂದು ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಅದರಲ್ಲೂ ವಿದೇಶಗಳಿಂದ ಮರಳುವವರು, ವಿದೇಶಕ್ಕೆ ತೆರಳುವವರು 14 ದಿನ ಸ್ವಯಂ ದಿಗ್ಬಂಧನಕ್ಕೆ ಒಳಗಾಗವುದು ಸೂಕ್ತ ಎಂದಿದೆ. ಆದರೆ ಬಾಕ್ಸಿಂಗ್ ಪಟು ಮೇರಿ ಕೋಮ್ ಈ ಸೂಚನೆ ಮೀರಿದ್ದಾರೆ. ಮೇರಿ ಕೋಮ್ ನಡೆ ಇದೀಗ ರಾಷ್ಚ್ರಪತಿ ಭವನಕ್ಕೆ ಕೊರೋನಾ ಭೀತಿ ಆವರಿಸಿದೆ.

Tap to resize

Latest Videos

ಭಾರತ ಮೇರಿ ಕೋಮ್, ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಕ್ಕಾಗಿ ಜೋರ್ಡಾನ್‌ಗೆ ತೆರಳಿದ್ದರು. ಜೋರ್ಡಾನ್‌ನಿಂದ ವಾಪಸ್ ಆದ ಮೇರಿ ಕೋಮ್ ಕನಿಷ್ಠ 14 ದಿನ ಸ್ವಯಂ ದಿಗ್ಬಂಧನದಲ್ಲಿರಬೇಕಿತ್ತು. ಆದರೆ ಈ ಸೂಚನೆ ಉಲ್ಲಂಘಿಸಿದ ಮೇರಿ ಕೋಮ್, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಎಂಪಿಗಳಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಮೇರಿ ಕೋಮ್ ಪಾಲ್ಗೊಂಡಿದ್ದಾರೆ.

ಆದರೆ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿ ಕೋಮ್, ಜೋರ್ಡಾನ್‌ನಿಂದ ಆಗಮಿಸಿದ ಬಳಿಕ 14 ದಿನ ಮನಯೆಲ್ಲೇ ಇದ್ದೆ. ಬಳಿಕವೆ ತೆರಳಿದ್ದೇನೆ, ಸೂಚನೆ ಮೀರಿಲ್ಲ ಎಂದಿದ್ದಾರೆ.

click me!