ಕೊರೋನಾ ವೈರಸ್ ತಡೆಗೆ ಹಲವು ಕ್ರಮಗಳು ಕೈಗೊಳ್ಳುತ್ತಿದ್ದರೂ ಸೋಂಕು ಹತೋಟಿಗೆ ಬಂದಿಲ್ಲ. ಹೀಗಾಗಿ ಎಲ್ಲಾ ಕ್ರೀಡಾಕೂಟಗಳು, ಟೂರ್ನಿಗಳನ್ನು ರದ್ದುಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಕಟ್ಟು ನಿಟ್ಟಿನ ಆದೇಶ ನೀಡಿದೆ.
ನವದೆಹಲಿ(ಮಾ.20): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರ ವರೆಗೂ ಯಾವುದೇ ಪಂದ್ಯಾವಳಿ ಹಾಗೂ ಆಯ್ಕೆ ಟ್ರಯಲ್ಸ್‌ಗಳನ್ನು ನಡೆಸದಂತೆ ಕೇಂದ್ರ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಫೆಡರೇಷನ್‌ಗಳಿಗೆ ಸೂಚನೆ ನೀಡಿದೆ. ಶುಕ್ರವಾರದಿಂದ ಆರಂಭಗೊಳ್ಳಬೇಕಿರುವ ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟ ಸಹ ನಡೆಯುವುದು ಅನುಮಾನವೆನಿಸಿದೆ.
IPL 2020ಗೆ ತಯಾರಿ ನಡೆಸುತ್ತಿರುವ ಬಿಸಿಸಿಐಗೆ ಶಾಕ್ ನೀಡಿದ ಕೇಂದ್ರ ಕ್ರೀಡಾ ಸಚಿವ ರಿಜಿಜು!
ಜತೆಗೆ ಒಲಿಂಪಿಕ್ಸ್ ಶಿಬಿರಗಳಿಗೆ ಯಾವುದೇ ಕ್ರೀಡಾಪಟುವನ್ನು ಬಿಡುವ ಮುನ್ನ ಸಂಪೂರ್ಣವಾಗಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ವಿದೇಶದಲ್ಲಿ ಅಭ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳು ಭಾರತಕ್ಕೆ ವಾಪಸಾಗಿದ್ದು, ಅವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಹಾಗೂ 2 ವಾರಗಳ ಕಾಲ ಸ್ವಯಂ ದಿಗ್ಬಂಧನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆಸ್ಟ್ರೇಲಿಯಾದಿಂದ ತವರಿಗೆ ವಾಪಸ್ ಆದ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ದಿಗ್ಬಂಧನ!
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮಗಳನ್ನು ಕೈಗೊಂಡರು ಸೋಂಕು ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಮನವಿ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ಮಾತ್ರ ಮನಯಿಂದ ಹೊರಬರಲು ಮನವಿ ಮಾಡಿದ್ದಾರೆ.