ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!

By Suvarna News  |  First Published Jul 24, 2020, 11:42 AM IST

2018ರ ಏಷ್ಯನ್ ಗೇಮ್ಸ್ ಮಿಶ್ರ ರಿಲೇ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ತಂಡಕ್ಕೆ ಇದೀಗ ಚಿನ್ನಕ್ಕೆ ಕೊರಳೊಡ್ಡುವ ಭಾಗ್ಯ ಒಲಿದು ಬಂದಿದೆ. ಇದು ಸಾದ್ಯವಾಗಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.


ನವದೆಹಲಿ(ಜು.24): ಜಕಾರ್ತಾದಲ್ಲಿ ನಡೆದ ಏಷ್ಯಾನ್‌ ಗೇಮ್ಸ್‌ನ 4/400 ಮಿಶ್ರ ರಿಲೇ ವಿಭಾಗದಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಇದೀಗ ಭಾರತ ತಂಡಕ್ಕೆ ಚಿನ್ನದ ಪದಕ ಹುಡುಕಿಕೊಂಡು ಬಂದಿದೆ.

ಹೌದು, ತಾರಾ ಅಥ್ಲೀಟ್‌ಗಳಾದ ಕರ್ನಾಟಕದ ಪೂವಮ್ಮ, ಹಿಮಾ ದಾಸ್‌, ಮೊಹಮದ್‌ ಅನಾಸ್‌ ಮತ್ತು ಆರೋಗ್ಯರಾಜ್‌ ಅವರನ್ನೊಳಗೊಂಡ ಭಾರತದ 4/400 ಮಿಶ್ರ ರಿಲೇ ತಂಡ, 3 ನಿಮಿಷ 15.71 ಸೆ.ಗಳಲ್ಲಿ ಗುರಿ ತಲುಪಿ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿತ್ತು. 

Official confirmation: India's 4x400 mixed relay team of Mohammed Anas, Poovamma, Hima Das, and Arokia Rajiv at the 2018 Asian Games will have their silver medals upgraded to gold . Winners Bahrain have been disqualified as Kemi Adekoya received a 4-year doping ban recently. pic.twitter.com/BVWLfzQs63

— Andrew Amsan (@AndrewAmsan)

Tap to resize

Latest Videos

ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್‌ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ. ಅಲ್ಲದೇ 400 ಮೀ. ಹರ್ಡಲ್ಸ್‌ನಲ್ಲಿ ಅನು ರಾಘವನ್‌ ಕಂಚು ಗೆದ್ದಿದ್ದಾರೆ. ಈ ವಿಷಯವನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ಅಧ್ಯಕ್ಷ ಅಡಿಲ್ಲೆ ಸುಮಾರಿವಾಲ ಖಚಿತಪಡಿಸಿದ್ದಾರೆ.

ಕೊರೋನಾ ಕಮ್ಮಿಯಾಗದಿದ್ರೆ 2021ಕ್ಕೂ ಒಲಿಂಪಿಕ್ಸ್ ಇಲ್ಲ..?

Bahrain sets World Best timing in 4x400m Mixed Relay- 3:11.89 with that Gold medal, team of Md. Anas, Poovamma, & Arokia Rajiv grabs Silver medal- 3:15.71, Kazakhastan bagged bronze- 3:19.52;

Video Courtesy- Sony LIV, ESPN India https://t.co/cp1gYmqV9q

— Athletics Federation of India (@afiindia)

ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಈ ಪೈಕಿ 8 ಚಿನ್ನ, 9 ಬೆಳ್ಳಿ ಪದಕಗಳು ಸೇರ್ಪಡೆಯಾದಂತಾಗಿದೆ. 


 

click me!