Paris 2024: ಒಲಿಂಪಿಕ್‌ ಚಿನ್ನದ ಪದಕದ ಬೆಲೆಯೆಷ್ಟು?

By Santosh Naik  |  First Published Jul 26, 2024, 5:11 PM IST

ಭೂಮಿಯ ಮೇಲಿನ ಅತ್ಯಂತ ಕಠಿಣ ಜನರು  ಒಲಿಂಪಿಕ್ಸ್‌ನಲ್ಲಿ ರಾಷ್ಟ್ರಕ್ಕೆ ಕೀರ್ತಿ ತರುವ ಏಕೈಕ ಗುರಿಯೊಂದಿಗೆ ಸ್ಪರ್ಧಿಸುತ್ತಾರೆ. ಚಿನ್ನದ ಪದಕ ತಯಾರಿಕೆಯಲ್ಲಿ ವೆಚ್ಚವಾಗಬಹುದಾದರೂ. ಅದನ್ನು ಗೆಲ್ಲುವುದು ಅಮೂಲ್ಯವಾದ ವಿಚಾರ.


ಬೆಂಗಳೂರು (ಜು.26): ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ಚಿನ್ನದ ಪದಕದ ಬೆಲೆಯೆಷ್ಟು ಅಂತಾ ಯಾರನ್ನಾದರೂ ಕೇಳಿ ನೋಡಿ. ಅದು ಅಮೂಲ್ಯವಾದದ್ದು, ಬೆಲೆಕಟ್ಟಲಾಗದು ಎನ್ನುವ ಉತ್ತರವೇ ಬರುತ್ತದೆ. ಇದು ನಿಜ ಕೂಡ ಹೌದು. ಆದರೆ, ಒಲಿಂಪಿಕ್ಸ್‌ನಲ್ಲಿ ನಿರ್ಮಿಸುವ ಚಿನ್ನದ ಪದಕಕ್ಕೆ ಇಷ್ಟು ಅಂತ ವೆಚ್ಚ ಇದ್ದೇ ಇರುತ್ತದೆ. ಹಾಗಾಗಿ ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತಯಾರಿಸಲಾಗಿರುವ ಚಿನ್ನದ ಪದಕದ ಬೆಲೆ ಎಷ್ಟು ಅನ್ನೋದನ್ನ ನೋಡೋದಾದರೆ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಮಾನದಂಡದ ಅನುಸಾರ, ಪ್ರತಿ ಒಲಿಂಪಿಕ್‌ ಚಿನ್ನದ ಪದಕದಲ್ಲಿ ಕನಿಷ್ಠ ಶೇ.92.5ರಷ್ಟು ಬೆಳ್ಳಿಯ ಅಂಶ ಇರಬೇಕು. ಇವುಗಳನ್ನು 6 ಗ್ರಾಂ ಚಿನ್ನದ ಲೇಪನ ಇರಬೇಕು ಎನ್ನುವುದಾಗಿದೆ. ಅದರ ಲೆಕ್ಕಾಚಾರದಲ್ಲಿಯೇ ನೋಡುವುದಾದರೆ ಪ್ರತಿ ಚಿನ್ನದ ಪದಕಗಳ ಬೆಲೆ 758 ಯುಎಸ್‌ ಡಾಲರ್‌. ಅಂದರೆ, 63,501.72 ರೂಪಾಯಿಗಳು.

ಆದರೆ ಈ ಲೆಕ್ಕಾಚಾರವು ಸರಳ ಮತ್ತು ನಿಖರವಾಗಿದೆಯೇ?: ವಿಶ್ವದ ಅತ್ಯತ ಮಹಾನ್‌ ಕ್ರೀಡಾ ವೇದಿಕೆಯ ಮೇಲೆ ಚಾಂಪಿಯನ್‌ ಅಥ್ಲೀಟ್‌ಗಳಿಗೆ ಮಾತ್ರವೇ ಸಿಗುವ ಪದಕ ಇದು. ಇವುಗಳಲ್ಲಿ ಒಂದು ಪದಕ ಗೆಲ್ಲಲು ಅಥ್ಲೀಟ್‌ಗಳು ವರ್ಷಗಳ ಕಾಲ ಕಠಿಣ ಅಭ್ಯಾಸ ಮಾಡಿರುತ್ತಾರೆ. ರಕ್ತವನ್ನೇ ಬೆವರಿನ ರೀತಿ ಹರಿಸಿರುತ್ತಾರೆ. ಅವರ ದೇಹದಿಂದ ಹರಿದ ಬೆವರಿಗೆ ಲೆಕ್ಕವೇ ಇರೋದಿಲ್ಲ. ಆದ ಗಾಯಗಳನ್ನೆಲ್ಲಾ ಲೆಕ್ಕವೇ ಇಟ್ಟುಕೊಳ್ಳುವುದಿಲ್ಲ. ಈ ಎಲ್ಲಾ ಪರಿಶ್ರಮಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಸಮಾಧಾನ ಸಿಗುತ್ತದೆ. ವಿಶ್ವದ ಅತ್ಯಂತ ಟಫೆಸ್ಟ್‌ ಅಥ್ಲೀಟ್‌ಗಳು ರಾಷ್ಟ್ರಕ್ಕೆ ಕೀರ್ತಿ ತರುವ ಏಕೈಕ ಗುರಿಯೊಂದಿಗೆ ಇಲ್ಲಿ ಸ್ಪರ್ಧೆ ಮಾಡುತ್ತಾರೆ. ಒಲಂಪಿಕ್‌ನಲ್ಲಿ ಪದಕ ಗೆದ್ದ ಭಾರತೀಯರ ಸಂಖ್ಯೆ ತೀರಾ ಕಡಿಮೆ.1900 ರ ಪ್ಯಾರಿಸ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತಕ್ಕೆ ಕೀರ್ತಿ ತಂದವರು ಬ್ರಿಟಿಷ್-ಭಾರತೀಯ ಮೂಲದ ಅಥ್ಲೀಟ್ ನಾರ್ಮನ್ ಪ್ರಿಚರ್ಡ್. ವಾಸ್ತವವಾಗಿ, ಪ್ರಿಚರ್ಡ್ ಅವರು ಭಾರತವನ್ನು ಪ್ರತಿನಿಧಿಸುವ 1900 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿಗಳನ್ನು ಪಡೆದಾಗ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಏಷ್ಯನ್ ಮೂಲದ ಕ್ರೀಡಾಪಟು ಎನಿಸಿದ್ದರು.

ಒಲಿಂಪಿಕ್ಸ್‌ನ ಧ್ಯೇಯವಾಕ್ಯವೆಂದರೆ "ಸಿಟಿಯಸ್, ಅಲ್ಟಿಯಸ್, ಫೋರ್ಟಿಯಸ್ - ಕಮ್ಯುನಿಟರ್", ಇದರ ಅರ್ಥ,  ವೇಗವಾದ, ಉನ್ನತ, ಬಲಶಾಲಿ. ವಿಶ್ವದ ಉನ್ನತವಾದ ಕ್ರೀಡಾ ವೇದಿಕೆಯ ಮೇಲೆ ಅತ್ಯಂತ ವೇಗವಾಗಿರುವ ಹಾಗೂ ಬಲಶಾಲಿಯಾಗಿರುವ ವ್ಯಕ್ತಿಗಳು ಮಾತ್ರವೇ ನಿಲ್ಲುತ್ತಾರೆ ಎನ್ನುವ ಅರ್ಥದ ಸೂಚಕ ಇದು. ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕದಲ್ಲಿ ಎಷ್ಟು ಪ್ರಮಾಣದ ಚಿನ್ನ ಬಳಸಲಾಗಿದೆ ಎನ್ನುವುದು ಎಂದಿಗೂ ಲೆಕ್ಕಕ್ಕೆ ಬರೋದಿಲ್ಲ. ಲೋಹದ ಈ ತುಂಡು ಯಾವ ಆಟಗಾರ ಚಾಂಪಿಯನ್‌ ಅನ್ನೋದನ್ನ ಅಷ್ಟೇ ಸೂಚಿಸುತ್ತದೆ. ಆದರೆ, ಈ ಪದಕಕ್ಕಾಗಿ ಅವರು ಮಾಡುವ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಯೇ ಇಲ್ಲಿ ಪ್ರಮುಖ.

Tap to resize

Latest Videos

undefined

ಬೊಂಜೌರ್‌ ಪ್ಯಾರಿಸ್‌: ಬ್ರೇಕ್‌ಡ್ಯಾನ್ಸ್ ಹೊಸ ಸೇರ್ಪಡೆ, ಪದಕ ತಯಾರಿಗೆ ಐಫೆಲ್‌ ಟವರ್‌ನ ಕಬ್ಬಿಣ ಬಳಕೆ!

ಅದೇ ಕಾರಣಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ಚಿನ್ನ, ಬೆಳ್ಳಿ ಅಥವಾ ಕಂಚು ಯಾವುದೇ ಬದಲಾವಣೆ ಅನಿಸೋದಿಲ್ಲ. ಇದು ಪ್ರತಿಸ್ಪರ್ಧಿಗೆ ಮಾತ್ರವೇ ವ್ಯತ್ಯಾಸ ತರಬಲ್ಲುದು.  ಅವರು ದೇಶಕ್ಕೆ ಕೀರ್ತಿ ತರುವವರೆಗೂ ಅದು ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಅನ್ನೋದು ಮುಖ್ಯವಾಗೋದಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 'ಆ್ಯಂಟಿ ಸೆಕ್ಸ್‌ ಬೆಡ್‌'; ವಿಡಿಯೋ ಹಂಚಿಕೊಂಡ ಅಸೀಸ್ ಲೇಡಿ ಅಥ್ಲೀಟ್ಸ್‌

click me!