
ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲು ಪರಿಚಯಿಸಿದ್ದ 'ಆ್ಯಂಟಿ ಸೆಕ್ಸ್ ಬೆಡ್'ಗಳು ಇದೀಗ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮಕ್ಕೂ ಎಂಟ್ರಿಕೊಟ್ಟಿವೆ. ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಇರುವಾಗ ಅಥ್ಲೀಟ್‌ಗಳು ಅನ್ಯೋನ್ಯತೆಯನ್ನು ತಡೆಯುವ ಉದ್ದೇಶದಿಂದ ಆಯೋಜಕರು ಕಾರ್ಡ್‌ಬೋರ್ಡ್‌ನಿಂದ ಮಾಡಿದ ಹಾಸಿಗೆಗಳನ್ನು ಮತ್ತೊಮ್ಮೆ ಪರಿಚಯಿಸಲಾಗಿದೆ. ಕಳೆದ ಬಾರಿಯೇ 'ಆ್ಯಂಟಿ ಸೆಕ್ಸ್ ಬೆಡ್'ಗಳು ಅಳವಡಿಸಿದ್ದರ ಬಗ್ಗೆ ಕೆಲವು ಅಥ್ಲೀಟ್‌ಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹೀಗಿದ್ದೂ ಮತ್ತೊಮ್ಮೆ ಒಲಿಂಪಿಕ್ಸ್ ಆಯೋಜಕರು 'ಆ್ಯಂಟಿ ಸೆಕ್ಸ್ ಬೆಡ್'ಗಳನ್ನು ಕ್ರೀಡಾಗ್ರಾಮದಲ್ಲಿ ವ್ಯವಸ್ಥೆ ಮಾಡಿದ್ದಾರೆ.
ಇದೀಗ ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್ ಜತೆಯಾಗಿ 'ಆ್ಯಂಟಿ ಸೆಕ್ಸ್ ಬೆಡ್'ಗಳ ಕ್ವಾಲಿಟಿ ಟೆಸ್ಟ್ ಮಾಡಿದ್ದಾರೆ. ಈ ಬೆಡ್‌ನ ಮೇಲೆ ಈ ಜೋಡಿ ವಾಲಿ ಪ್ರಾಕ್ಟೀಸ್, ಸ್ಕ್ವಾಟ್ ಜಂಪ್ಸ್, ಸ್ಟೆಪ್-ಅಪ್ಸ್ ಸೇರಿದಂತೆ ಹಲವು ಅಭ್ಯಾಸಗಳನ್ನು ನಡೆಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದಿಗ್ಗಜ ಶೂಟರ್ ಅಭಿನವ್ ಬಿಂದ್ರಾಗೆ ಒಲಿಂಪಿಕ್ ಆರ್ಡರ್ ಗೌರವ! ಏನಿದು ಒಲಿಂಪಿಕ್ ಆರ್ಡರ್?
"ಒಲಿಂಪಿಕ್ಸ್ ಗ್ರಾಮದಲ್ಲಿರುವ ಕಾರ್ಡ್‌ಬೋರ್ಡ್‌ಗಳನ್ನು ಟೆಸ್ಟ್ ಮಾಡಿದ್ದೇವೆ" ಎನ್ನುವ ಕ್ಯಾಪ್ಶನ್ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೀಗಿದೆ ನೋಡಿ ಆ ವಿಡಿಯೋ:
ಇನ್ನು ಐರ್ಲೆಂಡ್ ಜಿಮ್ನಾಸ್ಟ್ ಪಟು ರೀಸ್ ಮೆಕ್ಲೆನಾಘನ್ ಕೂಡಾ ಈ 'ಆ್ಯಂಟಿ ಸೆಕ್ಸ್ ಬೆಡ್' ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧೆಯ ಕುರಿತಾಗಿ ಹೇಳುವುದಾದರೇ, ಇದೇ ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತದಿಂದ 117 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಶ್ರೇಷ್ಠ ಸಾಧನೆ ಮಾಡಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟಾರೆ 7 ಪದಕಗಳನ್ನು ಮುಡಿಗೇರಿಸಿಕೊಂಡಿತ್ತು.
ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಬಿಸಿಸಿಐ 8.5 ಕೋಟಿ ರುಪಾಯಿ ನೆರವು ಘೋಷಿಸಿದೆ. ಈಗಾಗಲೇ ಭಾರತದ ಹಲವು ಕ್ರೀಡಾಪಟುಗಳು ಒಲಿಂಪಿಕ್ಸ್ ಕ್ರೀಡಾಗ್ರಾಮವನ್ನು ಪ್ರವೇಶಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.