
ಹಾಂಕಾಂಗ್(ನ.16) : ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ಗಾಯಗೊಂಡು ಹೊರನಡೆದ ಕಾರಣ, ಶ್ರೀಕಾಂತ್ ಸೆಮೀಸ್ ಹಾದಿ ಸುಗಮಗೊಂಡಿತು. 21-15ರಲ್ಲಿ ಮೊದಲ ಗೇಮ್ ಗೆದ್ದು ಮುನ್ನಡೆಯಲ್ಲಿದ್ದ ಶ್ರೀಕಾಂತ್, ನಿರಾಯಾಸವಾಗಿ ಉಪಾಂತ್ಯಕ್ಕೆ ತಲುಪಿದರು.
ಇದನ್ನೂ ಓದಿ: ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಶ್ರೀಕಾಂತ್, ಸಿಂಧು ಔಟ್!
ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್, ಮಾಚ್‌ರ್ ಬಳಿಕ ಇದೇ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಸೆಮಿಫೈನಲ್ಗೇರಿದ್ದಾರೆ. ಈ ವರ್ಷ ಇಂಡಿಯಾ ಓಪನ್‌ನಲ್ಲಿ ಶ್ರೀಕಾಂತ್ ರನ್ನರ್-ಅಪ್ ಆಗಿದ್ದರು. ಈ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ಹಿಂದೆ ಸರಿದ ಕಾರಣ ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತ್ತು. ಇದೀಗ ಚೆನ್ ಲಾಂಗ್ ಗಾಯಗೊಂಡು ಪಂದ್ಯ ಬಿಟ್ಟುಕೊಟ್ಟಿದ್ದು, ಶ್ರೀಕಾಂತ್ ಅದೃಷ್ಟದ ಓಟ ಮುಂದುವರಿಸಲು ನೆರವಾಗಿದೆ. ಶುಕ್ರವಾರದ ಗೆಲುವು, ಚೆನ್ ಲಾಂಗ್ ವಿರುದ್ಧ ಶ್ರೀಕಾಂತ್ ಗಳಿಸಿದ 2ನೇ ಗೆಲುವಾಗಿದೆ. ಇದರೊಂದಿಗೆ ಅವರ ವಿರುದ್ಧದ ಗೆಲುವು-ಸೋಲಿನ ಅಂತರವನ್ನು 2-6ಕ್ಕೆ ತಗ್ಗಿಸಿಕೊಂಡರು.
ಕಠಿಣ ಎದುರಾಳಿ: ಶನಿವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಶ್ರೀಕಾಂತ್, ಸ್ಥಳೀಯ ಆಟಗಾರ ಲೀ ಚೆಯುಕ್ ಯೀ ವಿರುದ್ಧ ಸೆಣಸಲಿದ್ದಾರೆ. ಲೀ, ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 21-14, 21-19 ಗೇಮ್ಗಳಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಭಾರತೀಯ ಆಟಗಾರನಿಗೆ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.