ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶ್ರೀಕಾಂತ್‌, ಸಿಂಧು ಔಟ್‌!

By Web Desk  |  First Published Nov 15, 2019, 2:00 PM IST

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ನೀರಸ ಪ್ರದರ್ಶನ ಹಾಂಕಾಂಗ್ ಓಪನ್ ಟೂರ್ನಿಯಲ್ಲೂ ಮುಂದುವರೆದಿದೆ. ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಹಾಂಕಾಂಗ್‌[ನ.15]: ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಲಯಕ್ಕೆ ಮರಳಿದ್ದಾರೆ. ಇಲ್ಲಿ ನಡೆಯುತ್ತಿರುವ ಹಾಂಕಾಂಗ್‌ ಓಪ​ನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕಳೆದ 7 ತಿಂಗಳಲ್ಲಿ ಶ್ರೀಕಾಂತ್‌ ಮೊದಲ ಬಾರಿ ಟೂರ್ನಿಯೊಂದರಲ್ಲಿ ಕ್ವಾರ್ಟರ್‌ಗೇರಿದ್ದಾರೆ. 

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ 21-11, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ರನ್ನು ಎದುರಿಸಲಿದ್ದಾರೆ. ಸದ್ಯ ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಶಟ್ಲರ್‌ ಶ್ರೀಕಾಂತ್‌ ಆಗಿದ್ದಾರೆ.

Latest Videos

undefined

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಸೈನಾ ಔಟ್‌!

ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌, 6ನೇ ಶ್ರೇಯಾಂಕಿತ ಇಂಡೋನೇಷ್ಯಾದ ಜೋನಾಥನ್‌ ಕ್ರಿಸ್ಟಿವಿರುದ್ಧ 12-21, 19-21 ಗೇಮ್‌ಗಳಲ್ಲಿ ಪರಾಭವಗೊಂಡರು. ಅನುಭವಿ ಶಟ್ಲರ್‌ ಪಿ. ಕಶ್ಯಪ್‌, ಚೈನೀಸ್‌ ತೈಪೆಯ ಟೀನ್‌ ಚೆನ್‌ ಚೌ ವಿರುದ್ಧ 21-12, 21-23, 10-21 ಗೇಮ್‌ಗಳಲ್ಲಿ ಸೋಲು ಅನುಭವಿಸಿ ಹೊರಬಿದ್ದರು.

ಸಿಂಧುಗೆ ನಿರಾಸೆ: ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ವಿಶ್ವ ಚಾಂಪಿ​ಯ​ನ್‌ ಪಿ.ವಿ. ಸಿಂಧು, ಥಾಯ್ಲೆಂಡ್‌ನ ಬುಸಾನನ್‌ ವಿರುದ್ಧ 18-21, 21-11, 16-21 ಗೇಮ್‌ಗಳಲ್ಲಿ ಸೋಲು ಕಂಡರು. ಇದರೊಂದಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಸೈನಾ ನೆಹ್ವಾಲ್‌ ಮೊದಲ ಸುತ್ತಲ್ಲೇ ಹೊರಬಿದ್ದಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ, ಜಪಾನ್‌ನ ವಟ್ನಾಬೆ, ಹಿಗಾಶಿನೊ ಜೋಡಿ ವಿರುದ್ಧ 19-21, 12-21 ಗೇಮ್‌ಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿತ್ತು.
 

click me!