ಪಾಕಿಸ್ತಾನ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಲಿಯಾಂಡರ್ ಪೇಸ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಆಡದ ನಾಯಕನ ಸ್ಥಾನದ ಕನಸು ಕಾಣುತ್ತಿದ್ದ ಮಹೇಶ್ ಭೂಪತಿಗೆ ಎಐಟಿಎ ಆಘಾತ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.15]: ಪಾಕಿಸ್ತಾನ ವಿರುದ್ಧ ನ.29, 30ರಂದು ನಡೆಯಲಿರುವ ಡೇವಿಸ್ ಕಪ್ ಏಷ್ಯಾ-ಓಷಿಯಾನಿಯಾ ಹಂತದ ಪಂದ್ಯಕ್ಕೆ ಗುರುವಾರ ಭಾರತ ಟೆನಿಸ್ ತಂಡ ಪ್ರಕಟಗೊಂಡಿತು.
ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ
undefined
ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮಹೇಶ್ ಭೂಪತಿಯನ್ನು ಆಡದ ನಾಯಕನ ಸ್ಥಾನಕ್ಕೆ ಪರಿಗಣಿಸಲಾಗಿಲ್ಲ. ಆಯ್ಕೆಗಾರ ರೋಹಿತ್ ರಾಜ್‌ಪಾಲ್ ತಂಡದ ನಾಯಕರಾಗಿದ್ದು, ಹಿರಿಯ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣಗೆ ಸ್ಥಾನ ಸಿಕ್ಕಿದೆ. ಜೀವನ್ ನೆಡುಚೆಳಿಯನ್ ಸ್ಥಾನ ಪಡೆದಿದ್ದು, ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಮೂವರು ಡಬಲ್ಸ್ ತಜ್ಞರು ಇದ್ದಾರೆ.
ಟೆನಿಸ್ ರ‍್ಯಾಂಕಿಂಗ್: ಅಗ್ರ 100ರ ಪಟ್ಟಿ ಲಿಯಾಂಡರ್ ಪೇಸ್ ಔಟ್
ಸಿಂಗಲ್ಸ್ ಆಟಗಾರರಾದ ಸುಮಿತ್ ನಗಾಲ್, ರಾಮ್‌ಕುಮಾರ್ ರಾಮನಾಥನ್, ಶಶಿ ಕುಮಾರ್ ಮುಕುಂದ್, ಸಾಕೇತ್ ಮೈನೇನಿ ಹಾಗೂ ಸಿದ್ಧಾರ್ಥ್ ರಾವತ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ನಿರ್ಧರಿಸಿದೆ. ಆದರೆ ಪಾಕಿಸ್ತಾನ ಇನ್ನೂ ಸ್ಥಳ ಘೋಷಿಸಿಲ್ಲ.