ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಹಾಗೂ ಅಶ್ವಿನ್ ಪೊನ್ನಪ್ಪ ಜೋಡಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಭಾರತೀಯ ಪಟುಗಳು ಫಲಿತಾಂಶ ಇಲ್ಲಿದೆ.
ಹಾಂಕಾಂಗ್(ನ.13): ಭಾರತದ ಸಾತ್ವಿಕ್ ಸಾಯಿರಾಜ್ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ, ಮಂಗಳವಾರ ಇಲ್ಲಿ ಆರಂಭಗೊಂಡ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ನಿಪಿಟ್‌ಫೊನ್ ಹಾಗೂ ಸಾವಿತ್ರಿ ಅಮಿತ್ರಾಪೈ ಜೋಡಿ ವಿರುದ್ಧ 16-21,
21-19, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು.
ಇದನ್ನೂ ಓದಿ: ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್‌ಗೆ ರನ್ನರ್‌ಅಪ್ ಪ್ರಶಸ್ತಿ!
undefined
ಪ್ರಿ ಕ್ವಾರ್ಟರ್‌ನಲ್ಲಿ ಭಾರತೀಯ ಜೋಡಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನ ಅರ್ಹತಾಸುತ್ತಿನಲ್ಲಿ 2 ಪಂದ್ಯಗಳನ್ನು ಗೆದ್ದ ಸೌರಭ್ ವರ್ಮಾ ಪ್ರಧಾನ ಹಂತಕ್ಕೆ ಪ್ರವೇಶಿಸಿದರು. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ ತಾನೊನ್ಗಾಸ್ಕ್ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಗೆದ್ದ ಸೌರಭ್, 2ನೇ ಪಂದ್ಯದಲ್ಲಿ ಫ್ರಾನ್ಸ್‌ನ ಲುಕಾಸ್ ಕ್ಲೇರ್ ಬೌಟ್ ವಿರುದ್ಧ 21-19, 21-19 ಗೇಮ್ ಗಳಲ್ಲಿ ಜಯಿಸಿದರು.
ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು
ಶ್ರೀಕಾಂತ್ 2ನೇ ಸುತ್ತಿಗೆ: ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನಲ್ಲಿ ಭಾರತದ ಕಿದಂಬಿ ಶ್ರೀಕಾಂತ್, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಣಸಬೇಕಿತ್ತು. ಆದರೆ ಮೊಮೊಟಾ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ, ಶ್ರೀಕಾಂತ್ 2ನೇ ಸುತ್ತಿಗೆ ವಾಕ್ ಓವರ್ ಪಡೆದಿದ್ದಾರೆ.