ಬೆಂಗಳೂರು ಮಹಿಳಾ ಸಬ್ ಇನ್ಸಪೆಕ್ಟರ್ ರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಗೆ ಆಯ್ಕೆ

By Suvarna News  |  First Published Mar 4, 2024, 3:26 PM IST

2023-24 ನೇ ಸಾಲಿನ 16 ಅಖಿಲ ಭಾರತ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್  ಗೆ ಬೆಂಗಳೂರಿನ ನಾನ್ ಗೆಜೆಟೆಡ್ ನಾಲ್ವರು ಅಧಿಕಾರಿಗಳು ಆಯ್ಕೆಯಾಗಿದ್ದಾರೆ.


ವರದಿ: ಮಂಜು

ಬೆಂಗಳೂರು (ಮಾ.4): 2023-24 ನೇ ಸಾಲಿನ 16 ಅಖಿಲ ಭಾರತ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್  ಗೆ ಬೆಂಗಳೂರಿನ ನಾನ್ ಗೆಜೆಟೆಡ್ ನಾಲ್ವರು ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

Tap to resize

Latest Videos

undefined

ಡಿಸೆಂಬರ್ ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ರು. ಶಟಲ್ ಬ್ಯಾಡ್ಮಿಂಟನ್ ನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 80 ನಾನ್ ಗೆಜೆಟೆಡ್ ಅಧಿಕಾರಿಗಳು ಭಾಗವಹಿಸಿದ್ರು. ಇದರಲ್ಲಿ ನಗರಪೊಲೀಸ್ ಆಯುಕ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಜಿಆರ್, ಶಾಂತನಾಥ ಶೆಟ್ಟಿ, ಭಾಗ್ಯಮ್ಮ, ಸುಧಾರಾಣಿ ಸೇರಿದಂತೆ ನಾಲ್ವರು  ಸಬ್ ಇನ್ಸಪೆಕ್ಟರ್ ಆಯ್ಕೆಯಾಗಿದ್ದಾರೆ.

16 ರ ನೇ ಅಂತರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ತೆಲಂಗಾಣದಲ್ಲಿ ನಡೆಯಲಿದ್ದು ಇದೇ ತಿಂಗಳು  17 ನೇ ತಾರೀಖಿನಿಂದ 23ರ ವರೆಗೆ ನಡೆಯಲಿದೆ. ತೆಲಂಗಾಣದಲ್ಲಿ ನಡೆಯಲಿರುವ ಚಾಂಪಿಯನ್ ಶಿಪ್ ನಲ್ಲಿ ಗೆದ್ದು ಬೀಗಲಿ ಎಂದು ಸಹೊದ್ಯೋಗಿಗಳು ಆಶಿಸಿದ್ದಾರೆ.

ವಿಕಲಚೇತನ ಪುಟ್ಟ ಅಭಿಮಾನಿ ಜತೆ ಕ್ರಿಕೆಟ್ ಆಡಿ ಆಸೆ ಪೂರೈಸಿದ ಸಂಜು ಸ್ಯಾಮ್ಸನ್..! ಇಲ್ಲಿದೆ ಹೃದಯಗೆದ್ದ ವಿಡಿಯೋ

click me!