* ದುಬಾರಿ ಮೊತ್ತಕ್ಕೆ ಹ್ಯಾಂಡ್ ಆಫ್ ಗಾಡ್ ಚೆಂಡು ಸೇಲ್
* 1986ರ ಫುಟ್ಬಾಲ್ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮರಡೋನಾ ಬಾರಿಸಿದ್ದ ಗೋಲು
* ಇಷ್ಟು ವರ್ಷಗಳ ಕಾಲ ಆ ಪಂದ್ಯದ ಮ್ಯಾಚ್ ರೆಫ್ರಿಯಾಗಿದ್ದ ಟ್ಯುನಿಶೀಯಾದ ನಾಸ್ಸೆರ್ ಬಳಿ ಇತ್ತು
ಲಂಡನ್(ನ.17): 1986ರ ಫುಟ್ಬಾಲ್ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾದ ಡಿಯಾಗೋ ಮರಡೋನಾರ ಕೈಗೆ ತಾಗಿ ಗೋಲು ಪಟ್ಟಿಗೆ ಸೇರಿದ್ದ ಚೆಂಡು ಬುಧವಾರ ಬರೋಬ್ಬರಿ 2.4 ಮಿಲಿಯನ್ ಅಮೆರಿಕನ್ ಡಾಲರ್(19.5 ಕೋಟಿ ರುಪಾಯಿ)ಗೆ ಹರಾಜಾಗಿದೆ. ಮರಡೋನಾ ಬಾರಿಸಿದ್ದ ಆ ಗೋಲು 'ಹ್ಯಾಂಡ್ ಆಫ್ ಗಾಡ್' ಎಂದೇ ಖ್ಯಾತಿ ಪಡೆದಿತ್ತು.
ಆ ಚೆಂಡು ಇಷ್ಟು ವರ್ಷಗಳ ಕಾಲ ಆ ಪಂದ್ಯದ ಮ್ಯಾಚ್ ರೆಫ್ರಿಯಾಗಿದ್ದ ಟ್ಯುನಿಶೀಯಾದ ನಾಸ್ಸೆರ್ ಬಳಿ ಇತ್ತು. ನಾಸ್ಸೆರ್ ಇದೀಗ ಆ ಚೆಂಡನ್ನು ಹರಾಜು ಹಾಕಿದ್ದಾರೆ. ಕಳೆದ ಆರು ತಿಂಗಳ ಹಿಂದಷ್ಟೇ ಮರಡೋನಾ ಧರಿಸಿದ್ದ 'ಹ್ಯಾಂಡ್ ಆಫ್ ಗಾಡ್' ಜೆರ್ಸಿ ದಾಖಲೆಯ 71 ಕೋಟಿ ರುಪಾಯಿಗೆ ಹರಾಜಾಗಿತ್ತು.
The ball that Diego Maradona scored the 'Hand of God' with was sold for £2,000,000 in auction yesterday. 🇦🇷💰 pic.twitter.com/W8322XkuZX
— EuroFoot (@eurofootcom)
undefined
ಮರಡೋನಾ ‘ಹ್ಯಾಂಡ್ ಆಫ್ ಗಾಡ್’ ಜೆರ್ಸಿ 71 ಕೋಟಿ ರು.ಗೆ ಹರಾಜು!
ಲಂಡನ್: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಐತಿಹಾಸಿಕ ‘ಹ್ಯಾಂಡ್ ಆಫ್ ಗಾಡ್’ ಜೆರ್ಸಿ ಬರೋಬ್ಬರಿ 9.3 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 71 ಕೋಟಿ ರು.)ಗೆ ಹರಾಜಾಗಿದೆ. ಕ್ರೀಡಾ ಪರಿಕರವೊಂದು ಇಷ್ಟುದೊಡ್ಡ ಮೊತ್ತಕ್ಕೆ ಹರಾಜಾದ ದಾಖಲೆ ಇದ್ದಾಗಿದೆ. 2019ರಲ್ಲಿ 1892ರ ಚೊಚ್ಚಲ ಒಲಿಂಪಿಕ್ಸ್‌ನ ಅಧಿಕೃತ ಪ್ರಣಾಳಿಕೆ 8.8 ಮಿಲಿಯನ್ ಡಾಲರ್‌ಗೆ ಹರಾಜಾಗಿದ್ದು ಈ ಹಿಂದಿನ ದಾಖಲೆ ಎನಿಸಿತ್ತು.
ಮರಡೋನಾ ಜೆರ್ಸಿಯನ್ನು ಖರೀದಿಸಿದವರು ಯಾರು ಎನ್ನುವ ವಿಷಯ ಬಹಿರಂಗಗೊಂಡಿಲ್ಲ. 1986ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮರಡೋನಾ ಈ ಜೆರ್ಸಿ ತೊಟ್ಟಿದ್ದರು. ಆ ಪಂದ್ಯದಲ್ಲಿ ಅವರು ಎರಡು ಆಕರ್ಷಕ ಗೋಲು ಬಾರಿಸಿದ್ದರು. ಅದರಲ್ಲಿ ಒಂದು ಗೋಲು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ವರ್ಷ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿತ್ತು.
FIFA World Cup: ಒಂದು ಪಿಂಟ್ ಬಡ್ವೈಸರ್‌ಗೆ ಕೊಡೋ ಹಣದಲ್ಲಿ ನೀವಿಲ್ಲಿ ಗೋವಾಕ್ಕೇ ಹೋಗಿ ಬರಬಹುದು!
ನಪೋಲಿ ಸ್ಟೇಡಿಯಂಗೆ ಮರಡೋನಾ ಹೆಸರು
ನೇಪಲ್ಸ್: ಅರ್ಜೆಂಟೀನಾದ ದಿಗ್ಗಜ ಫುಟ್ಬಾಲಿಗ ಡಿಗೋ ಮರಡೋನಾ ಹೆಸರನ್ನು ಇಟಲಿಯ ಫುಟ್ಬಾಲ್ ಕ್ಲಬ್ ನಪೋಲಿ ಇಲ್ಲಿರುವ ತನ್ನ ಕ್ರೀಡಾಂಗಣಕ್ಕೆ ಇಟ್ಟಿದೆ. ಸ್ಥಳೀಯ ಆಡಳಿತ ಕ್ರೀಡಾಂಗಣದ ಹೆಸರು ಬದಲಿಸಲು ಅನುಮತಿ ನೀಡಿದ ಕೂಡಲೇ ನಪೋಲಿ ಕ್ಲಬ್ ಪ್ರಕಟಣೆ ಹೊರಡಿಸಿದೆ. 1984ರಿಂದ 1991ರ ವರೆಗೂ ಮರಡೋನಾ ನಪೋಲಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ತಂಡ ರಾಷ್ಟ್ರೀಯ ಚಾಂಪಿಯನ್‌ಶಿಪ್, ಯುರೋಪಿಯನ್ ಚಾಂಪಿಯನ್‌ಶಿಪ್ ಜಯಸಿತ್ತು. 2020ರ ನವೆಂಬರ್ ತಿಂಗಳಿನಲ್ಲಿ ಹೃದಯಾಘಾತದಿಂದ ಡಿಯಾಗೋ ಮರಡೋನಾ ಕೊನೆಯುಸಿರೆಳೆದಿದ್ದಾರೆ.