Pro Kabaddi League: ತೆಲುಗು ಟೈಟಾನ್ಸ್‌ಗೆ 10ನೇ ಸೋಲು..!

Published : Nov 06, 2022, 06:48 AM IST
Pro Kabaddi League: ತೆಲುಗು ಟೈಟಾನ್ಸ್‌ಗೆ 10ನೇ ಸೋಲು..!

ಸಾರಾಂಶ

ಸೋಲಿನ ಸುಳಿಯಿಂದ ಹೊರಬರಲು ಪರಡಾಡುತ್ತಿರುವ ತೆಲುಗು ಟೈಟಾನ್ಸ್‌ ತಮಿಳ್ ತಲೈವಾಸ್ ಎದುರು ಮತ್ತೆ ಸೋಲಿನ ಕಹಿ ಅನುಭವಿಸಿದ ಟೈಟಾನ್ಸ್ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದ ತಮಿಳ್ ತಲೈವಾಸ್

ಪುಣೆ(ನ.06): 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್‌ 10ನೇ ಸೋಲು ಅನುಭವಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ಎದುರು 31-39 ಅಂಕಗಳಿಂದ ಪರಾಭವಗೊಂಡಿತು. ಟೂರ್ನಿಯಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ತಮಿಳ್ ತಲೈವಾಸ್ ತಂಡಕ್ಕಿದು 4ನೇ ಗೆಲುವಾಗಿದೆ.

ಮೊದಲ 20 ನಿಮಿಷದ ಮುಕ್ತಾಯಕ್ಕೆ ತೆಲುಗು ಟೈಟಾನ್ಸ್‌ 16-13 ಅಂಕಗಳಿಂದ ಮುಂದಿದ್ದರೂ ಬಳಿಕ ಪುಟಿದೆದ್ದ ತಮಿಳ್ ತಲೈವಾಸ್ ಭರ್ಜರಿ ಗೆಲವು ಸಾಧಿಸಿತು. ಅಜಿಂಕ್ಯಾ ಪವಾರ್ 11 ರೈಡ್ ಪಾಯಿಂಟ್, ಸಾಗರ್ 8 ಟ್ಯಾಕಲ್ ಅಂಕ ಗಳಿಸಿದರೂ ತೆಲುಗು ಟೈಟಾನ್ಸ್‌ಗೆ ಗೆಲುವು ಸಿಗಲಿಲ್ಲ. ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ವಿರುದ್ದ ಬೆಂಗಾಲ್ ವಾರಿಯರ್ಸ್‌ 45-40 ಅಂಕಗಳಿಂದ ಜಯಗಳಿಸಿತು. ಬೆಂಗಾಲ್ ವಾರಿಯರ್ಸ್‌ ಪರ ಮಣೀಂದರ್ ಸಿಂಗ್ 20 ಅಂಕಗಳಿಸಿ ಮಿಂಚಿದರು. ಇನ್ನು ಯುಪಿ ಯೋಧಾಸ್ ಹಾಗೂ ಹರ್ಯಾಣ ಸ್ಟೀಲರ್ಸ್‌ ನಡುವಿನ ಪಂದ್ಯ36-36 ಅಂಕಗಳಿಂದ ಟೈ ಆಯಿತು.

Khel Ratna ಪ್ರಶಸ್ತಿಗೆ ಶರತ್ ಕಮಲ್ ಹೆಸರು ಶಿಫಾರಸು, ಲಕ್ಷ್ಯ ಸೆನ್‌ಗೆ ಒಲಿಯಲಿದೆ ಅರ್ಜುನ ಪ್ರಶಸ್ತಿ

ಸದ್ಯ ಪುಣೇರಿ ಪಲ್ಟಾನ್ ತಂಡವು 6 ಗೆಲುವು, 2 ಸೋಲು ಹಾಗೂ 2 ಟೈ ಪಂದ್ಯಗಳೊಂದಿಗೆ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಬುಲ್ಸ್‌ ತಂಡವು 10 ಪಂದ್ಯಗಳಿಂದ 6 ಗೆಲುವು, 3 ಸೋಲು ಹಾಗೂ ಒಂದು ಟೈ ಪಂದ್ಯಗಳೊಂದಿಗೆ 35 ಅಂಕಗಳಿಸಿದ್ದು, ಇಂದಿನ ಪಂದ್ಯ ಜಯಿಸಿದರೇ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇನ್ನು ತೆಲುಗು ಟೈಟಾನ್ಸ್‌ ತಂಡವು 11 ಪಂದ್ಯಗಳನ್ನಾಡಿ 1 ಗೆಲುವು ಹಾಗೂ 10 ಸೋಲು ಸಹಿತ 8 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು:
ಬೆಂಗಳೂರು ಬುಲ್ಸ್‌-ಗುಜರಾತ್ ಜೈಂಟ್ಸ್‌, ಸಂಜೆ 7.30ಕ್ಕೆ
ಪುಣೇರಿ ಪಲ್ಟಾನ್-ತಮಿಳ್ ತಲೈವಾಸ್, ರಾತ್ರಿ 8.30ಕ್ಕೆ.

ವಿಶ್ವ ಹಾಕಿಗೆ ತಯ್ಯಬ್‌ ಅಧ್ಯಕ್ಷ

ಲಾಸನ್‌: ಭಾರತದ ನರೇಂದ್ರ ಬಾತ್ರಾ ರಾಜೀನಾಮೆಯಿಂದ ತೆರವಾಗಿದ್ದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಅಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನದ ತಯ್ಯಬ್‌ ಇಕ್ರಂ ಆಯ್ಕೆಯಾಗಿದ್ದಾರೆ. ಹಾಲಿ ಏಷ್ಯನ್‌ ಹಾಕಿ ಫೆಡರೇಶ್‌ನ ಸಿಇಒ ಆಗಿರುವ ಇಕ್ರಂ ಚುನಾವಣೆಯಲ್ಲಿ ಬೆಲ್ಜಿಯಂನ ಮಾರ್ಕ್ ಕುಡ್ರೊನ್‌ರನ್ನು 79-47 ಮತಗಳಿಂದ ಸೋಲಿಸಿದರು. 2016ರಲ್ಲಿ ಎಫ್‌ಐಎಚ್‌ ಅಧ್ಯಕ್ಷ ಸ್ಥಾನಕ್ಕೇರಿದ್ದ ಬಾತ್ರಾ ಕಳೆದ ಜುಲೈನಲ್ಲಿ ಹುದ್ದೆ ತೊರೆದಿದ್ದರು.

ಏಷ್ಯನ್‌ ಬಾಕ್ಸಿಂಗ್‌: ಪ್ರೀತಿ, ಮೀನಾಕ್ಷಿ ಸೆಮೀಸ್‌ಗೆ ಲಗ್ಗೆ

ಅಮ್ಮಾನ್‌(ಜೋರ್ಡನ್‌): ಭಾರತದ ತಾರಾ ಬಾಕ್ಸಿಂಗ್‌ ಪಟುಗಳಾದ ಮೀನಾಕ್ಷಿ ಹಾಗೂ ಪ್ರೀತಿ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. ಮೀನಾಕ್ಷಿ ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಫಿಲಿಪ್ಪೀನ್ಸ್‌ನ ಐರಿಶ್‌ ಮಾಗ್ನೊ ವಿರುದ್ಧ 4-1ರಿಂದ ಗೆದ್ದರೆ, 57 ಕೆ.ಜಿ. ವಿಭಾಗದಲ್ಲಿ ಪ್ರೀತಿ ಉಜ್ಬೇಕಿಸ್ತಾನದ ತುರ್ದಿಬೆಕೋವಾರನ್ನು 5-0 ಅಂತರದಲ್ಲಿ ಸೋಲಿಸಿದರು. ಆದರೆ ಸಾಕ್ಷಿ(54 ಕೆ.ಜಿ.) ಕ್ವಾರ್ಟರ್‌ನಲ್ಲಿ ಸೋಲನುಭವಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!