ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪ್ರತಿ ಭಾರಿ ಕಾಂಡೋಮ್‌ಗಳು ಬಾರಿ ಸದ್ದು ಮಾಡುತ್ತವೆ. ಸದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಈಗಾಗಲೇ 1.50 ಲಕ್ಷ ಕಾಂಡೋಮ್ ವಿತರಿಸಲಾಗಿದೆ. ಆದರೆ ಕಾಮನ್‌ವೆಲ್ತ್ ಗೇಮ್ಸ್ ಕಾಂಡೋಮ್ ವಿಚಾರದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ನವದೆಹಲಿ(ಜು.31): ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕಕ್ಕಾಗಿ ತೀವ್ರ ಪೈಪೋಟಿ ಎರ್ಪಟ್ಟಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಈ ಕ್ರೀಡಕೂಟದಲ್ಲಿ ಭಾರತ ಒಂದು ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ 4 ಪದಕ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ 32 ಪದಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಆರಂಭಿಕ 3 ದಿನದಲ್ಲಿ 1.50 ಲಕ್ಷ ಕಾಂಡೋಮ್‌ಗಳನ್ನು ಕ್ರೀಡಾಪಟುಗಳಿಗೆ ವಿತರಿಸಲಾಗಿದೆ. ಟೂರ್ನಿ ಅಂತ್ಯದ ವೇಳೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟ ಗರಿಷ್ಠ ಕಾಂಡೋಮ್ ವಿತರಣೆಯಲ್ಲಿ ಸದ್ದು ಮಾಡಿದ್ದರೆ, 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಬಳಿಸಿದ ಕಾಂಡೋಮ್‌ನಿಂದ ಸದ್ದು ಮಾಡಿದೆ. ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮದಲ್ಲಿ ಕ್ರೀಡಾಪಟುಗಳು ಬಳಸಿದ ಕಾಂಡೋಮ್‌ಗಳನ್ನು ಚರಂಡಿಗೆ ಎಸೆದ ಕಾರಣ ಇಡೀ ಚರಂಡಿ ಬ್ಲಾಕ್ ಆಗಿ ಭಾರಿ ಸುದ್ದಿಯಾಗಿತ್ತು.
ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡೆಗಿಂತ ಹೆಚ್ಚಾಗಿ ಇತರ ಕಾರಣಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ, ಅಸಮರ್ಪಕ ವ್ಯವಸ್ಥೆ ಸೇರಿದಂತೆ ಹಲವು ಹಿನ್ನಡೆಗಳು ಭಾರತಕ್ಕೆ ಕಪ್ಪು ಚುಕ್ಕೆ ತಂದಿದೆ. ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರದಿಂದ ವ್ಯವಸ್ಥೆಗಳು ಅಸಮರ್ಪಕವಾಗಿತ್ತು. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲಾಗಿತ್ತು. ಆದರೆ ಬಳಕೆಯಾದ ಕಾಂಡೋಮ್‌ಗಳನ್ನು ಹೆಚ್ಚಿನ ಕ್ರೀಡಾಪಟುಗಳು ದೆಹಲಿ ಕ್ರೀಡಾಗ್ರಾಮದ ಚರಂಡಿಗೆ ಎಸೆದಿದ್ದರು. ಇದರಿಂದ ಚರಂಡಿ ಸಂಪೂರ್ಣ ಬ್ಲಾಕ್ ಆಗಿತ್ತು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಹೊಸ ದಾಖಲೆ ಬರೆದ ಜೆರೆಮಿ
ಕಾಮನ್‌ವೆಲ್ತ್ ಗೇಮ್ಸ್ ಮುಗಿದ ಬಳಿಕ ಕ್ರೀಡಾ ಗ್ರಾಮದ ಚರಂಡಿ ನೀರು ಹರಿದು ಹೋಗಲು ಸಾಧ್ಯವಾಗದೆ ಬ್ಲಾಕ್ ಆಗಿತ್ತು. ಈ ವೇಳೆ ಸರಿಪಡಿಸಲು ಮುಂದಾದಾಗ ಇಲ್ಲಿನ ಅಸಲಿ ವಿಚಾರ ಬಯಲಾಗಿದೆ. ಚರಂಡಿಯಲ್ಲಿ 4,000 ಕ್ಕೂ ಹೆಚ್ಚಿನ ಬಳಿಸಿದ ಕಾಂಡೋಮ್ ಸಿಕ್ಕಿತ್ತು. ಇನ್ನು ಇತರ ಚರಂಡಿಗಳಲ್ಲಿ ಬಳಸಿದ ಕಾಂಡೋಮ್ ಸಿಕ್ಕಿತ್ತು.
ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 7,000 ಕ್ರೀಡಾಪಟುಗಳು, ಕೋಚ್ ಹಾಗೂ ಸಿಬ್ಬಂದಿಗಳು ನೆಲೆಸಿದ್ದರು. ಇವರಿಗೆ ಉಚಿತ ಕಾಂಡೋಮ್ ನೀಡಲಾಗಿತ್ತು. ಸುರಕ್ಷತಾ ಲೈಂಗಿಕತೆಗೆ ಪ್ರತಿ ಕ್ರೀಡಾಕೂಟದಲ್ಲಿ ಉಚಿತ ಕಾಂಡೋಮ್ ನೀಡಲಾಗುತ್ತದೆ. ಆದರೆ ಇದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಕಾಂಡೋಮ್‌ನಿಂದಲೇ ತುಂಬಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ವಿಚಾರವನ್ನು ಅಂದಿನ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಅಧ್ಯಕ್ಷ ಮೈಕ್ ಫೆನ್ನಲ್ ಭೇಷ್ ಎಂದಿದ್ದರು. ಕ್ರೀಡಾಪಟುಗಳು ಸುರಕ್ಷಿತ ಲೈಂಗಿಕತೆಗೆ ಆದ್ಯತೆ ನೀಡಿದ್ದಾರೆ. ಇದು ಉತ್ತಮ ಎಂದಿದ್ದರು.
ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಮುಗಿದ ಬಳಿಕ ಕಾಂಡೋಮ್ ವಿಶ್ವಮಟ್ಟದಲ್ಲಿ ಸುದ್ದಿಯಾದರೆ, ಬಳಿಕ ಭ್ರಷ್ಟಚಾರ ಅಂದಿನ ಸರ್ಕಾರವನ್ನು ಕಾಡಿತ್ತು. ಭಾರತದ ಅಂದಿನ ಒಲಿಂಪಿಕ್ ಅಸೋಸಿಯೇಶನ್ ಅಧ್ಯಶ್ರ ಸುರೇಶ್ ಕಲ್ಮಾಡಿ 10 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.