ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಹೊಸ ದಾಖಲೆ ಬರೆದ ಜೆರೆಮಿ ಲಾಲ್ರಿನ್ನುಂಗಾ!

By Suvarna News  |  First Published Jul 31, 2022, 4:04 PM IST

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಎರಡನೇ ಚಿನ್ನದ ಪದಕ ಬಾಚಿಕೊಂಡಿದೆ. ಮೀರಾಬಾಯಿ ಚಾನು ಬಳಿಕ ಇದೀಗ ಪುರಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಿನ್ನ ಗೆದ್ದುಕೊಂಡಿದ್ದಾರೆ.
 


ಬರ್ಮಿಂಗ್‌ಹ್ಯಾಮ್(ಜು.31): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಎರಡನೇ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಭಾರತದ ವೈಯ್ಟ್ ಲಿಫ್ಟರ್ ಮೀರಾಬಾಯಿ ಚಾನು ಮೊದಲ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ, ಇದೀಗ ಪುರುಷರ ವೈಯ್ಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 67ಕೆಜಿ ವಿಭಾಗದ ವೈಯ್ಟ್‌ಲಿಫ್ಟಿಂಗ್ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಮೊದಲ ಪ್ರಯತ್ನದಲ್ಲೇ 136 ಕೆಜಿ ಭಾರ ಎತ್ತಿ ಸೈ ಎನಿಸಿಕೊಂಡರು. ಎರಡನೇ ಪ್ರಯತ್ನದಲ್ಲಿ 140 ಕೆಜಿ ಭಾರತ ಎತ್ತುವಲ್ಲಿ ಯಶಸ್ವಿಯಾದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಡಿ ಲಿಫ್ಟ್‌ನೊಂದಿಗೆ ಒಟ್ಟು 300 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮೀರಾ ಬಾಯಿ ಚಾನು ಮಹಿಳಾ ವೈಯ್ಟ್‌ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು. ಇದೀಗ ಜೆರೆಮಿ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.  ಈ ಮೂಲಕ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿದೆ ಒಟ್ಟು 5 ಪದಕ ಬಾಚಿಕೊಂಡಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 

2021ರಲ್ಲಿ ಕಾಲಿನ ಗಾಯಕ್ಕೆ ತುತ್ತಾದ ಜೆರಮಿ ಕೆಲ ಕಾಲ ಕ್ರೀಡೆಯಿಂದ ದೂರ ಉಳಿದು ವಿಶ್ರಾಂತಿಗೆ ಜಾರಿದ್ದರು. ಬಳಿಕ ತಾಷ್ಕೆಂಟ್‌ನಲ್ಲಿ ನಡೆದ ವೈಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಜೆರೆಮಿ 2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. 

Tap to resize

Latest Videos

undefined

ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ, ಭಾರತಕ್ಕೆ 4ನೇ ಪದಕ

ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು
2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ ಪದಕ ವಿಜೇತ ಮೀರಾಬಾಯಿ ಚಾನು ಮೊದಲ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮಾಜಿ ವಿಶ್ವಚಾಂಪಿಯನ್ ಚಾನು 44 ಕೆಜಿ ವಿಭಾಗದಲ್ಲಿ 201 ಕೆ.ಜಿ.(88 ಕೆ.ಜಿ. + 113 ಕೆ.ಜಿ.) ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಕ್ಲೀನ್‌ ಅಂಡ್‌ ಜರ್ಕ್ ವಿಭಾಗದ ಮೊದಲ ಯತ್ನದಲ್ಲೇ 109 ಕೆ.ಜಿ. ಭಾರ ಎತ್ತಿ ಚಿನ್ನ ಖಚಿತ ಪಡಿಸಿಕೊಂಡ ಚಾನು, 2ನೇ ಯತ್ನದಲ್ಲಿ 113 ಕೆ.ಜಿ. ಎತ್ತಿದರು. ಇದು ಕ್ಲೀನ್ ಜರ್ಕ್ ವಿಭಾಗದಲ್ಲಿ ದಾಖಲೆಯಾಗಿದೆ.

ಕಂಚು ಗೆದ್ದ ಕನ್ನಡದ ಕುವರ
ಕರ್ನಾಟಕದ ಕುಂದಾಪುರ ಮೂಲದ ವೇಟ್‌ ಲಿಫ್ಟರ್‌ ಗುರುರಾಜ್‌ ಪೂಜಾರಿ, ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಿರುವ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪರ 2ನೇ ಪದಕ ಗೆದ್ದಿದ್ದಾರೆ. 61 ಕೆ.ಜಿ. ಪುರುಷರ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಅವರು ಕಂಚಿನ ಪದಕ ಪಡೆದಿದ್ದಾರೆ. 2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಅವರು 56 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

click me!