Commonwealth Games ಭಾರತಕ್ಕೆ ಮೊದಲ ಚಿನ್ನದ ಕಿರೀಟ, ಮೀರಾಬಾಯಿ ಚಾನು ಹೊಸ ದಾಖಲೆ!

By Suvarna NewsFirst Published Jul 30, 2022, 10:32 PM IST
Highlights

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ. ವೈಯ್ಟ್‌ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ

ಬರ್ಮಿಂಗ್‌ಹ್ಯಾಮ್(ಜು.30):  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಭೇಟೆ ಮುಂದುವರಿದಿದೆ. ಬೆಳ್ಳಿ, ಕಂಚಿನ ಪದಕದೊಂದಿಗೆ ಸಂಭ್ರಮಿಸಿದ ಭಾರತಕ್ಕೆ ಇದೀಗ ಚಿನ್ನದ ಪದಕ ಲಭಿಸಿದೆ. ವೈಯ್ಟ್‌ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 49ಕೆಜೆ ವಿಭಾಗದಲ್ಲಿ ಮೀರಾಬಾಯಿ ಚಾನು 113 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ಮೀರಾಬಾಯಿ ಚಾನು 113 ಕೆಜಿ ಎತ್ತುವ ಮೂಲಕ ಒಟ್ಟು 201 ಕೆಜಿ ದಾಖಲೆ ಬರೆದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಇದೀಗ ಕಾಮನ್‌ವಲ್ತ್ ಗೇಮ್ಸ್‌ನಲ್ಲಿ ತಮ್ಮ ಪ್ರದರ್ಶನ ಮತ್ತಷ್ಟು ಉತ್ತಮಪಡಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮೀರಾ ಬಾಯಿ ಚಾನುಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. 

ಸಿಂಗಾಪೂರ ವೇಟ್‌ಲಿಫ್ಟಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಮೊದಲ ಬಾರಿ 55 ಕೆ.ಜಿ. ವಿಭಾಗದದಲ್ಲಿ ಸ್ಪರ್ಧಿಸಿದ ಅವರು ಒಟ್ಟು 191 ಕೆ.ಜಿ. ಭಾರ ಎತ್ತಿದರು. 27 ವರ್ಷದ ಚಾನು ಕಾಮನ್‌ವೆಲ್ತ್‌ ರಾರ‍ಯಂಕಿಂಗ್‌ ಆಧಾರದಲ್ಲಿ ಗೇಮ್ಸ್‌ನ 49 ಕೆ.ಜಿ. ವಿಭಾಗದಲ್ಲೂ ಅರ್ಹತೆ ಪಡೆದುಕೊಂಡಿದ್ದರು. 

Commonwealth Games 2022: ಕಂಚಿನ ಪದಕ ಜಯಿಸಿದ ಕನ್ನಡಿಗ ಗುರುರಾಜ ಪೂಜಾರಿ

ಗುರುರಾಜ್‌ಗೆ ಕಂಚಿಿನ ಪದಕ
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌-2022 ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ಗೆದ್ದುಕೊಡುವಲ್ಲಿ ಕುಂದಗನ್ನಡಿಗ ಗುರುರಾಜ ಪೂಜಾರಿ ಯಶಸ್ವಿಯಾಗಿದ್ದಾರೆ. ಪುರುಷರ 61 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ 269 ಕೆ.ಜಿ. ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು, ಎರಡನೇ ಬಾರಿ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೊದಲು 2018ರಲ್ಲಿ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಪುರುಷರ 56 ಕೆ.ಜಿ. ವಿಭಾಗದಲ್ಲಿ ಗುರುರಾಜ್‌ ಪೂಜಾರಿ ಬೆಳ್ಳಿ ಜಯಿಸಿದ್ದರು.

click me!