ವಿಶ್ವ ಚಾಂಪಿಯನ್‌ಶಿಪ್ ಈಜು, ಪೂಲ್‌ನಲ್ಲಿ ಪ್ರಜ್ಞೆ ತಪ್ಪಿದ ಸ್ವಿಮ್ಮರ್‌ನ್ನು ನೀರಿಗೆ ಹಾರಿ ರಕ್ಷಿಸಿದ ಕೋಚ್!

By Suvarna NewsFirst Published Jun 23, 2022, 6:24 PM IST
Highlights
  • FINA ವಿಶ್ವ ಅಕ್ವಟಿಕ್ ಚಾಂಪಿಯನ್‌ಶಿಪ್ ಟೂರ್ನಿ
  • ನೀರಿನೊಳಗೆ ಮೂರ್ಛೆ ಹೋದ ಅಮೆರಿಕ ಈಜುಪಟು
  • ವೀಕ್ಷಕರ ಸೂಚನೆ ಬೆನ್ನಲ್ಲೇ ನೀರಿಗೆ ಹಾರಿದ ಕೋಚ್

ಬುಡಾಪೆಸ್ಟ್(ಜೂ.23): ವಿಶ್ವ ಅಕ್ವಟಿಕ್ FINA ಚಾಂಪಿಯನ್‌ಶಿಪ್ ಸ್ವಿಮ್ಮಿಂಗ್ ಕ್ರೀಡಾಕೂಟದಲ್ಲಿ ಭಯಾನಕ ಘಟನೆ ನಡೆದಿದೆ. ಆರ್ಟಿಸ್ಟಿಕ್ ಫೈನಲ್ ಸುತ್ತಿನ ವೈಯುಕ್ತಿಕ ರೌಂಡ್‌ನಲ್ಲಿ ಈಜುಕೊಳಕ್ಕೆ ಹಾರಿದ ಅಮೆರಿಕ ಈಜುಪಟು ಆ್ಯನಿಟಾ ಅಲ್ವರೆಜ್ ಮೂರ್ಛೆ ಹೋಗಿದ್ದಾಳೆ. ತಕ್ಷಣ ನೀರಿಗೆ ಹಾರಿದ ಕೋಚ್ ಈಜುಪಟುವನ್ನು ರಕ್ಷಿಸಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಕ್ವಟಿಕ್ FINA ಚಾಂಪಿಯನ್‌ಶಿಪ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಂಕ್ರೋನೈಜ್ಡ್ ಸ್ವಿಮ್ಮಿಂಗ್‌ನಲ್ಲಿ ನಾಲ್ಕು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಆ್ಯನಿಟಾ ಅಲ್ವರೆಜ್ ಇಂದೂ ಕೂಡ ಚಿನ್ನದ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದರು. ಫೈನಲ್ ಸುತ್ತು ಪ್ರವೇಶಿಸಿದ ಅ್ಯನಿಟಾ ಅಲ್ವರೆಜ್ ಚಿನ್ನದ ಪದಕ್ಕಾಗಿ ಸಜ್ಜಾಗಿದ್ದರು. ವೈಯುಕ್ತಿಕ ರೌಂಡ್‌‌ನ ಫೈನಲ್ ಸುತ್ತಿಗಾಗಿ ಪೂಲ್‌ಗೆ ಧುಮುಕಿದ ಆ್ಯನಿಟಾ ಮೋರ್ಛೆ ಹೋಗಿದ್ದಾರೆ.

Mother Of The Day: ನೀರಿಗೆ ಹಾರಿದ ಮಗನ ಒಂದೇ ಕೈಯಲ್ಲಿ ರಕ್ಷಿಸಿದ ತಾಯಿ

ಎಲ್ಲರೂ ನೋಡುತ್ತಿದ್ದಂತೆ ಆ್ಯನಿಟಾ ಅಲ್ವರೆಜ್ ಈಜುಕೊಳದ ತಳಭಾಗ ತಲುಪಿದ್ದಾರೆ. ಯಾವುದೇ ಚಲನೆ ಇಲ್ಲದೇ ಇರುವುದನ್ನು ನೋಡಿದ ಪ್ರೇಕ್ಷಕರು ಕಿರುಚಾಡಿದ್ದಾರೆ. ಪ್ರೇಕ್ಷಕರ ಸೂಚನೆ ಗಮಿಸಿದ ಆಕೆಯ ಕೋಚ್ ಆ್ಯಂಡ್ರು ಫ್ಯುಯೆಂಟ್ಸ್ ಒಂದು ಕ್ಷಣ ತಡಮಾಡದೆ ನೀರಿಗೆ ಹಾರಿದ್ದಾರೆ. ಈಜುಕೊಳದ ತಳಭಾಗಕ್ಕೆ ತಲುಪಿದ್ದಾರೆ. ಇತ್ತ ಇತರ ಈಜುಪಟುಗಳು ನೆರವಿಗೆ ಬಂದಿದ್ದಾರೆ. 

ತಳಭಾಗದಲ್ಲಿ ಮೂರ್ಛೆ ಹೋಗಿದ್ದ ಈಜುಪಟುವನ್ನು ಮೆಲಕ್ಕೆ ತಂದು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಆ್ಯನಿಟಾ ಅಲ್ವರೆಜ್ ಚೇತರಿಕೆ ಕಾಣುತ್ತಿದ್ದಾರೆ. ಅತಿಯಾದ ನಾಡಿಮಿಡಿತ ಹಾಗೂ ಇತರ ಕಾರಣಗಳಿಂದ ಮೂರ್ಛೆ ಹೋಗಿದ್ದಾರೆ. ಹೆಚ್ಚಿನ ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಚೇತರಿಸಿಕೊಂಡ ಬಳಿಕ ಮತ್ತೆ ಪರೀಕ್ಷೆ ನಡೆಸಲಾಗುತ್ತೆ. ಈ ಪರೀಕ್ಷಾ ವರದಿ ಆಧಾರದಲ್ಲಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!

ಪ್ರೇಕ್ಷಕರು ಈಜುಪಟು ಚಲನೆ ಇಲ್ಲದೆ ಇರುವುದನ್ನು ಗಮನಿಸಿ ರಕ್ಷಣಾ ತಂಡಕ್ಕೆ ಸೂಚನೆ ನೀಡಿದ್ದಾರೆ. ಆದರೆ ಪ್ರೇಕ್ಷಕರ ಸೂಚನೆಯನ್ನು ಅರ್ಥಮಾಡಿಕೊಳ್ಳಲು ಲೈಫ್ ಗಾರ್ಡ್ ವಿಫಲವಾಗಿದ್ದಾರೆ. ಇತ್ತ ಕೋಚ್ ಕೂಡ ರಕ್ಷಣೆಗೆ ಲೈಫ್ ಗಾರ್ಡ್‌ಗೆ ಸೂಚಿಸಿದ್ದಾರೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾಗದ ಕಾರಣ, ಕೋಚ್ ಆ್ಯಂಡ್ರು ಫ್ಯುಯೆಂಟ್ಸ್ ನೀರಿಗೆ ಹಾರಿ ಈಜುಪಟುವನ್ನು ರಕ್ಷಿಸಿದ್ದಾರೆ. 

 

ಖೇಲೋ ಇಂಡಿಯಾ: ಒಟ್ಟು 10 ಚಿನ್ನ ಗೆದ್ದ ಕರ್ನಾಟಕ

ಪಂಚಕುಲ: 4ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಮತ್ತೆ ಪದಕ ಬೇಟೆಗೆ ಇಳಿದಿದೆ. ರಾಜ್ಯದ ಸ್ಪರ್ಧಿಗಳು ಈಗಾಗಲೇ 10 ಚಿನ್ನದ ಪದಕ ಬಾಚಿಕೊಂಡಿದ್ದು, ಬಹುತೇಕ ಪದಕಗಳು ಈಜು ಸ್ಪರ್ಧೆಯಲ್ಲಿ ಬಂದಿವೆ. ಹಷಿಕಾ ಬಾಲಕಿರ 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, 400 ಮೀ. ಫ್ರಿಸ್ಟೈಲ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. 100 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿಧಿಮಾ ಚಿನ್ನ, ನೀನಾ ಬೆಳ್ಳಿ ಪಡೆದಿದ್ದಾರೆ. 100 ಮತ್ತು 200 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ರಾಜ್ಯದ ಈಜುಪಟುಗಳು ಕ್ಲೀನ್‌ಸ್ವೀಪ್‌ ಮಾಡಿದರು. ಎರಡೂ ವಿಭಾಗದಲ್ಲಿ ಲಕ್ಷ್ಯ ಚಿನ್ನ ಗೆದ್ದರು. ಭಾರತ ಒಟ್ಟಾರೆ 11 ಬೆಳ್ಳಿ, 10 ಕಂಚಿನ ಪದಕವನ್ನೂ ಗೆದ್ದಿದ್ದು, ಒಟ್ಟು 32 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಮಿನಿ ಒಲಿಂಪಿಕ್ಸ್‌: ಧಿನಿಧಿಗೆ 3 ಚಿನ್ನ!
ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಈಜುಪಟು ಧಿನಿಧಿ ದೇಸಿಂಗು 2ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ 3 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಬುಧವಾರ ನಡೆದ ಬಾಲಕಿಯರ 50 ಮೀ. ಫ್ರೀ ಸ್ಟೈಲ್‌ ಸ್ಪರ್ಧೆಯಲ್ಲಿ ಬೆಂಗಳೂರಿನ ಧಿನಿಧಿ 27.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಬೆಂಗಳೂರಿನ ರುಜುಲಾ, ಶ್ರೀಚರಣಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. 200 ಮೀ. ಬ್ಯಾಕ್‌ಸ್ಟೊ್ರೕಕ್‌(2 ನಿಮಿಷ 34.41 ಸೆಕೆಂಡ್‌) ಮತ್ತು 50 ಮೀ.ಬಟರ್‌ಫ್ಲೈ(29.35 ಸೆಕೆಂಡ್‌) ವಿಭಾಗಗಳಲ್ಲೂ ಚಿನ್ನದ ಪದಕ ಧಿನಿಧಿ ಪಾಲಾಯಿತು. ಬೆಂಗಳೂರಿನ ಜನ್ಯ ಬಾಲಕಿಯರ 100 ಮೀ. ಬಟರ್‌ಫ್ಲೈನಲ್ಲಿ ಚಿನ್ನ, 50 ಮೀ. ಬಟರ್‌ ಫ್ಲೈ ಹಾಗೂ 200 ಮೀ. ಬಟರ್‌ ಫ್ಲೈ ಸ್ಪರ್ಧೆಗಳಲ್ಲಿ ಕಂಚು ಜಯಿಸಿದರು.

click me!