ಡೇವಿಸ್‌ ಕಪ್‌ ಟೂರ್ನಿ: ಹೊರಬಿದ್ದ ಭಾರತ ತಂಡ

By Kannadaprabha News  |  First Published Mar 9, 2020, 11:52 AM IST

ಟೆನಿಸ್ ವಿಶ್ವಕಪ್ ಎಂದೇ ಹೆಸರಾದ ಡೇವಿಸ್ ಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲೇ ಭಾರತ ತಂಡವು ಕ್ರೊವೇಷಿಯಾಗೆ ಶರಣಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ಜಾಗ್ರೆಬ್‌(ಮಾ.09): ಕ್ರೊವೇಷಿಯಾ ವಿರುದ್ಧದ ಡೇವಿಸ್‌ ಕಪ್‌ ಅರ್ಹತಾ ಪಂದ್ಯದಲ್ಲಿ ಭಾರತ ತಂಡ 1-3ರಿಂದ ಸೋಲುಂಡಿದ್ದು, ಟೂರ್ನಿಯಿಂದ ಹೊರಬಿದ್ದಿದೆ. 

Simply stunning from 🙌

The world No.37 books Croatia's place at the with a dominant 6-0 6-1 victory against Sumit Nagal!

See you in Madrid, Croatia! 🇭🇷 pic.twitter.com/SDc6QOEo7W

— Davis Cup (@DavisCup)

ಕ್ರೊವೇಷಿಯಾ ತಂಡ, ವರ್ಷಾಂತ್ಯದಲ್ಲಿ ನಡೆಯಲಿರುವ ಡೇವಿಡ್‌ ಕಪ್‌ ಫೈನಲ್ಸ್‌ಗೆ ಅರ್ಹತೆ ಪಡೆದಿದೆ. ಶನಿವಾರ ರಾತ್ರಿ ನಡೆದ ರಿವರ್ಸ್‌ ಸಿಂಗಲ್ಸ್‌ನಲ್ಲಿ ಭಾರತದ ಸುಮಿತ್‌ ನಗಾಲ್‌, ತಾರಾ ಟೆನಿಸಿಗ ಮರಿನ್‌ ಸಿಲಿಚ್‌ ಎದುರು 0-6, 1-6 ಸೆಟ್‌ಗಳಲ್ಲಿ ಪರಾಭವ ಹೊಂದುವ ಮೂಲಕ ಭಾರತದ ಫೈನಲ್ಸ್‌ ಆಸೆ ನುಚ್ಚುನೂರಾಯಿತು. 

Tap to resize

Latest Videos

ಡೇವಿಸ್‌ ಕಪ್‌ ಅರ್ಹತಾ ಪಂದ್ಯ; ಭಾರತಕ್ಕೆ ಸೋಲಿನ ಆರಂಭ!

ಇದಕ್ಕೂ ಮುನ್ನ ನಡೆದಿದ್ದ ಡಬಲ್ಸ್‌ ಪಂದ್ಯದಲ್ಲಿ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ ಜೋಡಿ ಮೇಟ್‌ ಪಾವಿಚ್‌ ಹಾಗೂ ಫ್ರಾಂಕೊ ಕುಗೊರ್‌ ವಿರುದ್ಧ 6-3, 6-7, 7-5 ಸೆಟ್‌ಗಳಲ್ಲಿ ಗೆದ್ದು ಫೈನಲ್ಸ್‌ ಆಸೆಯನ್ನು ಜೀವಂತವಾಗಿರಿಸಿತ್ತು.

India are back in it! 💪 and defeat the Croatian duo 6-3 6-7(9) 7-5...

🇭🇷 Croatia 2️⃣-1️⃣ India 🇮🇳 pic.twitter.com/RN5LUkLskh

— Davis Cup (@DavisCup)
click me!