ವಿನೇಶ್ ಫೋಗತ್ ಅರ್ಜಿ ವಜಾಗೊಳ್ಳಲು ಕಾರಣವೇನು? ಪದಕದ ಕೊನೆಯ ಆಸೆಯೊಂದು ನುಚ್ಚು ನೂರಾದ ಹಿಂದಿನ ಕಾರಣ ಬಯಲಾಗಿದೆ. ಕ್ರೀಡಾ ಮಧ್ಯಸ್ಥಿತಿಕೆ ನ್ಯಾಯಾಲಯ ಸುದೀರ್ಘ ತೀರ್ಪು ಪ್ರಕಟಿಸಿದೆ. ಈ ತೀರ್ಪು ಏಷ್ಯಾನೆಟ್ ನ್ಯೂಸ್‌ಗೆ ಲಭ್ಯವಾಗಿದೆ.
ಪ್ಯಾರಿಸ್(ಆ.18) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಪೋಗತ್ ಕೇವಲ 100 ಗ್ರಾಂ ತೂಕದಿಂದ ಫೈನಲ್ ಸುತ್ತಿನ ರಸ್ಲಿಂಗ್ ಹೋರಾಟದಿಂದ ಹೊರಗುಳಿದ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈ ಕುರಿತು ಕ್ರೀಡಾ ಮಧ್ಯಸ್ಥಿತಿಕೆ ಕೋರ್ಟ್ ಮೆಟ್ಟಿಲೇರಿದ್ದ ವಿನೇಶ್ ಪೋಗತ್ ಅರ್ಜಿಯನ್ನು ವಜಾ ಮಾಡಲಾಗಿತ್ತು. ಇದೀಗ ಇದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿದೆ. ಈ ಕುರಿತು ಕ್ರೀಡಾ ನ್ಯಾಲಯ ಪ್ರಕಟಿಸಿದ ತೀರ್ಪಿ ಏಷ್ಯಾನೆಟ್ ನ್ಯೂಸ್‌ಗೆ ಲಭ್ಯವಾಗಿದೆ. ತೂಕದ ನಿಯಮ ಎಲ್ಲಾ ಕ್ರೀಡಾಪಟುಗಳಿಗೆ ಒಂದೆ. ಇಲ್ಲಿ ಯಾವುದೇ ತಾರತಮ್ಯ ಇಲ್ಲ. ತೂಕ ಮಿತಿಯೊಳಗಿರುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕ್ರೀಡಾಪಟು ವಿನೇಶ್ ಪೋಗತ್ ಅನರ್ಹಗೊಳಿಸಿರುವ ನಿರ್ಧಾರವನ್ನು ಕೋರ್ಟ್ ಎತ್ತಿ ಹಿಡಿದಿದೆ.
ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ತೂಕ ಪರೀಕ್ಷೆಯನ್ನು ನಡೆಸುವುದು ನಿಯಮ. ಇದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗತ್ ನಿಗದಿತ ತೂಕ 50.150 ಕೆಜಿಗೆ ಹೆಚ್ಚಾಗಿತ್ತು. ನಿಯಮದ ಪ್ರಕಾರ ವಿನೇಶ್ ಫೋಗತ್ ತೂಕ 50 ಕೆಜಿ ಒಳಗಿರಬೇಕು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನಿಗದಿತಿ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳವಾಗಿದೆ. ತೂಕ ಹೆಚ್ಚಳವಾಗಿರುವ ಕುರಿತು ಯಾವುದೇ ತಕರಾರು ಇಲ್ಲ. ಇಲ್ಲೇ ನಿಯಮ ಉಲ್ಲಂಘನೆಯಾಗಿದೆ. ತೂಕದ ಮಿತಿಯಲ್ಲಿರುವುದು ಕ್ರೀಡಾಪಟು ಜವಾಬ್ದಾರಿಯಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
undefined
ವಿನೇಶ್ ಫೋಗಟ್‌ಗೆ ತವರಲ್ಲಿ ಸಿಕ್ತು ಚಿನ್ನದ ಪದಕ..! ಈ ಪ್ರೀತಿ 1000 ಚಿನ್ನದ ಪದಕಕ್ಕೂ ಮಿಗಿಲು ಎಂದ ಕುಸ್ತಿಪಟು
ಅಂತಿಮ ಸುತ್ತಿಗೆ ವಿನೇಶ್ ಫೋಗತ್ ಅರ್ಹತೆ ಪಡೆದಿಲ್ಲ. ಹೀಗಾಗಿ ಬೆಳ್ಳಿ ಪದಕ ಪುರಸ್ಕಾರಕ್ಕೆ ಕ್ರೀಡಾಪಟು ಅರ್ಹಳಲ್ಲ. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಕ್ರೀಡಾ ಮಧ್ಯಸ್ಥಿತಿ ನ್ಯಾಯಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇಲ್ಲಿ ಆರ್ಟಿಕಲ್ 11ರ ನಿಯಮದ ಉಲ್ಲೇಖಿಸಿದ ಕೋರ್ಟ್, ಕ್ರೀಡಾಪಟು ಫೈನಲ್ ಸುತ್ತು ಆಡಿದ ಬಳಿಕ ಸಲ್ಲಿಸಿರುವ ಮನವಿ ಇದಲ್ಲ. ಕಾರಣ ಕ್ರೀಡಾಪಟು ಫೈನಲ್ ಸುತ್ತಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ಪದಕ ಹಂಚುವಿಕೆ ಮನವಿ ಅಪ್ರಸ್ತುತ. ಈ ಕುರಿತು ಅಂತಾರಾಷ್ಟ್ರೀಯ ಸಮಿತಿ ಪ್ರಕಟಿಸಿದ ನಿರ್ಧಾರ ಸರಿಯಾಗಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ತೀರ್ಪು ನೀಡಿದೆ. 24 ಪುಟಗಳ ತೀರ್ಪಿನಲ್ಲಿ ಘಟನೆಯ ವಿವರ, ಮನವಿ ಹಾಗೂ ಕ್ರೀಡಾ ನಿಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಪ್ಯಾರಿಸ್‌ನಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಕಣ್ಣೀರಿಟ್ಟ ವಿನೇಶ್ ಫೋಗಟ್..!