Asianet Suvarna News Asianet Suvarna News

ವಿನೇಶ್‌ ಫೋಗಟ್‌ಗೆ ತವರಲ್ಲಿ ಸಿಕ್ತು ಚಿನ್ನದ ಪದಕ..! ಈ ಪ್ರೀತಿ 1000 ಚಿನ್ನದ ಪದಕಕ್ಕೂ ಮಿಗಿಲು ಎಂದ ಕುಸ್ತಿಪಟು

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕವಿಲ್ಲದೇ ಬರಿಗೈನಲ್ಲಿ ವಾಪಾಸ್ಸಾಗಿದ್ದು, ತವರಿನಲ್ಲಿ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Wrestler Vinesh Phogat Gets Gold Medal Upon Return To Village From Paris Olympics 2024 kvn
Author
First Published Aug 19, 2024, 10:42 AM IST | Last Updated Aug 19, 2024, 10:42 AM IST

ಬಲಾಲಿ(ಹರ್ಯಾಣ): ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾಗಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಶನಿವಾರ ರಾತ್ರಿ ತಮ್ಮ ತವರು, ಹರ್ಯಾಣದ ಬಲಾಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದ್ದು, ಗ್ರಾಮಸ್ಥರೇ ಚಿನ್ನದ ಪದಕವೊಂದನ್ನು ವಿನೇಶ್ ಕೊರಳಿಗೆ ಹಾಕಿದ್ದಾರೆ.

ಈ ವೇಳೆ ಅವರಿಗೆ ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿನೇಶ್, ಕಾರ್ ರಾಲಿ ಮೂಲಕ 135 ಕಿ.ಮೀ. ದೂರದ ಬಲಾಲಿಗೆ ತೆರಳಿದ್ದಾರೆ.
ಸನ್ಮಾನ ಸಮಾರಂಭದ ವೇಳೆ ಗ್ರಾಮಸ್ಥರು 750 ಕೆ.ಜಿ. ಲಡ್ಡು ಹಂಚಿದ್ದಾರೆ. ಅಲ್ಲದೆ, ಊರಿನ ಜನರು 100, 500, 2000, ನಗದು ಬಹುಮಾನವನ್ನು ವಿನೇಶ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಹಲವರು ನೋಟಿನ ಮಾಲೆ ಹಾಕಿ ವಿನೇಶ್‌ರನ್ನು ಸನ್ಮಾನಿಸಿದ್ದಾರೆ.

ಈ ವೇಳೆ ಭಾವುಕರಾಗಿ ಮಾತನಾಡಿದ ವಿನೇಶ್, 'ನನಗೆ ಅವರು ಚಿನ್ನದ ಪದಕ ಕೊಡಲಿಲ್ಲ. ಆದರೆ ಗ್ರಾಮಸ್ಥರು ನೀಡಿದ್ದಾರೆ. ನನಗೆ ಸಿಗುತ್ತಿರುವ ಪ್ರೀತಿ 1000 ಚಿನ್ನದ ಪದಕಕ್ಕೂ ಮಿಗಿಲು' ಎಂದಿದ್ದಾರೆ.

ಧೋನಿಗಾಗಿ ಐಪಿಎಲ್‌ ರೂಲ್ಸ್ ಅನ್ನೇ ಬದಲಿಸಲು ಮುಂದಾಯ್ತಾ ಬಿಸಿಸಿಐ..? ಇಲ್ಲಿದೆ ಹೊಸ ಅಪ್‌ಡೇಟ್ಸ್

ಬೆಳ್ಳಿ ಪದಕಕ್ಕೆ ವಿನೇಶ್‌ ಹಾಕಿದ್ದ ಅರ್ಜಿ ತಿರಸ್ಕಾರ

ಪ್ಯಾರಿಸ್‌: ಒಲಿಂಪಿಕ್ಸ್‌ ಕುಸ್ತಿ ಫೈನಲ್‌ನಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿಶ್ವ ಒಲಿಂಪಿಕ್‌ ಸಂಸ್ಥೆ ಹಾಗೂ ವಿಶ್ವ ಕುಸ್ತಿ ಫೆಡರೇಶನ್‌ ವಿರುದ್ಧ ಜಾಗತಿಕ ಕ್ರೀಡಾ ನ್ಯಾಯಾಲಯ(ಸಿಎಎಸ್‌)ಕ್ಕೆ ಮೇಲನ್ಮವಿ ಸಲ್ಲಿಸಿದ್ದ ಭಾರತದ ವಿನೇಶ್‌ ಫೋಗಟ್‌ಗೆ ನಿರಾಸೆ ಎದುರಾಗಿದೆ . ತಾವು ನ್ಯಾಯಯುತವಾಗಿ ಫೈನಲ್‌ ಪ್ರವೇಶಿಸಿದ್ದಕ್ಕೆ ತಮಗೆ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಎಎಸ್‌ ತಿರಸ್ಕರಿಸಿತ್ತು. ಇದಾದ ಬಳಿಕ ಆಗಸ್ಟ್ 17ರಂದು ವಿನೇಶ್ ಪ್ಯಾರಿಸ್‌ನಿಂದ ಭಾರತಕ್ಕೆ ಬಂದಿಳಿದರು.

ನೀರಜ್ ಚೋಪ್ರಾ - ಮನು ಭಾಕರ್ ಆಸ್ತಿ ಎಷ್ಟು? ಯಾರ ಬಳಿಯಲ್ಲಿವೆ ಹೆಚ್ಚು ಪದಕಗಳು? ಇಬ್ಬರಲ್ಲಿ ಶ್ರೀಮಂತ ಯಾರು?

ಬೆಂಗಳೂರಿನ ಅಭ‌ಯ್ ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್

ಚೆನ್ನೈ: ಬೆಂಗಳೂರಿನ ಅಭಯ್ ಮೋಹನ್ ಪ್ರತಿಷ್ಠಿತ ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಭಾನುವಾರ ನಡೆದ ಭಾರತ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ 4ನೇ ಹಾಗೂ ಅಂತಿಮ ಸುತ್ತಿನಲ್ಲಿ ಅಭಯ್ ಅಮೋಘ ಪ್ರದರ್ಶನ ತೋರಿದರು. 4 ಸುತ್ತು ಸೇರಿ ಒಟ್ಟು 12 ರೇಸ್
ಗಳ ಪೈಕಿ 16ರ ಅಭಯ್‌, ಸತತ 10 ರೇಸ್ ಗೆದ್ದರು. ಮುಂಬೈನ ಝಹಾನ್ ಹಾಗೂ ರಾಜ್ ಬಖ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
 

Latest Videos
Follow Us:
Download App:
  • android
  • ios