ವಾಷಿಂಗ್ಟನ್(ಏ.15): ಒಲಿಂಪಿಕ್ ಚಾಂಪಿಯನ್, ಮಾಜಿ ಅಥ್ಲೀಟ್
ಉಸೇನ್ ಬೋಲ್ಟ್ 2008ರ ಬೀಜಿಂಗ್ ಒಲಿಂಪಿಕ್ಸ್‌ನ 100 ಮೀ. ಫೈನಲ್ ಫೋಟೋವನ್ನು ಟ್ವೀಟ್ ಮಾಡಿ, ಸಾಮಾಜಿಕ ಅಂತರದ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೊರೋನಾ ವೈರಸ್‌ನಿಂದ ಜಗತ್ತಿನಾದ್ಯಂತ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಭೂಮಿಯ ಮೇಲೆ ಓಡುವ ಅತಿವೇಗದ ಮನುಷ್ಯ ಎಂದು ಕರೆಸಿಕೊಳ್ಳುವ ಜಮೈಕಾದ ಅಥ್ಲೀಟ್ ಜನರಿಗೆ ಸಾಮಾಜಿಕ ಅಂತರದ ಪಾಠ ಹೇಳಿಕೊಟ್ಟಿದ್ದಾರೆ. ತಾವು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂಚಿತವಾಗಿ ಗೆಲುವಿನ ಗೆರೆ ದಾಟುತ್ತಿರುವ ಫೋಟೋ ಇದಾಗಿದ್ದು, ಬೋಲ್ಟ್‌ರ ಟ್ವೀಟ್ ಭಾರೀ ವೈರಲ್ ಆಗಿದೆ.
Social Distancing pic.twitter.com/lDCAsxkOAw
— Usain St. Leo Bolt (@usainbolt)
Self isolation pic.twitter.com/5bwr7CDZIi
— Christopher Clarey (@christophclarey)
Epic Olympic moments 👀 pic.twitter.com/w9jXFwXBok
— TBłαsıu (@sportsfan_pl)
ಮಾಲ್ಟಾ ಗುತ್ತಿಗೆ ಪ್ರಸ್ತಾಪ ತಿರಸ್ಕರಿಸಿದ ಬೋಲ್ಟ್
ಕೊರೋನಾ ವೈರಸ್‌ಗೆ ಇಲ್ಲಿಯವರೆಗೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡರಷ್ಟೇ ಈ ರೋಗದಿಂದ ಬಚಾವಾಗಲು ಸಾಧ್ಯ. ಹೀಗಾಗಿ ಹಲವು ದೇಶಗಳು ಲಾಕ್‌ಡೌನ್ ಘೋಷಣೆ ಮಾಡಿವೆ. ಇನ್ನು ಭಾರತ ಕೂಡಾ ಇದೀಗ ಎರಡನೇ ಹಂತದಲ್ಲಿ 19 ದಿನಗಳ ಲಾಕ್‌ಡೌನ್ ಘೋಷಿಸಿದೆ.
ಲಾಕ್‌ಡೌನ್ ವಿಸ್ತರಣೆ: 2020ರಲ್ಲಿ ಐಪಿಎಲ್ ನಡೆಯಲ್ಲ?
ಆಗಸ್ಟ್ 16, 2008ರಂದು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಕೇವಲ 9.69 ಸೆಕೆಂಡ್‌ನಲ್ಲಿ 100 ಮೀಟರ್ ಗುರಿ ಮುಟ್ಟಿ ವಿಶ್ವದಾಖಲೆ ಬರೆದಿದ್ದರು. ಈ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇದರ ಜತೆಗೆ ಬೋಲ್ಟ್ 200 ಮೀಟರ್ ಹಾಗೂ 4*400 ಮೀಟರ್ ರಿಲೇಯಲ್ಲೂ ಚಿನ್ನದ ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲೂ ಬೋಲ್ಟ್ ಹ್ಯಾಟ್ರಿಕ್ ಸಾಧಿಸಿದ್ದರು.