PM CARES ನಿಧಿಗೆ 4.5 ಲಕ್ಷ ರುಪಾಯಿ ದೇಣಿಗೆ ನೀಡಿದ ವಿಶ್ವನಾಥನ್ ಆನಂದ್‌

By Suvarna NewsFirst Published Apr 13, 2020, 11:13 AM IST
Highlights

ಕೊರೋನಾ ಸಂಕಷ್ಟಕ್ಕೆ ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ನಾಲ್ಕುವರೆ ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ. 

ಚೆನ್ನೈ(ಏ.13): ಕೊರೋನಾ ನಿಗ್ರಹಕ್ಕಾಗಿ ಭಾರತದ ಮಾಜಿ ವಿಶ್ವ ಚಾಂಪಿಯನ್‌ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ ಹಣಕಾಸಿನ ನೆರವು ನೀಡಿದ್ದಾರೆ. 

ಕೊರೋನಾ ಎಫೆಕ್ಟ್: 13ನೇ ಆವೃತ್ತಿ ಐಪಿಎಲ್‌ ಮುಂದೂಡಿಕೆ ಖಚಿತ..!

ಪ್ರಧಾನಮಂತ್ರಿ ಪರಿಹಾರ ನಿಧಿಗೆ 4.5 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ದೇಣಿಗೆ ನೀಡುವುದಾಗಿ ಆನಂದ್‌ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ವಿದಿತ್‌ ಗುಜರಾತಿ, ಹರಿಕೃಷ್ಣ, ಅದಿಬನ್‌, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ ಹಾಗೂ ಚೆಸ್‌ ಸಂಸ್ಥೆ ಕೂಡಾ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ. ಅಂತಾರಾಷ್ಟ್ರೀಯ ಚೆಸ್‌ ಟೂರ್ನಿಯೊಂದರಲ್ಲಿ ಭಾಗವಹಿಸಲು ತೆರಳಿದ್ದ ಆನಂದ್‌, ಲಾಕ್‌ಡೌನ್‌ ಆಗಿದ್ದರಿಂದ ಸದ್ಯ ಜರ್ಮನಿಯಲ್ಲೇ ಸಿಲುಕಿದ್ದಾರೆ.

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ಈಗಾಗಲೇ ಹಲವು ಕ್ರೀಡಾ ತಾರೆಯರು ಕೊರೋನಾ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು PM CARESಗೆ ದೇಣಿಗೆ ನೀಡಿದ್ದಾರೆ. 

"

click me!