ಡ್ರ್ಯಾಗ್‌ ರೇಸ್‌: 2 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಕೊಡಗಿನ ಕುವರ ಹೇಮಂತ್ ಮುದ್ದಪ್ಪ

Suvarna News   | Asianet News
Published : Oct 04, 2021, 09:38 AM IST
ಡ್ರ್ಯಾಗ್‌ ರೇಸ್‌: 2 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಕೊಡಗಿನ ಕುವರ ಹೇಮಂತ್ ಮುದ್ದಪ್ಪ

ಸಾರಾಂಶ

* ಡ್ರ್ಯಾಗ್‌ ರೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ಕೊಡಗಿನ ಹೇಮಂತ್‌ ಮುದ್ದಪ್ಪ * ಮದ್ರಾಸ್‌ ಮೋಟಾರ್‌ ರೇಸ್‌ ಟ್ರ್ಯಾಕ್‌ನಲ್ಲಿ 7.914 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದ ಮುದ್ದಪ್ಪ * 7ನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಕೊಡಗಿನ ಕುವರ

ಚೆನ್ನೈ(ಅ.04): 7 ಬಾರಿ ರಾಷ್ಟ್ರೀಯ ಚಾಂಪಿಯನ್‌ ಹೇಮಂತ್‌ ಮುದ್ದಪ್ಪ (Hemanth Mudappa) ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಡ್ರ್ಯಾಗ್‌ ಚಾಂಪಿಯನ್‌ಶಿಪ್‌ (National Drag Championship) 2ನೇ ಸುತ್ತಿನ (ರಿಬ್ಬನ್‌ ವಿಭಾಗ)ಲ್ಲಿ 2 ಚಿನ್ನ ಗೆಲ್ಲುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. 

ಮದ್ರಾಸ್‌ ಮೋಟಾರ್‌ ರೇಸ್‌ ಟ್ರ್ಯಾಕ್‌ (Madras Motor Race Track) ನಲ್ಲಿ 7.914 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಈ ರೇಸ್‌ (Race) ನಲ್ಲಿ ಹೇಮಂತ್‌ ಮುದ್ದಪ್ಪ ಗರಿಷ್ಠ ಸ್ಪೀಡ್‌ 230 kmph ತಲುಪಿದರು.  31 ವರ್ಷದ ಕೊಡಗು ಮೂಲದ LightningR1 ನಿಕ್‌ ನೇಮ್‌ ಹೊಂದಿರುವ ಹೇಮಂತ್‌ ಮುದ್ದಪ್ಪ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Pandora Paper: ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ದಿಗ್ಗಜರ ಅಕ್ರಮ ಬಯಲು!

ಈ ಕೆಟೆಗೆರೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಕ್ಕೆ ನನಗೆ ತುಂಬಾನೆ ಖುಷಿಯಾಗುತ್ತಿದೆ. 7 ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವುದು ಕೇವಲ ಅದೃಷ್ಟದಿಂದ ಸಾಧ್ಯವಿಲ್ಲ. ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಈ ಸಾಧನೆ ಸಾಧ್ಯವಾಗಿದೆ. ನಾನು ಈ ಚಿನ್ನದ ಪದಕವನ್ನು ವೆಂಟಿಲೇಟರ್‌ನಲ್ಲಿರುವ ನನ್ನ ಸ್ನೇಹಿತ ರಿಯಾಜ್ ಅವರ ತಾಯಿಗೆ ಅರ್ಪಿಸುತ್ತಿದ್ದೇನೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ರಿಯಾಜ್ ಇಲ್ಲಿ ಹಾಜರಿದ್ದಾರ. ಅವರಿಗೆ ಹ್ಯಾಟ್ಸ್‌ ಅಪ್ ಎಂದು ಹೇಮಂತ್‌ ಮುದ್ದಪ್ಪ ಹೇಳಿದ್ದಾರೆ.

ಹೈದರಾಬಾದಿನ ಮೊಹಮ್ಮದ್ ರಿಯಾಜ್‌ 8.058 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಬೆಂಗಳೂರಿನ ಸುಗನ್‌ ಪ್ರಸಾದ್‌ (8.421 ಸೆಕೆಂಡ್) ಕಂಚಿಗೆ ತೃಪ್ತರಾದರು.

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

1954ರಿಂದಲೇ ಮಂತ್ರ ರೇಸಿಂಗ್‌ (Mantra Racing) ಸಾಗುತ್ತಾ ಬಂದಿದೆ. ಹೇಮಂತ್‌ ಮುದ್ದಪ್ಪ ಗೆದ್ದ ರಾಷ್ಟ್ರೀಯ ಪ್ರಶಸ್ತಿಗಳ ರೇಸ್ ಬೈಕ್‌ಗಳಿಗೆ ನಾವೇ ಟ್ಯೂನಿಂಗ್‌ ಮಾಡಿದ್ದೇವೆ. ಇಂದು ಹೇಮಂತ್‌ ಮುದ್ದಪ್ಪ ಮತ್ತೊಂದು ದಾಖಲೆ ನಿರ್ಮಿಸಿದ್ದಕ್ಕೆ ಖುಷಿಯಾಗುತ್ತಿದೆ. ನಾವು ಕೆಲವೊಂದು ಅಪ್‌ಗ್ರೇಡ್‌ಗಳನ್ನು ಮಾಡಿದ್ದೇವೆ. ಆದರೆ ಅವರ ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಮಂತ್ರ ರೇಸಿಂಗ್‌ನ ಶರಣ್ ಪ್ರತಾಪ್ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!