
ಬರ್ಮಿಂಗ್‌ಹ್ಯಾಮ್(ಜು.25): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲವ ನಿರೀಕ್ಷೆಯಲ್ಲಿರುವ ಬಂದಿರುವ ಟೊಕಿಯೊ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲೋವ್ಲಿನಾ ಬೊರ್ಗೊಹೈನ್‌ಗೆ ಒಂದರ ಮೇಲೊಂದರಂತೆ ಕಹಿ ಘಟನೆಗಳೆ ಎದುರಾಗುತ್ತಿದೆ. ಕಳೆದ 8 ದಿನಗಳಿಂದ ಲೋವ್ಲಿನಾ ಅಭ್ಯಾಸ ಮಾಡಲು ಸಾಧ್ಯವಾಗದೇ ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಲೋವ್ಲಿನಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಲೋವ್ಲಿನಾ ಬೊರ್ಗೊಹೈನ್‌ಗೆ ಗಂಭೀರ ಆರೋಪ ಮಾಡಿದ್ದಾರೆ. ತನಗೆ ಮಾನಸಿಕ ಕಿರುಕುಳ ನೀಡಲಾಗಿದೆ. ತನ್ನ ಮಾರ್ಗದರ್ಶಕರನ್ನು ಕಾಮನ್‌ವೆಲ್ತ್ ಗೇಮ್ಸ್ ಪ್ರವೇಶಿಸದಂತೆ ತಡೆಯಲಾಗಿದೆ. ಪದೇ ಪದೇ ಕೋಚ್ ಬದಲಾಯಿಸಿ ಅಭ್ಯಾಸವನ್ನು ಮೊಟಕುಗೊಳಿಸಲಾಗಿದೆ ಎಂದಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಬಾಕ್ಸರ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮಾನಸಿಕ ಕಿರುಕುಳದಿಂದ ಲೊವ್ಲಿನಾ ಬಳಲಿ ಬೆಂಡಾಗಿದ್ದಾರೆ.
ನಾನು ಅತೀವ ದುಃಖದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ನನಗೆ ಮಾನಸಿಕ ಕಿರುಕುಳ ನೀಡಿದ ಘಟನೆಯನ್ನು ನಾನು ಹೇಳಬೇಕಾಗಿದೆ. ನಾನು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಮಾರ್ಗದರ್ಶನ ನೀಡಿದ ಕೋಚ್‌ನ್ನು ತೆಗೆದುಹಾಕಲಾಗಿದೆ. ನನ್ನ ಕೋಚ್ ಪೈಕಿ ಸಂಧ್ಯಾ ಗುರಂಜಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕೋಚ್. ನನ್ನ ಇಬ್ಬರು ಕೋಚ್‌ಗಳನ್ನು ಹೊರಗಿಡಲಾಗಿದೆ. ಇದರಿಂದ ನನಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಪದೇ ಪದೇ ಮನವಿ ಮಾಡಿದ ಬಳಿಕ ಒಬ್ಬರು ಕೋಚ್‌ನ್ನು ಸೇರಿಸಿಕೊಳ್ಳಲಾಗಿದೆ. ನಾನಿಲ್ಲಿ ಹಲವು ರೀತಿಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಕೋಚ್ ಸಂಧ್ಯಾ ಅವರನ್ನು ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗಿಡಲಾಗಿದೆ. ಮತ್ತೊಬ್ಬರು ಕೋಚ್‌ನ್ನು ಮರಳಿ ಕಳುಹಿಸಲಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ನಾನು ಬಾಕ್ಸಿಂಗ್ ಮೇಲೆ ಹೇಗೆ ಗಮನ ಕೇಂದ್ರೀಕರಿಸಲಿ? ನನ್ನ ಕೊನೆಯ ವಿಶ್ವಚಾಂಪಿಯನ್‌ಶಿಪ್ ಕೂಡ ಹಾಳಾಗುತ್ತಿದೆ. ನಾನು ಕಾಮನ್‌ವೆಲ್ತ್ ಗೇಮ್ಸ್‌ನ್ನು ರಾಜಕೀಯ ಕಾರಣಕ್ಕೆ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.ಮಾನಸಿಕ ಕಿರುಕುಳ, ಹಿಂಸೆ ನಡುವೆ ಪದಕ ಗೆಲ್ಲಬೇಕೆಂದು ನಿರ್ಧರಿಸಿದ್ದೇನೆ. ಈ ಮೂಲಕ ಭಾರತಕ್ಕೆ ಪದಕ ತರುತ್ತೇನೆ ಎಂದು ಲೋವ್ಲಿನಾ ಹೇಳಿದ್ದಾರೆ.
;
ಟೋಕಿಯೋ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದು ಬೀಗಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದ ಲೊವ್ಲಿನಾ
ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 69 ಕೆ.ಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 3ನೇ ಬಾಕ್ಸರ್ ಎನ್ನುವ ಹಿರಿಮೆಗೆ ಲವ್ಲೀನಾ ಪಾತ್ರರಾಗಿದ್ದರು. ಅಲ್ಲದೇ 9 ವರ್ಷಗಳ ಬಳಿಕ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಪದಕ ದೊರೆತಿದೆ. 2008ರಲ್ಲಿ ವಿಜೇಂದರ್ ಸಿಂಗ್ ಹಾಗೂ 2012ರಲ್ಲಿ ಮೇರಿ ಕೋಮ್ ಕೂಡ ಕಂಚಿನ ಪದಕ ಜಯಿಸಿದ್ದರು. ಫೈನಲ್ ಪಂದ್ಯ ಮುಕ್ತಾಯಗೊಂಡ ಬಳಿಕ ಲವ್ಲೀನಾಗೆ ಪದಕ ಪ್ರದಾನ ಮಾಡಲಾಗುತ್ತದೆ.
ಲವ್ಲೀನಾ ಬೊರ್ಗೊಹೈನ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಐಬಿಎ)ಯ ಅಥ್ಲೀಟ್ಸ್ ಸಮಿತಿಯ ಮುಖ್ಯಸ್ಥೆಯಾಗಿದ್ದಾರೆ. ಇಂತಹ ಕ್ರೀಡಾಪಟು ಇದೀಗ ಅಸಾಹಾಯಕಾರಿಗ ಸಾಮಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಳ್ಳುವಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.