BWF ರ‍್ಯಾಂಕಿಂಗ್‌: ಅಗ್ರ 20ಯೊಳಗೆ ಸಾತ್ವಿಕ್‌, ಅಶ್ವಿನ್‌ ಪೊನ್ನಪ್ಪಗೆ ಸ್ಥಾನ

Published : Feb 03, 2021, 10:23 AM IST
BWF ರ‍್ಯಾಂಕಿಂಗ್‌: ಅಗ್ರ 20ಯೊಳಗೆ ಸಾತ್ವಿಕ್‌, ಅಶ್ವಿನ್‌ ಪೊನ್ನಪ್ಪಗೆ ಸ್ಥಾನ

ಸಾರಾಂಶ

ಭಾರತದ ತಾರಾ ಬ್ಯಾಡ್ಮಿಂಟನ್‌ ಪಟುಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಅಶ್ವಿನಿ ಪೊನ್ನಪ್ಪ ನೂತನವಾಗಿ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಫೆ.03): ಭಾರತದ ಮಿಶ್ರ ಡಬಲ್ಸ್‌ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಅಶ್ವಿನಿ ಪೊನ್ನಪ್ಪ, ಮಂಗಳವಾರ ನೂತನವಾಗಿ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ. 

ಥಾಯ್ಲೆಂಡ್‌ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ್ದ ಸಾತ್ವಿಕ್‌-ಅಶ್ವಿನಿ ಜೋಡಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 16 ಸ್ಥಾನ ಜಿಗಿತ ಕಂಡು 19ನೇ ಸ್ಥಾನಕ್ಕೇರಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌, ಚಿರಾಗ್‌ ಶೆಟ್ಟಿ ಜೋಡಿ 10ನೇ ಸ್ಥಾನ ಪಡೆದಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 7, ಸೈನಾ 19ನೇ ಸ್ಥಾನದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ 13, ಸಮೀರ್‌ ವರ್ಮಾ 27ನೇ ಸ್ಥಾನ ಪಡೆದಿದ್ದಾರೆ.

ವಿಶ್ವ ಟೂರ್‌ ಫೈನಲ್ಸ್: ಸಿಂಧುಗೆ ಗೆಲುವು, ಶ್ರೀಕಾಂತ್‌ಗೆ ಸೋಲು

ಒಟ್ಟಾರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನಿನ ಕೆಂಟೋ ಮೊಮಟ ಮೊದಲ ಸ್ಥಾನ ಪಡೆದಿದ್ದರೆ, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲೆನ್‌ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಮೊದಲ ಸ್ಥಾನ ಉಳಿಸಿಕೊಂಡಿದ್ದರೆ, ಚೀನಾದ ಚೆನ್‌ ಯು ಫೀ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಸ್ಪೇನ್‌ನ ಕರೋಲಿನಾ ಮರೀನ್‌, ಜಪಾನಿನ ನಜೋಮಿ ಒಕೋಹರ, ಅಕಾನೆ ಯಮಗುಚಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

34 ವಾರಗಳ ಗರ್ಭಿಣಿ.. ತುಂಬು ಬಸುರಿಯಾದರೂ 7 ವಿಶ್ವ ಮ್ಯಾರಥಾನ್ ಓಡಿ ಮುಗಿಸಿದ 38ರ ಮಹಿಳೆ!
ವಿಶ್ವಕಪ್ ಇಲ್ಲದೇ ವೃತ್ತಿಜೀವನಕ್ಕೆ ವಿದಾಯ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೋ..! ಕಳಚಿತು ಫುಟ್ಬಾಲ್‌ನ ಮತ್ತೊಂದು ಕೊಂಡಿ