ಫೆಬ್ರವರಿ 01ರಿಂದ ಸಾರ್ವಜನಿಕರಿಗೆ ಈಜುಕೊಳ ಮುಕ್ತ..!

By Kannadaprabha News  |  First Published Jan 31, 2021, 9:36 AM IST

ಕೇವಲ ಕ್ರೀಡಾಕೂಟಗಳಿಗೆ ಸೀಮಿತವಾಗಿದ್ದ ಈಜುಕೊಳ ಫೆಬ್ರವರಿ 01ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ನವದೆಹಲಿ(ಜ.31): ಕೊರೋನಾ ಹಿನ್ನೆಲೆಯಲ್ಲಿ ಈಜುಕೊಳಗಳ ಬಳಕೆಗೆ ವಿಧಿಸಿದ್ದ ನಿರ್ಬಂಧಗಳಿಗೆ ಇನ್ನಷ್ಟು ವಿನಾಯಿತಿ ನೀಡಲಾಗಿದೆ. ಕ್ರೀಡಾಪಟುಗಳ ಬಳಕೆಗೆ ಮಾತ್ರ ಸೀಮಿತವಾಗಿದ್ದ ಈಜುಕೊಳಗಳನ್ನು ಈಗ ಸಾರ್ವಜನಿಕ ಬಳಕೆಗೂ ಮುಕ್ತಗೊಳಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಫೆ.1ರಿಂದ ಜಾರಿಗೆ ಬರಲಿದೆ.

Latest Videos

undefined

ಇದರಂತೆ ಈಜುಕೊಳದಲ್ಲಿ ಒಂದು ಸಾಲು ಬಿಟ್ಟು ಇನ್ನೊಂದು ಸಾಲಿನಲ್ಲಿ ಈಜಬೇಕು. ಈಜುಕೊಳದ ಆವರಣದಲ್ಲಿ ಈಜುಪಟುಗಳು 6 ಅಡಿ ಅಂತರ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಈಜುಕೊಳದಲ್ಲಿ ಉಗುಳುವುದು ಹಾಗೂ ಸೀನುವುದನ್ನು ಮಾಡುವಂತೆ ಇಲ್ಲ. ಒಂದು ವೇಳೆ ಯಾರಿಗಾದರೂ ಕೊರೋನಾ ವೈರಸ್‌ನ ಲಕ್ಷಣಗಳು ಇದ್ದರೆ ಅವರು ಈಜುಕೊಳವನ್ನು ಬಳಕೆ ಮಾಡಬಾರದು. ಅದೇ ರೀತಿ ಈಜುಕೊಳದ ಹೊರಗೆ ಇದ್ದಾಗ ಸ್ಯಾನಿಟೈಸರ್‌ ಅಥವಾ ಸೋಪ್‌ನಿಂದ ಕೈತೊಳೆಯುತ್ತಿರಬೇಕು. ಈಜುವಾಗ ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿ ಮಾಸ್ಕ್‌ ಧರಿಸಬೇಕು. ಮೈ ಒರೆಸುವ ಬಟ್ಟೆ ಹಾಗೂ ಟವಲ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.

ಹುಬ್ಬ​ಳ್ಳಿ​ಯ​ಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌

65 ವರ್ಷ ಮೇಲ್ಪಟ್ಟ ಕೋಚ್‌ಗಳು ಹಾಗೂ ಸಭಿಕರು, ಗರ್ಭಿಣಿಯರು, 10 ವರ್ಷದ ಒಳಗಿನ ಮಕ್ಕಳು ಈಜುಕೊಳಕ್ಕೆ ಇಳಿಯವಂತೆ ಇಲ್ಲ. ಈಜುಕೊಳಗಳನ್ನು ಬಳಕೆ ಮಾಡುವುದಕ್ಕೂ ಮುನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಶೇ.1ರಷ್ಟು ಸೋಡಿಯಂ ಹೈಪೊಕ್ಲೋರೈಟ್‌ಗಳನ್ನು ಬಳಸಿ ಸ್ವಚ್ಛಗೊಳಿಸಬೇಕು. ಈ ವೇಳೆ ಸ್ವಚ್ಛತಾ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಧರಿಸತಕ್ಕದ್ದು. ಕೊರೋನಾ ಪ್ರಕರಣಗಳು ಹೆಚ್ಚಿರುವ ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಈಜುಕೊಳ ಬಳಕೆಗೆ ಹಿಂದಿನಂತೆಯೇ ನಿಷೇಧ ಮುಂದುವರಿಯಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
 

click me!