ಮತೊಬ್ಬ ಕ್ರೀಡಾಪಟು ಬಾಳಲ್ಲಿ ಬಿರುಗಾಳಿ, ವಿಚ್ಛೇದನದತ್ತ ಬಾಕ್ಸರ್ ಮೇರಿ ಕೋಮ್

Published : Apr 07, 2025, 05:01 PM ISTUpdated : Apr 11, 2025, 10:00 AM IST
ಮತೊಬ್ಬ ಕ್ರೀಡಾಪಟು ಬಾಳಲ್ಲಿ ಬಿರುಗಾಳಿ, ವಿಚ್ಛೇದನದತ್ತ ಬಾಕ್ಸರ್ ಮೇರಿ ಕೋಮ್

ಸಾರಾಂಶ

ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್ ಸೇರಿದಂತೆ ಕೆಲ ಕ್ರೀಡಾಪಟುಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇದರ ಬೆನ್ನಲ್ಲೇ ದೇಶದ ಹೆಮ್ಮೆಯ ಕುಸ್ತಿಪಟು ಮೇರಿ ಕೋಮ್ ವಿಚ್ಚೇದನತ್ತ ಸಾಗಿದ್ದಾರೆ. ಪ್ರೀತಿಸಿ ಮದುವೆಯಾದ ಇವರ ಬಾಳಲ್ಲಿ ಏನಾಯ್ತು?

ಇಂಫಾಲ(ಏ.07) ಬಾಲಿವುಡ್ ಸೇರಿದಂತೆ ಸಿನಿ ಸೆಲೆಬ್ರೆಟಿಗಳಲ್ಲಿ ಬಾಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ ವಿಚ್ಚೇದನ ಎಲ್ಲೆಡೆ ವ್ಯಾಪಿಸಿದೆ. ಇದು ಕ್ರಿಕೆಟ್ ಸೇರಿದಂತೆ ಬಹುತೇಕ ಸೆಲೆಬ್ರೆಟಿಗಳ ಬಾಳಿಗೆ ಕೊಳ್ಳಿ ಇಡುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಯಜುವೇಂದ್ರ ಚಹಾಲ್ ಸೇರಿದಂತೆ ಪ್ರಮುಖರ ದಾಂಪತ್ಯ ಜೀವನ ಬಿರುಕು ಬಿಟ್ಟು ಬೇರೆ ಬೇರೆಯಾಗಿದ್ದಾರೆ. ಇದೀಗ ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಮೇರಿ ಕೋಮ್ ವೈವಾಹಿಕ ಬದುಕು ವಿಚ್ಚೇದನತ್ತ ಸಾಗಿದೆ. ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. 

ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ಇದೀಗ ಬೇರೆ ಬೇರೆಯಾಗಿ ನೆಲೆಸಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡ ಹಿನ್ನಲೆಯಲ್ಲಿ ಈಗಾಗಲೇ ಇಬ್ಬರ ಬೇರೆ ಬೇರೆಯಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೇರಿ ಕೋಮ್ ತನ್ನ ನಾಲ್ವರು ಮಕ್ಕಳೊಂದಿಗೆ ಫರೀದಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ. ಇತ್ತ ಪತಿ ಕೆ ಒನ್ಲರ್ ದೆಹಲಿಯಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ. ಮಾತುಕತೆ, ಸಂಧಾನ ಎಲ್ಲಾ ಪ್ರಕ್ರಿಯೆ ಅಂತ್ಯಗೊಂಡು ಇಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಯಜುವೇಂದ್ರ ಚಹಾಲ್‌ನಿಂದ ವಿಚ್ಚೇದನ ಪಡೆದ ಬೆನ್ನಲ್ಲೇ ಧನಶ್ರೀ ವರ್ಮಾಗೆ ಜಾಕ್‌ಪಾಟ್

ವಿಚ್ಚೇದನಕ್ಕೆ ಕಾರಣವೇನು?
ಮೇರಿ ಕೋಮ್ ಹಾಗೂ ಕೆ ಒನ್ಲರ್ ಪ್ರೀತಿಸಿ ಮದುವೆಯಾದ ಜೋಡಿ. ಇಬ್ಬರಿಗೆ ನಾಲ್ವರು ಮಕ್ಕಳಿದ್ದಾರೆ. ಮೇರಿ ಕೋಮ್ ಬಾಕ್ಸಿಂಗ್ ಪಯಣಕ್ಕ ನೀರೆರದ ಪತಿ ಕೆ ಒನ್ಲರ್ ಪ್ರತಿ ಸಾಧನೆಯಲ್ಲೂ ಕೈಜೋಡಿಸಿದ್ದರು. ಈ ಅನ್ಯೋನ್ಯ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ಕೆಲ ವರ್ಷಗಳೇ ಉರುಳಿದೆ. ಪ್ರಮುಖ 2022ರ ಬಳಿಕ ಇವರ ಸಂಸಾರದಲ್ಲಿ ಮನಸ್ತಾಪಗಳೇ ಹೆಚ್ಚಾಗಿತ್ತು ಅನ್ನೋದು ಬಯಲಾಗಿದೆ.  ಪತಿ ಕೆ ಒನ್ಲರ್ ಸಾಹಸದಿಂದ 2 ರಿಂದ 3 ಕೋಟಿ ರೂಪಾಯಿ ನಷ್ಟವಾಗಿದೆ. ಇಷ್ಟೇ ಅಲ್ಲ ಪತಿ ಹೆಚ್ಚಿನ ಸಮಯವನ್ನು ರಾಜಕೀಯ ಎಂದು ಕಳೆಯಲು ಆರಂಭಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇವೆಲ್ಲಾ ಸಮಸ್ಯೆಗಳು ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.

ಮಣಿಪುರ ಚುನಾವಣೆಯಿಂದ ಸಂಸಾರದಲ್ಲಿ ಬಿರುಕು
ಮೇರಿ ಕೋಮ್ ಬಾಕ್ಸಿಂಗ್ ಕರಿಯರ್‌ಗೆ ಪತಿ ಕೆ ಒನ್ಲರ್ ಸಂಪೂರ್ಣ ನೆರವು ನೀಡಿದ್ದರು. ಪತ್ನಿ ಬಾಕ್ಸಿಂಗ್ ರಿಂಗ್‌ನಿಂದ ದೂರವಾಗುತ್ತಿದ್ದಂತೆ ಇತ್ತ ಪತಿ ರಾಜಕೀಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರೆ. 2022ರಲ್ಲಿ ಮಣಿಪುರ ಚುನಾವಣೆಗೆ ಕೆ ಒನ್ಲರ್ ಧುಮುಕಿದ್ದಾರೆ. ಇದು ಮೇರಿ ಕೋಮ್ ಮಾತಿಗೆ ವಿರುದ್ದವಾಗಿತ್ತು. ಮಣಿಪುರದ ರಾಜಕೀಯ ಸ್ಥಿತಿಗತಿ ಸೂಕ್ತವಾಗಿಲ್ಲ. ಇಷ್ಟೇ ಅಲ್ಲ ರಾಜಕೀಯ ನಮಗೆ ಬೇಡ. ರಾಜಕೀಯದಿಂದ ಹೊರಗಿರುವ ನಮಗೆ ಒಗ್ಗುವುದಿಲ್ಲ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಲಿದೆ ಎಂದು ಮೇರಿ ಕೋಮ್ ಸೂಚಿಸಿದ್ದರು. ಆದರೆ ಪತ್ನಿಯ ಮಾತು ಧಿಕ್ಕಿರಿಸಿದ ಕೆ ಒನ್ಲರ್ ಮಣಿಪುರ ವಿಧಾನಸಭೆ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಆದರೆ ಚುನಾವಣೆಗೆಗಾಗಿ ಬರೋಬ್ಬರಿ 2 ರಿಂದ 3 ಕೋಟಿ ರೂಪಾಯಿ ಖರ್ಚು ಮಾಡಿದ್ದರು.

ಮೇರಿ ಕೋಮ್ ಬದುಕಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಮತ್ತೊಂದೆಡೆ ಪತಿ ಕೆ ಒನ್ಲರ್ ರಾಜಕೀಯ ಎಂದು ಹೆಚ್ಚಿನ ಸಮಯ ಕಳೆಯುತ್ತಿದ್ದರು. ಕುಟುಂಬಕ್ಕಾಗಿ, ಮಕ್ಕಳಿಗಾಗಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಿಲ್ಲ. ಇದು ಮೇರಿ ಕೋಮ್ ಆಕ್ರೋಶಕ್ಕೆ ಕಾರಣವಾಗಿತ್ತು.ಈ ಎಲ್ಲಾ ಬೆಳವಣಿಗೆಯಿಂದ ಮೇರಿ ಕೋಮ್ ಹಾಗೂ ಪತಿ ನಡುವೆ ಮನಸ್ತಾಪಗಳು ಹೆಚ್ಚಾಗಿತ್ತು. 2022ರಿಂದ ಸತತವಾಗಿ ಮನಸ್ತಾಪಗಳು ಎದುರಾಗಿತ್ತು. ಮೂಲಗಳ ಪ್ರಕಾರ 2024ರಿಂ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. 

ವಿಚ್ಚೇದನ ಪ್ರಕ್ರಿಯೆ
ಮೂಲಗಳ ಪ್ರಕಾರ ಮೇರಿ ಕೋಮ್ ಹಾಗೂ ಕೆ ಒನ್ಲರ್ ಇಬ್ಬರು ಬೇರೇ ಬೆರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಧರೆ ಈ ಜೋಡಿ ಕೌಟುಂಬಿಕ ನ್ಯಾಯಾಲದ ಮೆಟ್ಟಿಲು ಹತ್ತಿಲ್ಲ. ಅಧಿಕೃತವಾಗಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಕುರಿತು ಕಾನೂನು ರೀತಿಯ ಚರ್ಚೆ ನಡೆಯುತ್ತಿದು ಎಂದ ಹೇಳಲಾಗುತ್ತಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!
ರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು