ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ನವದೆಹಲಿ(ಫೆ.22): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳ ಪದಕದ ಬೇಟೆ ಮುಂದುವರಿದಿದೆ. ಭಾರತದ ತಾರಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗಾಟ್, ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: 3 ಚಿನ್ನ ಗೆದ್ದ ಭಾರತ ತಂಡ
ಕೂಟದ 4ನೇ ದಿನ ಭಾರತ 1 ಬೆಳ್ಳಿ, 3 ಕಂಚಿನ ಪದಕ ಗೆದ್ದುಕೊಂಡಿತು. ಮಹಿಳಾ ವಿಭಾಗದಲ್ಲಿ ಭಾರತ 3 ಚಿನ್ನ, 2 ಬೆಳ್ಳಿ, 3 ಕಂಚು ಜಯಿಸಿದೆ. ಒಟ್ಟಾರೆ 4 ಚಿನ್ನ, 2 ಬೆಳ್ಳಿ 7 ಕಂಚಿನೊಂದಿಗೆ ಭಾರತ 13 ಪದಕ ಗೆದ್ದಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಏಷ್ಯನ್ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್ ಕುಮಾರ್!
65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸೋತ ಸಾಕ್ಷಿ ಬೆಳ್ಳಿ ಗೆದ್ದರೆ, 53 ಕೆ.ಜಿ. ವಿಭಾಗದಲ್ಲಿ ವಿನೇಶ್ ಕಂಚು ಜಯಿಸಿದರು. 57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್, 72 ಕೆ.ಜಿ. ವಿಭಾಗದಲ್ಲಿ ಗುರುಶರಣ್‌ಪ್ರೀತ್ ಕೌರ್ ಕಂಚಿನ ಪದಕ ಗೆದ್ದರು. ಮಹಿಳಾ ವಿಭಾಗದ ಸ್ಪರ್ಧೆಗಳು ಮುಕ್ತಾಯವಾಗಿದ್ದು ಶನಿವಾರದಿಂದ ಪುರುಷರ ಫ್ರೀಸ್ಟೈಲ್ ಸ್ಪರ್ಧೆಗಳು ಆರಂಭವಾಗಲಿವೆ.
ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್