ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಮುತ್ತಿಟ್ಟ ರವಿ

By Kannadaprabha NewsFirst Published Feb 23, 2020, 11:41 AM IST
Highlights

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ದೇಶದ ಕುಸ್ತಿಪಟುಗಳು ಪದಕಗಳ ಬೇಟೆ ಮುಂದುವರೆಸಿದ್ದಾರೆ. ರವಿ ಚಿನ್ನ ಗೆದ್ದರೆ, ಭಜರಂಗ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ನವದೆಹಲಿ(ಫೆ.23): ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಶನಿವಾರದಿಂದ ಆರಂಭಗೊಂಡ ಪುರುಷರ ಫ್ರೀ ಸ್ಟೈಲ್‌ ವಿಭಾಗದಲ್ಲಿ ಭಾರತ 1 ಚಿನ್ನ, 3 ಬೆಳ್ಳಿ ಪದಕಗಳನ್ನು ಜಯಿಸಿತು. 

ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: 3 ಚಿನ್ನ ಗೆದ್ದ ಭಾರತ ತಂಡ

57 ಕೆ.ಜಿ ವಿಭಾಗದ ಫೈನಲ್‌ನಲ್ಲಿ ರವಿ ದಹಿಯಾ, ತಜಕಿಸ್ತಾನದ ಹಿಕ್ಮತುಲ್ಲೊ ವಹಿಡೊವ್‌ ವಿರುದ್ಧ 10-0 ಅಂತರದಲ್ಲಿ ಗೆದ್ದ ಚಿನ್ನಕ್ಕೆ ಮುತ್ತಿಟ್ಟರು. ಫೈನಲ್‌ ಪ್ರವೇಶಿಸಿದ್ದ ಇನ್ನು ಮೂವರು ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

ಏಷ್ಯನ್‌ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್‌ಗೆ ಕಂಚು

65 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಭಜರಂಗ್‌ ಪೂನಿಯಾ, ಜಪಾನ್‌ನ ಟಕುಟೊ ವಿರುದ್ಧ ಸೋತರೆ, 79 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಗೌರವ್‌ ಬಲಿಯಾನ್‌ ಕಜಕಸ್ತಾನದ ಅರ್ಸಾಲನ್‌ ವಿರುದ್ಧ ಪರಾಭವಗೊಂಡರು. 97 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸತ್ಯವ್ರತ್‌ ಕಡಿಯಾನ್‌ ಇರಾನ್‌ನ ಮೊಹಮದ್‌ ಶಫಿಗೆ ಶರಣಾದರು. 70 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದಲ್ಲಿ ನವೀನ್‌ ಸೋಲುಂಡು ನಿರಾಸೆ ಅನುಭವಿಸಿದರು.

click me!