ಸ್ಪೇನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ಹೋರಾಟ ಅಂತ್ಯವಾಗಿದೆ. ಇನ್ನು ಅಜಯ್ ಜಯರಾಮ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಬಾರ್ಸಿಲೋನಾ(ಫೆ.22): ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ 3ನೇ ದಿನವಾದ ಶುಕ್ರವಾರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಮಿಶ್ರಫಲ ದೊರಕಿದೆ. ಸೈನಾ ಕೂಟದಿಂದ ಹೊರಬಿದ್ದರೆ, ಅಜಯ್ ಉಪಾಂತ್ಯಕ್ಕೆ ಲಗ್ಗೆಯಿಟ್ಟಿದ್ದಾರೆ.
ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸೈನಾ-ಸಮೀರ್ ಲಗ್ಗೆ
ಪ್ರಶಸ್ತಿಯ ಆಸೆ ಮೂಡಿಸಿದ್ದ ಸೈನಾ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಬುಸ್ನಾನ್ ವಿರುದ್ಧ 20-22, 19-21 ಗೇಮ್‌ಗಳಲ್ಲಿ ಮುಗ್ಗರಿಸಿದರು.
Barcelona Spain Masters 2020
WS - Quarter final
22 21 🇹🇭Busanan ONGBAMRUNGPHAN🏅
20 19 🇮🇳Saina NEHWAL
🕗 in 45 minutes
https://t.co/4CU0K4VI7V
ಇನ್ನು ಪುರುಷರ ಸಿಂಗಲ್ಸ್ ಎಂಟರಘಟ್ಟದಲ್ಲಿ ಅಜಯ್ ಜಯರಾಮ್ ಭರ್ಜರಿ ಗೆಲುವು ದಾಖಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಅಜಯ್, ಫ್ರಾನ್ಸ್‌ನ ಥಾಮಸ್ ರೌಕ್ಸೆಲ್ ಎದುರು 21-14, 21-15 ಗೇಮ್‌ಗಳಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.